ಹಕ್ಕುಗಳ ಜೊತೆಗಿರುವ ಕರ್ತವ್ಯಗಳು ನೆನಪಿರಬೇಕು
ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿಗೆಯಿದ್ದಲ್ಲಿ ವಿವಾಹವಿಲ್ಲದೆಯೂ ಒಟ್ಟಿಗಿರಬಹುದು ಎಂಬ ಕೋರ್ಟ್ ತೀರ್ಪು, ಜನರಲ್ಲಿ ಮತ್ತು ಜನನಾಯಕರಲ್ಲಿ ಒಂದು ವಾಗ್ವಾದವನ್ನೇ ಹುಟ್ಟು ಹಾಕಿದೆ. ಈ ತೀರ್ಪು ಬರುವುದಕ್ಕಿಂತಲೂ ಮೊದಲೇ ಬೆಂಗಳೂರು, ಮಂಗಳೂರಿನಂಥ ದೊಡ್ಡ ಸಿಟಿಗಳಲ್ಲಿ ಲಿವ್ ಟುಗೆದರ್ ವ್ಯವಸ್ಥೆ ಇತ್ತು. 'ಕಸಿನ್' ಅಂತ ಹೇಳಿಕೊಂಡು ಇಂಥ ಎಷ್ಟೋ ಜೋಡಿಗಳು ಒಂದೇ ಸೂರಿನಡಿ ನೆರಳು ಪಡೆದಿದ್ದವು. ಈಗ ಅದಕ್ಕೆ ಅಧಿಕೃತ ಮುದ್ರೆ ಸಿಕ್ಕಿದೆ. ಇದರಿಂದ ಇಬ್ಬರು ಗಂಡು ಹೆಣ್ಣು ವಿವಾಹವಿಲ್ಲದೇ ಕೂಡ ಕೂಡಿ ಜೀವಿಸಬಹುದಾಗಿದೆ.
ಕೋರ್ಟಿನ ಈ ತೀರ್ಪು ತರುವ ಬದಲಾವಣೆಗಳು ಸಣ್ಣ ಮಟ್ಟದೇನಲ್ಲ. ಭಾರತೀಯ ಸಾಂಪ್ರಾದಾಯಿಕ ವ್ಯವಸ್ಥೆಗೆ ವಿರುದ್ಧವಾದುದು ಎಂಬ ಭಾವನೆ ಜನರಲ್ಲಿ ಇದೆ. ಹಾಗೆಂದು ಹಿಂದೆಯೂ ಇದ್ದಿರಬಹುದಾದ ಅನೈತಿಕ ಎಂದು ಕರೆಸಿಕೊಳ್ಳುವ ಸಂಬಂಧಗಳ ಜೊತೆ ಇದನ್ನು ಸೇರಿಸಲಾಗದು. ವಿವಾಹ ಎಂಬ ವ್ಯವಸ್ಥೆಯಲ್ಲಿ ತಮಗೆ ಆಸಕ್ತಿಯಿಲ್ಲ ಎಂಬುವರು ಇದರ ಪ್ರಯೋಜನ ಪಡೆಯಬಹುದು. ಅಂದರೆ ಕೋರ್ಟ್ ಮಾನವ ಹಕ್ಕುಗಳನ್ನು ಎತ್ತಿಹಿಡಿದ್ದಿದ್ದು ವ್ಯಕ್ತಿಯೋರ್ವನ ಅಭಿಪ್ರಾಯಕ್ಕೆ, ಹಿತಾಸಕ್ತಿಗೆ ಗರಿಷ್ಠ ಪ್ರಮಾಣದ ಮಾನ್ಯತೆ ನೀಡಿದೆ.
ಆದರೆ ಈ ಹಕ್ಕು ನಮ್ಮ ಸಮಾಜದಲ್ಲಿ ದುರ್ಬಳಕೆಯಾಗದಂತೆ ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ. ಇಂಥ ಸಂಬಂಧಗಳಿಂದ ಹೆಣ್ಣಿಗೆ ಹೆಚ್ಚು ಅತಂಕ. ಸಂಬಂಧ ಸ್ಥಾಪಿಸಿಕೊಂಡ ನಂತರದ ನೂರಾರು ಪ್ರಶ್ನೆಗಳಿಗೆ ಉತ್ತರಿಸಬೇಕಾದವಳು ಹೆಣ್ಣೆ ಆಗಿರುತ್ತಾಳೆ. ಇಲ್ಲಿ ಗಮನಿಸಬೇಕಾದುದು ತಿಳುವಳಿಕೆಯುಳ್ಳ ಜನರಲ್ಲಿಯ ಇಂಥ ಸಂಬಂಧಗಳು ಸಹಜವಾದುದೇ. ಆದರೆ ಬಿ ಪಿ ಓ ಗಳಲ್ಲಿ ಕೆಲಸಮಾಡುವವ ಇಲ್ಲದೇ ವಿದ್ಯಾರ್ಥಿಗಳು ಇಂಥ ಸಂಬಂಧಗಳಿಗೆ ಒಳಗಾದಲ್ಲಿ ತಮ್ಮ ಜೀವನವನ್ನೇ ನಾಶಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ನಾವು ಈ ವಿಷಯವನ್ನು ಬೆಂಬಲಿಸುವ ಇಲ್ಲವೇ ತಿರಸ್ಕರಿಸುವಾಗ ನಮ್ಮನ್ನು ಆ ಸ್ಥಾನದಲ್ಲಿಟ್ಟು ಯೋಚಿಸಿದರೆ ಒಳ್ಳೆಯದು ಅಲ್ಲವೇ?
Comments
ಉ: ಹಕ್ಕುಗಳ ಜೊತೆಗಿರುವ ಕರ್ತವ್ಯಗಳು ನೆನಪಿರಬೇಕು