ಹಕ್ಕಿ ಚೆಲ್ಲಿದ ಬೀಜ

ಹಕ್ಕಿ ಚೆಲ್ಲಿದ ಬೀಜ

ಈಗ ತಾನೇ ಸುಧಾದಲ್ಲಿ ಬಂದಿದ್ದ ಈ ಶೀರ್ಷಿಕೆಯಿರುವ ಕಥೆ ಓದಿದೆ. ನಾನು ಸಂಪದಿಗಳಾದಂದಿನಿಂದ ಒಂದು ರೀತಿಯ ಚಟ ಹಿಡಿದಿದೆ. ಹಗಲು ರಾತ್ರಿ ಎನ್ನದೆ ಯಾವಾಗಲೂ ಏನೂ ಬರೆಯಬೇಕೆಂದು ಯೋಚಿಸುತ್ತೇನೆ. (ಸಂಪದಿಗರಿಗೆ ತೊಂದರೆ ಪಾಪ :-)). ಈ ಪದವನ್ನು ನೋಡಿದಾಗ ನನಗನ್ನಿಸಿದ್ದು ಹೀಗೆ.

ನಾವು ಸಂಪದಿಗರೆಲ್ಲರೂ ಹಕ್ಕಿಗಳು. ಬೀಜಗಳನ್ನು ಚೆಲ್ಲುತ್ತೇವೆ (ವಿಚಾರಗಳನ್ನು ಬಿತ್ತುತ್ತೇವೆ). ಅದಕ್ಕೆ ಇನ್ನಾರೋ ನೀರು ಉಣಿಸುತ್ತಾರೆ. ಮತ್ತಾರೋ ಜೀವ ಕೊಡುತ್ತಾರೆ. ತೋಟದ ಮಾಲೀಕ ಅದು ಹೀಗೆ ಬೆಳೆಯಬೇಕೆಂದು ತಾಕೀತು ಮಾಡುತ್ತಾನೆ. (ಕ್ಷಮೆಯಿರಲಿ - ನಾಡಿಗ್, ಖಂಡಿತವಾಗಲೂ ವ್ಯಂಗ್ಯವಲ್ಲ). ಬೆಳೆದು ಮರವಾಗಿ ಫಲಗಳನ್ನು ನಾವೆಲ್ಲರೂ ಆನಂದದಿಂದ ಹಂಚಿಕೊಳ್ಳುತ್ತೇವೆ. ಅಲ್ಲವೇ!

ಏನೋ ತೋಚಿದ್ದು ಬರೆದೆ. ತಪ್ಪುಗಳಿದ್ರೆ ಕ್ಷಮಿಸಿ. ಒಂದು ಗಳಿಗೆಯೂ ಸಂಪದದ ಸಂಪರ್ಕ ಕಡಿದುಹೋಗುವುದನ್ನು ಕನಸ್ಸು ಮನಸ್ಸಿನಲ್ಲಿಯೂ ನೆನಸಿಕೊಳ್ಳಲಾರೆ.

Rating
No votes yet

Comments