ಹತ್ತು ದಿನಗಳು (ಭಾಗ 1)
ಉಸ್...ಉಸ್...ಲೇ ಕೃಷ್ಣ ಇನ್ನು ನನ್ ಕೈಯಲ್ಲಿ ಆಗಲ್ಲಪ್ಪ...ನನಗೆ ಸುಸ್ತಾಗುತ್ತಿದೆ...ಇನ್ನು ಎಷ್ಟು ದೂರ ಇದ್ಯೋ?
ಹೇ ಮನು...ಇನ್ನೊಂದು ಅರ್ಧ ಗಂಟೆ ಅಷ್ಟೇ..ಅಲ್ಲಿ ನೋಡು ಆ ದಿಣ್ಣೆ ಕಾಣ್ತಾ ಇದ್ಯಲ್ಲ...ಅದನ್ನ ಹತ್ತಿ ಇಳಿದರೆ ನಾವು ಬೆಟ್ಟದ ತುದಿ ತಲುಪಬಹುದು ಕಣೋ...
ಲೇ ಕೃಷ್ಣ ಅರ್ಧ ಗಂಟೆಯಿಂದ ಅದನ್ನೇ ಹೇಳ್ತಾ ಇದ್ದೀಯ.. ಈಗಾಗಲೇ ಕತ್ತಲಾಗಲು ಶುರುವಾಗಿದೆ...ಮೊದಲೇ ವಿಪರೀತ ಚಳಿ ಮಂಜು...ಮೇಲೆ ಹೋದರೆ ಅಲ್ಲಿ ಉಳಿದುಕೊಳ್ಳಲು ಏನೂ ವ್ಯವಸ್ಥೆ ಬೇರೆ ಇಲ್ಲ ಎಂದಿದ್ದಿಯ. ಆಗಲೇ ನಾವು ಟ್ರೆಕ್ ಮಾಡಲು ಶುರುವಾಗಿ ಆರು ಗಂಟೆ ಆಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ನಮ್ಮಿಬ್ಬರನ್ನು ಬಿಟ್ಟರೆ ಇನ್ಯಾರು ಇಲ್ಲ ಎನಿಸುತ್ತೆ. ಮೊದಲೇ ಇದು ಕಾಡು ಪ್ರದೇಶ ಯಾವುದಾದರೂ ಪ್ರಾಣಿ ಬಂದರೆ ಏನೋ ಗತಿ.
ಹೇ ಮನು ನಾನಿರಬೇಕಾದರೆ ನಿನಗ್ಯಾಕೋ ಹೆದರಿಕೆ. ನಿನ್ನನ್ನು ಸುರಕ್ಷಿತವಾಗಿ ಮನೆಗೆ ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ್ನದು. ಹೇ ಆದಷ್ಟು ಈ ಕಡೆ ನಡಿ. ಅಪ್ಪಿ ತಪ್ಪಿ ಆ ಕಡೆ ಕಾಲಿಟ್ಟರೆ...
ಕೃಷ್ಣಾ...ಉಸ್...ಉಸ್.. ಕೃಷ್ಣಾ...ಕೃಷ್ಣಾ...ಕೃಷ್ಣಾ.
***
ಸಮಯ ಬೆಳಿಗ್ಗೆ 8.00 ಗಂಟೆ.
ಅರಣ್ಯಾಧಿಕಾರಿಯ ಕಛೇರಿಯಲ್ಲಿ ಕುಳಿತಿದ್ದ ಅಧಿಕಾರಿ ಅಂದಿನ ಪೇಪರ್ ಹಿಡಿದು ಕಾಫಿ ಹೀರುತ್ತಿದ್ದ. ಅಲ್ಲಿಗೆ ಉದ್ವೇಗದಿಂದ ಓಡಿಬಂದ ಯುವಕನೊಬ್ಬ ಗಾಭರಿಯಿಂದ ಸರ್...ಸರ್ ಎಂದು ಕೂಗಿದ.
ಆ ಯುವಕ ಸತತವಾಗಿ ಓಡಿ ಬಂದಿದ್ದ ಎಂದು ಅವನ ಮೈ ಬೆವರಿನಿಂದ ಒದ್ದೆ ಆಗಿರುವುದು ಸೂಚಿಸುತ್ತಿತ್ತು. ಅವನು ಏದುಸಿರು ಬಿಡುತ್ತಿದ್ದ. ಅವನ ಕಣ್ಣುಗಳು ಏನೋ ಅನಾಹುತ ನಡೆದಿದ್ದನ್ನು ನೋಡಿರುವಂತೆ ತೋರುತ್ತಿತ್ತು. ಅವನ ಗಾಬರಿಯನ್ನು ಗ್ರಹಿಸಿದ ಅಧಿಕಾರಿ ಅವನಿಗೆ ಕೂಡಲು ಹೇಳಿ ಅವನಿಗೆ ಕುಡಿಯಲು ನೀರನ್ನು ಕೊಟ್ಟ.
ಅವನು ನೀರನ್ನು ಗಟಗಟನೆ ಕುಡಿದು ಸರ್...ಸರ್...ಅದು...ಅದು...ನೆನ್ನೆ
ನೋಡಿ ಮಿಸ್ಟರ್. ಸಮಾಧಾನವಾಗಿ ಹೇಳಿ ಏನಾಯ್ತು ಎಂದು. ಏಕಿಷ್ಟು ಗಾಭರಿಯಿಂದ ಇದ್ದೀರಿ. ನೀವು ನೆನ್ನೆ ಬೆಳಿಗ್ಗೆ ಇಲ್ಲಿಂದ ಟ್ರೆಕ್ ಮಾಡಲು ಹೋದವರು ತಾನೇ? ನಿಮ್ಮ ಜೊತೆ ಇನ್ನೊಬ್ಬರು ಬಂದಿದ್ದರಲ್ಲ? ಅವರೆಲ್ಲಿ? ಅದು ಸರಿ ನೀವು ನೆನ್ನೆ ನಮ್ಮ ಗೈಡ್ ಕಣ್ಣು ತಪ್ಪಿಸಿ ಬೇರೆ ಯಾವುದೋ ದಾರಿಯಲ್ಲಿ ಹೋದರಂತೆ...ಅವನು ಹೆಚ್ಚು ಕಡಿಮೆ ಒಂದು ಗಂಟೆ ಹುಡುಕಾಡಿ ವಾಪಸ್ ಬಂದಿದ್ದಾನೆ. ಸರಿ ಅದು ಬಿಡಿ.....ಈಗ ಹೇಳಿ ಏನಾಯಿತು?
ಸರ್ ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ. ನಾವು ತಪ್ಪು ಮಾಡಿಬಿಟ್ಟೆವು ಎಂದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ. ಸ್ವಲ್ಪ ಸಮಾಧಾನ ಮಾಡಿಕೊಂಡು ಸರ್....ನೆನ್ನೆ ನಾನು ನನ್ನ ಸ್ನೇಹಿತ ಗೈಡ್ ಕಣ್ಣು ತಪ್ಪಿಸಿ ಕಾಡಿನೊಳಗೆ ಹೋದೆವು. ನಂತರ ಅಲ್ಲಿ ದಾರಿ ತಪ್ಪಿ ಸುಮಾರು ಎರಡು ಗಂಟೆಗಳು ಎಲ್ಲಂದರಲ್ಲಿ ತಿರುಗಿ ಮತ್ತೆ ಸರಿದಾರಿಗೆ ಬರುವಷ್ಟರಲ್ಲಿ ಸಂಜೆ ಆಗಿತ್ತು.
ಇನ್ನೇನು ಬೆಟ್ಟದ ತುದಿ ತಲುಪುವುದಕ್ಕೆ ಒಂದು ಅರ್ಧ ಗಂಟೆ ಇತ್ತು ಅಷ್ಟೇ...ಆದರೆ...ಅಷ್ಟರಲ್ಲಿ ನನ್ನ ಸ್ನೇಹಿತ ಕಾಲು ಜಾರಿ ಇಳಿಜಾರಿನಲ್ಲಿ ಬಿದ್ದು ಬಿಟ್ಟ...ಎಂದು ಮತ್ತೆ ಬಿಕ್ಕಲು ಶುರು ಮಾಡಿದ.
ಅವನ ಮಾತನ್ನು ಕೇಳಿದ ಅಧಿಕಾರಿಗಳಿಗೆ ಒಂದು ಕ್ಷಣಕ್ಕೆ ಗಾಭರಿಯಾದರೂ...ಮರುಕ್ಷಣದಲ್ಲೇ ಇಂಥಹ ಘಟನೆಗಳು ಸಾಮಾನ್ಯ ಎಂಬ ಭಾವನೆ ಮೂಡಿತ್ತು. ತಕ್ಷಣ ಅಧಿಕಾರಿ ಕೋಪದಿಂದ ಅಲ್ರೀ ಅದಕ್ಕೆ ನಾವು ಹೊಡ್ಕೊಳೋದು ನಿಮ್ಮ ಮಿತಿ ಮೀರಿ ವರ್ತಿಸಬೇಡಿ ಎಂದು. ನೀವು ನಿಮ್ಮ ರಜಾ ಕಳೆಯಲು ಇಲ್ಲಿ ಬರುತ್ತೀರಿ. ಬಂದು ನಮ್ಮ ಮಾತು ಕೇಳದೆ ನಿಮ್ಮ ಆಟಗಳನ್ನು ತೋರಿಸುತ್ತೀರ. ನಿಮ್ಮನ್ನು ಹುಡುಕಲು ನಾವಿಲ್ಲಿ ಸಾಯಬೇಕು. ಇದೊಂದು ಗೊಳಾಗಿ ಹೋಯ್ತು ನಮಗೆ...ಥೂ ಯಾವುದ್ರಿ ನಮಗೆ ಕಾಟ....ಏಯ್...ಬಾರೋ ಇಲ್ಲಿ ಆ ಗೈಡ್ ನ ಕರೆಸು. ನಾನು ಪೋಲಿಸ್ ಗೆ ಫೋನ್ ಮಾಡ್ತೀನಿ.
ಹಲೋ...ಪೋಲಿಸ್ ಸ್ಟೇಶನ್...ಸರ್ ನಾನು ಸಂಜೀವ್ ಕುಮಾರ್, ಫಾರೆಸ್ಟ್ ರೇಂಜರ್ ಮಾತಾಡ್ತಿರೋದು. ಇಲ್ಲೊಂದು ಕೇಸ್ ಆಗಿದೆ. ಒಬ್ಬ ಹುಡುಗ ಫಾರೆಸ್ಟ್ ಅಲ್ಲಿ ಮಿಸ್ ಆಗಿದಾನೆ. ತಾವು ಕೂಡಲೇ ಹೊರಟು ಬರುತ್ತೀರಾ. ಹಾ ಹೌದು ಸರ್ ಅವನ ಜೊತೆ ಹೋದ ಸ್ನೇಹಿತ ಇಲ್ಲೇ ಇದಾನೆ...ಅವನೇ ಬಂದು ವಿಷಯ ತಿಳಿಸಿದ್ದು....ಹಾ ಒಳ್ಳೇದು ಸರ್...ಜೊತೇಲಿ ಒಂದು ಅಂಬುಲೆನ್ಸ್ ತಂದು ಬಿಟ್ಟರೆ ಒಳ್ಳೆಯದು. ಇಲ್ಲ ಸರ್ ಇನ್ನೂ ಹುಡುಕುವ ಕೆಲಸ ಶುರು ಮಾಡಿಲ್ಲ. ಮೊದಲು ನಿಮಗೆ ವಿಷಯ ತಿಳಿಸಿ ನಂತರ ಹೊರಡೋಣ ಎಂದು. ಓಕೆ ಸರ್....ನಾನು ಒಂದು ಟೀಮ್ ಕಳಿಸಿರುತ್ತೇನೆ. ಓಕೆ ಸರ್ ಜೊತೆಯಲ್ಲಿ ಆ ಹುಡುಗನನ್ನು ಕಳಿಸುತ್ತೇನೆ.
ಬೇಡ ಸರ್...ಇಷ್ಟು ಬೇಗ ಮೀಡಿಯಾ ಅವರಿಗೆ ವಿಷಯ ತಿಳಿಸುವುದು ಬೇಡ. ಆಮೇಲೆ ಅವರು ಸುಮ್ಮನೆ ಇಲ್ಲಸಲ್ಲದ್ದನು ಹೇಳಿ ಇನ್ನಷ್ಟು ದೊಡ್ಡ ವಿಷಯ ಮಾಡುತ್ತಾರೆ. ಮೊದಲು ನೀವಿಲ್ಲಿ ಬನ್ನಿ ಸರ್...ಈಗಾಗಲೇ ಈ ಹುಡುಗನ ಕೈಯಲ್ಲಿ ಅವನ ಮನೆಗೆ ಮತ್ತು ಕಳೆದುಹೋಗಿರುವ ಸ್ನೇಹಿತನ ಮನೆಗೆ ಫೋನ್ ಮಾಡಿಸಿದ್ದೇನೆ. ಅವರು ಇಂದು ಸಂಜೆ ವೇಳೆಗೆ ಬರುತ್ತಾರೆ. ಓಕೆ ಸರ್...ಓಕೆ...
ಅಷ್ಟರಲ್ಲಿ ಗೈಡ್ ಒಳಗೆ ಬಂದು ಅಲ್ಲಿ ಕೂತಿದ್ದ ಹುಡುಗನ ಕಡೆ ಕೋಪದಿಂದ ನೋಡಿ...ಏನ್ಸಾರ್ ನೆನ್ನೆ ಹೇಳ್ದೆ ಕೇಳ್ದೆ ಹೋದ್ರಿ...ನನಗೆ ನೆನ್ನೆನೇ ಅನುಮಾನ ಬಂದಿತ್ತು...100% ನಿಮ್ಮ ಫ್ರೆಂಡ್ ಯಾವುದೋ ಕಾಡು ಪ್ರಾಣಿಗೆ ಆಹಾರ ಆಗಿರುತ್ತಾನೆ. ಯಾಕ್ರೀ ಬೇಕು ಇದೆಲ್ಲ ನಿಮಗೆ..ಆರಾಮಾಗಿ ಊರಲ್ಲಿ ಇರ್ತೀರಾ...ಅಲ್ಲೇ ಇದ್ದು ಸಾಯಬಾರದ...ಸಾಯಕ್ಕೆ ಇಲ್ಲಿ ತನಕ ಬರಬೇಕ?
ಅಲ್ಲಿಗೆ ಬಂದ ಫಾರೆಸ್ಟ್ ರೇಂಜರ್ ನೋಡೋ ಸಿದ್ದ ಇವನನ್ನು ಕರೆದುಕೊಂಡು ಜೊತೆಗೆ ನಮ್ಮ ತಂಡದ ಒಂದಿಬ್ಬರನ್ನು ಕರೆದುಕೊಂಡು ಅವನೆಲ್ಲಿ ಕಳೆದುಹೋದ ಎಂದು ನೋಡಿಬನ್ನಿ. ಅಷ್ಟರಲ್ಲಿ ಪೋಲಿಸ್ ಬರುತ್ತಾರೆ. ಅವರ ಕುಟುಂಬದವರು ಬಂದಿರುತ್ತಾರೆ. ಆಮೇಲೆ ಮುಂದಿನದನ್ನು ನೋಡೋಣ.
ದಾರಿಯುದ್ದಕ್ಕೂ ಆ ತಂಡದವರು ಮತ್ತು ಆ ಗೈಡ್ ಎಲ್ಲರೂ ಸೇರಿಕೊಂಡು ಆ ಯುವಕನಿಗೆ ಬಾಯಿಗೆ ಸಿಕ್ಕಂತೆ ಬೈಯುತ್ತಿದ್ದರು. ನಿಮ್ಮ ತೆವಲಿಗೆ ನಾವಿಲ್ಲಿ ಹಗಲು ರಾತ್ರಿ ಎನ್ನದೆ ಒದ್ದಾಡಿ ಸಾಯಬೇಕಿಲ್ಲಿ. ಇನ್ನೂ ಅದೆಷ್ಟು ಹೆಣಗಳನ್ನು ಎತ್ತಬೇಕೋ. ನಾವಿಷ್ಟು ಕಷ್ಟಪಟ್ಟು ಕೆಲಸ ಮಾಡಿದರೂ ಇವರು ಕೊಡುವ ಸಂಬಳ ಅಷ್ಟರಲ್ಲೇ...ಥೂ ಸಾಕಾಗಿ ಹೋಗಿದೆ ಈ ಜೀವನ.
ಆ ತಂಡ ಸತತ ನಾಲ್ಕು ಗಂಟೆಯ ಪ್ರಯಾಣದ ನಂತರ ಆ ಸ್ಥಳ ತಲುಪಿದರು. ಆ ಯುವಕ ಆ ತಂಡದವರಿಗೆ. ಗೈಡ್ ಗೆ ಅವನ ಸ್ನೇಹಿತ ಬಿದ್ದ ಜಾಗ ತೋರಿಸಿ ಸರ್ ಇಲ್ಲೇ ಸರ್....ನನ್ನ ಸ್ನೇಹಿತ ಜಾರಿ ಬಿದ್ದದ್ದು. ಎಂದು ಕಣ್ಣಲ್ಲಿ ನೀರು ತುಂಬಿಕೊಂಡ. ಅಲ್ಲಿಂದ ಕೆಳಗೆ ಬಗ್ಗಿ ನೋಡಿದರೆ ಪ್ರಪಾತ ಕಾಣಿಸುತ್ತಿತ್ತು. ಅಲ್ಲಿಂದ ಬಿದ್ದರೆ ಮೂಳೆಯೂ ಸಿಗುವುದು ಕಷ್ಟ. ಅದೂ ಅಲ್ಲದೆ ಅಲ್ಲಿ ಬಿದ್ದವರನ್ನು ಹುಡುಕಲೂ ಸಾಧ್ಯವಿರಲಿಲ್ಲ. ಅದು ಅಷ್ಟು ದಟ್ಟವಾದ ಕಾಡು.
ಅಲ್ಲಿ ಬಂದಿದ್ದ ತಂಡದವರು ತಮ್ಮ ವೈರ್ಲೆಸ್ ಮುಖಾಂತರ ಫಾರೆಸ್ಟ್ ರೇಂಜರ್ ನ ಸಂಪರ್ಕಿಸಿ ಸರ್...ಆ ಹುಡುಗ ಬಿದ್ದಿರುವುದು ನಾರ್ತ್ ಪಾಯಿಂಟ್ ಅಲ್ಲಿ ಇರುವ "ಡೆತ್ ಟ್ರ್ಯಾಪ್" ಜಾಗದಲ್ಲಿ ಸರ್. ಈಗಾಗಲೇ ಮಳೆಹನಿ ಶುರುವಾಗಿದೆ, ಈಗ ಹುಡುಕಲು ಸಾಧ್ಯವಿಲ್ಲ ಸರ್. ಬೆಳಿಗ್ಗೆ ಇನ್ನೊಂದು ತಂಡದ ಜೊತೆ ಮಾ
ಸರಿ ನಡೀರಿ ಈಗ ಹುಡುಕಲು ಸಾಧ್ಯವಿಲ್ಲ.
ಲೇ ಸುಮ್ಮನೆ ನಡ್ಯೋಲೇ....ಜಾಸ್ತಿ ಮಾತಾಡಬೇಡ...
ಅವರು ಕೆಳಗೆ ಬರುವ ವೇಳೆಗಾಗಲೇ, ಆ ಯುವಕ ಮತ್ತು ಅವನ ಸ್ನೇಹಿತನ ಕುಟುಂಬದವರು ಇಬ್ಬರೂ, ಪೊಲೀಸರು ಬಂದಿದ್ದರು. ಯುವಕ ಅವರ ಕುಟುಂಬದವರನ್ನು ಕಂಡ ಕೂ
ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಪೋ