ಹತ್ತಿಕಲಾರದ ನನ್ನೀ ವೇದನೆ ನಿಮ್ಮ ಮುಂದೆ .... ಹಾಗೆ ಸುಮ್ಮನೆ .......!!!!

ಹತ್ತಿಕಲಾರದ ನನ್ನೀ ವೇದನೆ ನಿಮ್ಮ ಮುಂದೆ .... ಹಾಗೆ ಸುಮ್ಮನೆ .......!!!!

ನೋವಿನ ಪ್ರತಿ ಇಂಚು ನನಗೆ ಗೊತ್ತು ..
ನಗುವಿನ ಆಳವೂ ನಂಗೊತ್ತು ...
ಆದರೆ ಈ "ಅಳು"ವಿನ ಬಗ್ಗೆ ಚೂರು ಅರಿತಿರಲಿಲ್ಲ ,,,
ಈಗ ಮಾತ್ರ ಅದರಲ್ಲಿ Ph.D ಮಾಡೋ ಹಂಬಲ ...
ಇದು ನನ್ನ ನೋವಿನ ಪರಮಾವದಿಯೇ ಅಥವಾ
ನನ್ನ ನಗುವಿನ ವ್ಯಂಗ್ಯ ನಡೆಯೇ ?

 


ಆಸೆಗಳ ಹೊತ್ತು ಅಗಸಕ್ಕೆಂದೂ ಏಣಿ ಹಾಕಲಿಲ್ಲ ...
ದೊಡ್ಡ ಆಸೆಗಳನಿತ್ತು ಕನಸೂ ಕಾಣಲಿಲ್ಲ ..
ರೆಕ್ಕೆ ಬಲಿಯುವ ಮೊದಲೇ
ಆಸೆ - ಕನಸ ಹೊತ್ತು ಹಾರಲು ಪ್ರಯತ್ನಿಸಲಿಲ್ಲ ..
ಇದರಲ್ಲಿ ಯಾವುದಾದರೊಂದನ್ನು ಪ್ರಯತ್ನಿಸಿದ್ದರೆ ಸಾಕಿತ್ತೇನೋ
ನನ್ನ ಬದುಕು ಹಸನಾಗಲು ..ನೆಮ್ಮದಿಯಡೆ ಸಾಗಲು

 

ನನ್ನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಬೇರೆಯವರಿಂದ ನೋಡಿ ಕಲಿತ್ತದ್ದೆ ಹೆಚ್ಚು
ಅವರು ಪಟ್ಟ ಕಷ್ಟಗಳು, ಅವರ ಸಾಧನೆಯ ಪ್ರತಿ ಹೆಜ್ಜೆಗಳು , ಅವರ ಶುದ್ದ ನಡೆತ,
ಅವರ ಸ್ವಾರ್ಥವಿಲ್ಲದ ಬದುಕು ಹೀಗೆ ಅನೇಕ ಗುಣಗಳನ್ನ .,
ಆದರೂ ಏಕೋ ಸಮುದ್ರದ ಮದ್ಯೆ ನಿಂತಿರುವ ಅ ಮಹಾ ಪುರುಷನಂತಾಗಲಿಲ್ಲ
ಕಡೆ ಪಕ್ಷ ಬೇರೆಯವರಿಗಾಗಿ ಹೋರಾಡಿ ಪ್ರಾಣ ತೆತ್ತು ಅಮರನಾಗಲಿಲ್ಲ ..

 

ನಾ ಹೊಸ ಕನಸುಗಳನ್ನು ಕಂಡವನಲ್ಲ
ನಾ ನನಗೆ ಎಟುಕದ ವಸ್ತುಗಳ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ
ನಾ ಹೊಡೆದಾಡುವುದು/ಹೊಡೆದಾಡುತ್ತಿರುವುದು,
ಜೀವನವನ್ನು ಎಳೆದಾಡುತ್ತಿರುವುದು
ನನ್ನಪ್ಪನ ನೆಮ್ಮದಿ ಬದುಕಿಗೆ
ನನ್ನಮ್ಮನ ಪ್ರತಿ ನಗುವಿಗೆ .....

 


ಜೀವನದಲ್ಲಿ ನಾ ಪಟ್ಟ ಕಷ್ಟಗಳಿಗೆ ಅರ್ಥ ಸಿಕ್ಕಿ
ನಾನು "ಸಾಧಕ"ನಾಗುವೆ ಎಂದುಕೊಂಡೆ ..
ಆದರೆ ಈಗಲೇ ಅರಿವಾಗಿದ್ದು ., ಸಾಧಕನಾಗಲು ಉತ್ಸಾಹ ಒಂದಿದ್ದರೆ ಸಾಲದು .,
ಮಾನಸಿಕ ಶ್ರಮ, ಸ್ವಾವಲಂಬನೆಯ ಬದುಕು ,ಛಲ,ದೈರ್ಯ ..
ಇಂತ ಇನ್ನೂ ಹಲವು ದೊಡ್ಡ,ದೊಡ್ಡ ಪದಗಳ ಪಟ್ಟಿಯೇ ಇದೆ ಎಂದು .,
ಮೇಲಿನ ಅಂತ ಪದಗಳಿಗೆ ಅರ್ಥ ತಿಳಿಯದ ನಾನು
"ಸಾಧನೆ"ಯ ಕನಸ ಕಾಣುವುದು ಸರಿಯೇ ???

 

ಚಾರ್ಲಿ... ಜೀವನದ ಪ್ರತಿ ಹೆಜ್ಜೆಯಲ್ಲೂ ಕಲಿತ ಪಾಠಗಳೊಂದಿಗೆ ಬಿಕ್ಕಳಿಸುತ್ತ !!!!

Rating
No votes yet