ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?
-ಕೇಳೇ ಇರುತ್ತೀರಾ.
ಆದ್ರೆ, ನಾನು ಹಾಡಿದ್ದು!?
-ಹೇಗೆ ಕೇಳಲು ಸಾಧ್ಯ?
ಮುಂದಿನ ಮೀಟಿಂಗ್‌ನಲ್ಲಿ (ನಿಮ್ಮೆಲ್ಲರ ಕೋರಿಕೆ ಮೇರೆಗೆ) ಹಾಡುವೆ.:)

ನಾನು ಸ್ಕೂಲಲ್ಲಿರುವಾಗ ಈ ಹಾಡು ಹಾಡಲು-ಸುರುಮಾಡಿದರೆ..
ಚಪ್ಪಾಳೆಯೋ ಚಪ್ಪಾಳೆ!
ಒನ್ಸ್ ಮೋರ್‌ಗಳ ಸುರಿಮಳೆ!!
‘ಹ’ವನ್ನು ಉಚ್ಚರಿಸಲಾಗದ ಕೆಲವೇ ಕೆಲವು ಗಿಫ್ಟೆಡ್ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂಬ ಎಮ್ಮೆ ನನಗಿದೆ.
ನಿಮಗೆಲ್ಲಾ ‘ಹರಿ’, ನನಗಾತ ‘ಅರಿ’. (ನಮ್ಮ hpn ಅಲ್ಲ)
ನಾನು ಅನುಮಾನ ಭಕ್ತ. ಅನುಮಾನವೇ ಬೇಡ!
ನನ್ನ ಕಶ್ಟ ನೋಡಲಾರದೇ ಮಹೇಶ ತನ್ನ ಹೆಸರು ಮಾಯ್ಸ ಎಂದು ಬದಲಾಯಿಸಿದ.

ಆದರೆ ‘ಋ’, ‘ಷ’ ದ ಬದಲು ‘ಹ’ಕಾರವನ್ನು ತೆಗೆಯಿರಿ ಎಂಬ ನನ್ನ ಕೋರಿಕೆಯನ್ನ ಯಾರೂ ಗಮನಿಸುತ್ತಿಲ್ಲ. ಬದಲಿಗೆ ಒಬ್ಬರು ಪೂರ್ತಿ ಹಕಾರದಿಂದ ಆರಂಭವಾಗುವ
ಶಬ್ದಗಳನ್ನು ಉಪಯೋಗಿಸಿ ಕತೆನೇ ಬರೆದಿದ್ದಾರೆ! ‘೫೨’ ಹಾಂ.. ಐ ವ ತ್ತೆ ರ ಡು ಅಕ್ಷರಗಳಲ್ಲಿ ಬೇರೆ ಅಕ್ಷರವೇ ಸಿಗಲಿಲ್ಲವಾ? :(

ನೀವು ಎಲ್ಲಿ ಕೆಲಸ ಮಾಡುತ್ತೀರಿ? ಎಂದು ಕೇಳಿದಾಗ ನಾನು ಕನ್ನಡ ಪ್ರೇಮಿಯಾದರೂ ಇಂಗ್ಲೀಷಲ್ಲೇ ಉತ್ತರಿಸುವುದು. ಯಾಕೆಂದರೆ ‘ಅವಮಾನ ಇಲಾಖೆ’ ಎಂದು ಅಚ್ಚಕನ್ನಡದಲ್ಲಿ ಹೇಳಿದರೆ, ‘ಸ್ವಲ್ಪ ಮಟ್ಟಿಗೆ ಸರಿ’ಎಂದು ನಗುತ್ತಾರೆ ಕುಹಕಿಗಳು.
ನಮ್ಮ ಇಲಾಖೆ ಎಂದರೆ ಎಲ್ಲರಿಗೂ ಸಸಾರ.
ಏನೋ ನಾವು ಹೇಳಿದ ‘ಭಾರೀ ಮಳೆ’ ಸ್ವಲ್ಪ (೨-೩ ತಿಂಗಳು) ತಡವಾಗಿ ಬರಬಹುದು.
ಕೆಲವೊಮ್ಮೆ ನಿಜವಾಗುವುದು ಅವರ ಗಮನಕ್ಕೇ ಬರುವುದಿಲ್ಲ- ಮೊನ್ನೆ ನ್ಯೂಜಿಲ್ಯಾಂಡ್-ಭಾರತದ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದೆವು. ಅಲ್ಲಿನ ಆಕಾಶ ನೋಡಿ ತಪ್ಪಿ ‘ಮೋಡ
ಕವಿದ ವಾತಾವರಣ, ಅಲ್ಲಲ್ಲಿ ಮಳೆ ಬರಬಹುದು ಎಂದು ಬರೆದೆವು. ಈಗ ನೋಡಿ ನಿಜವಾಗಲಿಲ್ಲವಾ? ಮೈಸೂರಲ್ಮಳೆ ಬಂತು ಎಂದು ಉದ್ದುದ್ದುದ್ದ ಸೇರಿಸಿ ಬರೆದರು- ನಮ್ಮ್ನೆನಪ್ಮಾಡಿದ್ರಾ?

‘ಆಫೀಸ್ ಅವರ್ಸ್‌ನಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತೀರಾ?’ ಎಂದು ಹುಬ್ಬೇರಿಸಿದ್ರಾ?
ಮಳೆ ದೇವರು ಯಾರು ಹೇಳಿ? ಅದೇ ಆ ‘ಮಹೇಂದ್ರ’, ‘ವೀರೇಂದ್ರ’ ‘ರನ್ನೇ’, ನಾವು ಗಂಭೀರವಾಗಿ ಫೋಲೋ ಮಾಡುವುದು.. ಗೊತ್ತಾಯ್ತಾ. ಇನ್ನು ಇಳಿಸಿ ಹುಬ್ಬು..
ನಾವು ಕೆಲಸದ ಮಟ್ಟಿಗೆ ಫರ್ಫೆಕ್ಟ್. ಕೆಲಸವಿಲ್ಲದಾಗಲೂ, ಮನೆಗೆ ಹೋಗುವಾಗಲೂ ನಮ್ಮ ಒಂದು ಕಣ್ಣು ಆಕಾಶದ ಕಡೆ ನೆಟ್ಟಿರುವುದು. ಮನೆಯಲ್ಲೂ ಹವಾಮಾನದ ಕಡೆ ಒಂದು ಕಣ್ಣಿಟ್ಟಿರುವೆವು. ಏಕೆ? ಮುಂದೆ ಹೇಳುವೆ..
-ಗಣೇಶ.

Rating
No votes yet

Comments