ಹಣೆಬರಹ
ಒಲವು ತುಂಬಿದ ಸಂಜೆ ಹೆಣ್ಣಿನ
ಕಣ್ಣ ಮುಂದೆ ಇನಿಯ ನೇಸರು;
ಅಯ್ಯೋ ಹಣೆಬರಹವಿದೆಯಲ್ಲ
ಒಟ್ಟು ಸೇರಲು ಬಿಡುವುದಿಲ್ಲ!
ಸಂಸ್ಕೃತ ಮೂಲ (ರಾಮಾಯಣ, ಕಿಷ್ಕಿಂದಾ ಕಾಂಡ):
ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಸ್ಸರಃ |
ಅಹೋ ದೈವಗತಿಃ ಕೀದೃಕ್ ತಥಾಪಿ ನ ಸಮಾಗಮಃ ||
-ಹಂಸಾನಂದಿ
ಕೊ: ಈ ಪದ್ಯವು ಆನಂದವರ್ಧನನ ಧ್ವನ್ಯಾಲೋಕದ್ದು ಎಂದು ತೀನಂಶ್ರೀ ಅವರ "ಕಾವ್ಯಮೀಮಾಂಸೆ" ಎಂಬ ಪುಸ್ತಕದಲ್ಲಿ ನೋಡಿದ್ದೇನೆ.
ಕೊ.ಕೊ: ಶತಾವಧಾನಿ ಗಣೇಶ್ ಅವರ ಒಂದು ಭಾಷಣದಲ್ಲಿ ಈ ಪದ್ಯವು ರಾಮಾಯಣದ ಕಿಷ್ಕಿಂದಾಕಾಂಡದಲ್ಲಿದೆಯಂದು ನನಗೆ ತಿಳಿದು ಬಂತು. ಆನಂದ ವರ್ಧನನು, ಇದನ್ನು ಅಲ್ಲಿಂದ ಉದಾಹರಣೆಗೆ ಎತ್ತಿಕೊಂಡಿರಬಹುದು.
ಕೊ.ಕೊ.ಕೊ: ಮೂಲ ಯಾವುದಾದರೇನು? ಒಳ್ಳೆಯ ಸಂಗತಿಗಳು ಎಲ್ಲಿದ್ದರೂ ತಿಳಿಯೋಣ ಎನ್ನುವ ಕಾರಣಕ್ಕೆ ಕನ್ನಡಿಸಿದೆ!
Rating