ಹತ್ತು ದಿನಗಳು (ಭಾಗ 2)
ಹೇಳಿ ನಿಮ್ಮ ಹೆಸರೇನು?
ಸರ್ ನನ್ನ ಹೆಸರು ಮನು.
ನಿಮ್ಮ ಸ್ನೇಹಿತನ ಹೆಸರು?
ಕೃಷ್ಣ.
ಹೇಳಿ ಮನು ನೆನ್ನೆ ಏನು ನಡೆಯಿತೆಂದು?
ಸರ್ ನೆನ್ನೆ ನಾನು ಮತ್ತು ಕೃಷ್ಣ ಗೈ
ಸುಮಾರು ಒಂದು ಗಂಟೆ ನಡೆದ ಮೇಲೆ ಅವನಿಗೆ ಅರಿವಾಯಿತು. ನಾವು ದಾರಿ ತಪ್ಪಿದ್ದೇವೆ ಎಂದು. ಮತ್ತೊಂದು ಗಂಟೆ ಅಲ್ಲಿ ಇಲ್ಲಿ ಸುತ್ತಾಡಿದ ಮೇಲೆ ಕೊನೆಗೂ ಸರಿಯಾದ ದಾರಿ
ಹಾಗೆಯೇ ನನ್ನೆಡೆಗೆ ತಿರುಗಿದವನು ನನ
ಹ್ಮ್ಮ್ಮ್...ನೋಡಿದಿರಾ ಮನು ನಿಮ್ಮ
ಸರ್ ದಯವಿಟ್ಟು ನಮ್ಮನ್ನು ಕ್ಷಮಿಸಿ. ಸರ್ ಆದಷ್ಟು ಬೇಗ ನನ್ನ ಸ್ನೇಹಿತನನ್ನು ಹುಡುಕಿಕೊಡಿ ಪ್ಲೀಸ್...
ಮನು...ನಿಮ್ಮ ಕೃಷ್ಣನ ಪರಿಚಯ ಎಷ್ಟು ದಿನದ್ದು?
ಸರ್ ನಾವಿಬ್ಬರೂ ಬಾಲ್ಯ ಸ್ನೇಹಿತರು.
ಮನು...ನೋಡಿ, ಈ ಪ್ರಾಂತ್ಯದಲ್ಲಿ ಮಳೆ
ಮನು ಇನ್ನೊಂದು ವಿಷಯ ಈ ಕೇಸ್ ಸಂಪೂರ್ಣ ಮುಗಿಯುವವರೆಗೂ ನೀವು ನಮ್ಮ ಕಸ್ಟಡಿಯಲ್ಲಿ ಇರಬೇಕಾಗುತ್ತದೆ. ನಿಮ್ಮ ಮತ್ತು ನಿಮ್ಮ ಸ್ನೇಹಿತನ ಕುಟುಂಬ ಊರಿಗೆ ಹೊರಡಲಿ. ಮುಂದಿನ ಮಾಹಿತಿ ತಿಳಿದಾಗ ಅವರು ಬರಲಿ.
ಸರ್..ನನ್ನದೇನೂ ಅಭ್ಯಂತರ ಇಲ್ಲ...ಬೇಕಿದ್ದರೆ ನಾನೂ ಶೋಧ ಕಾರ್ಯದ ತಂಡದ ಜೊತೆ ಹೋಗುತ್ತೇನೆ.
ಇಲ್ಲ ಮನು ಅಲ್ಲಿ ನೀವು ಹೋಗುವ ಹಾಗಿಲ್ಲ. ನೀವು ನನ್ನ ಜೊತೆ ಸ್ಟೇಶನ್ ಗೆ ಬರಬೇಕು. ಇಲ್ಲಿಂದ ಮಾಹಿತಿ ಬಂದ ಮೇಲೆ ನಾವು ಇಲ್ಲಿಗೆ ಬರೋಣ.
***
ಮರುದಿನ ಬೆಳಿಗ್ಗೆಯೇ ಐದೈದು ಜನರ ಎರಡು ಶೋಧ ಕಾರ್ಯಾಚರಣೆ ತಂಡ ಈಸ್ಟ್ ಪಾಯಿಂಟ್ ನಿಂದ ನಾರ್ತ್ ಪಾಯಿಂಟ್ ಕಡೆ ಹೊರಟಿತು. ಆ ಇಡೀ ಪ್ರದೇಶ ಬಹಳ ದುರ್ಗಮವಾದ ಹಾದಿಯುಳ್ಳ ಪ್ರದೇಶ. ಸೂರ್ಯನ ಕಿರಣಗಳು ಭೂಮಿಯನ್ನು ತಾಕಲು ಹರಸಾಹಸ ಪಡುವಂಥ ದಟ್ಟವಾದ ಕಾಡು. ಯಾವ ಸಮಯದಲ್ಲಾದರೂ ಕಾಡು ಪ್ರಾಣಿಗಳು ಎರಗಬಹುದು. ಎಷ್ಟೋ ವರ್ಷಗಳ ಕಾಲ ಅಲ್ಲಿ ಓಡಾಡಿ ಪರಿಣತಿ ಹೊಂದಿದ್ದವರು ಮಾತ್ರ ಅಲ್ಲಿ ಓಡಾಡಲು ಸಾಧ್ಯ.
ಮಳೆ ಇರದ ಕಾರಣ ತಂಡಗಳು ಎರಡು ದಿನಗಳಲ್ಲಿ ನಾರ್ತ್ ಪಾಯಿಂಟ್ ಗೆ ಬಂದು ಸೇರಿದರು. ಆ ಪ್ರಪಾತದ ತಪ್ಪಲಲ್ಲಿ ನದಿಯೊಂದು ಹರಿಯುತ್ತದೆ ಅದರ ಪಕ್ಕದಲ್ಲೇ ಸಣ್ಣ ಗುಹೆಯೊಂದು ಇದೆ. ಯಾವಾಗಲಾದರೂ ಹೀಗೆ ತಂಡಗಳು ಬಂದಾಗ ಅವರು ಉಳಿದುಕೊಳ್ಳುತ್ತಿದ್ದು ಆ ಗುಹೆಯಲ್ಲೇ. ತಂಡಗಳು ಬಂದು ತಲುಪುವ ವೇಳೆಗಾಗಲೇ ಸಂಜೆ ಆಗಿದ್ದರಿಂದ ಶೋಧ ಕಾರ್ಯವನ್ನು ಮರುದಿನ ಬೆಳಿಗ್ಗೆ ಶುರು ಮಾಡೋಣ ಎಂದು ನಿರ್ಧರಿಸಿದರು.
ಇತ್ತ ಕೃಷ್ಣನ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ವಯಸ್ಸಿಗೆ ಬಂದ ಮಗ ಹೀಗಾದನಲ್ಲ ಎಂದು ಕೊರಗುತ್ತಿದ್ದರು. ಇನ್ನಾರು ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಹುಡುಗ ಹೀಗೆ ದುರಂತಕ್ಕೀಡಾದ ಎಂದು ಹಲುಬುತ್ತಿದ್ದರು. ಆಗಲೇ ಐದು ದಿನ ಆಗಿತ್ತು ಇನ್ನು ಅವನ ಬಗ್ಗೆ ಯಾವ ಮಾಹಿತಿಯೂ ಬಂದಿರಲಿಲ್ಲ.
***
ಆರನೇ ದಿನ ಬೆಳಿಗ್ಗೆಯೇ ಶೋಧ ಕಾರ್ಯ ತಂಡ ಕೃಷ್ಣನ ಹುಡುಕಾಟದಲ್ಲಿ ತೊಡಗಿತು. ಸತತವಾಗಿ ಮೂರು ಗಂಟೆಗಳ ಕಾಲ ಶೋಧಿಸಿದರೂ ಎಲ್ಲಿಯೂ ಕೃಷ್ಣನ ಸುಳಿವು ಸಿಗಲಿಲ್ಲ. ಅಷ್ಟರಲ್ಲಿ ಮಳೆ ಶುರುವಾಯಿತು. ಸ್ವಲ್ಪದರಲ್ಲೇ ಬಹಳ ಜೋರಾಗಿ ಶುರುವಾಯಿತು. ಎರಡು ಗಂಟೆಗಳ ಕಾಲ ಸತತವಾಗಿ ಸುರಿದ ಮಳೆಯಿಂದ ಸುತ್ತಲ ವಾತಾವರಣ ಮಧ್ಯಾಹ್ನದ ವೇಳೆಗೆ ಕತ್ತಲಾಗಿ ಬಿಟ್ಟಿತ್ತು. ಶೋಧ ಕಾರ್ಯ ಮುಂದುವರೆಸುವುದು ಕಷ್ಟವಾಗಿತ್ತು. ಅಂದಿನ ಶೋಧ ಕಾರ್ಯ ಅಷ್ಟಕ್ಕೇ ಸ್ಥಗಿತಗೊಳಿಸಿದರು.
ರಾತ್ರಿಯಿಡೀ ಸುರಿದ ಮಳೆ ಬೆಳಗಿನ ಜಾವದ ವೇಳೆಗೆ ನಿಂತಿತ್ತು. ವಾತಾವರಣ ಶುಭ್ರವಾಗಿತ್ತು. ಮತ್ತೆ ಶೋಧ ಕಾರ್ಯ ಶುರುವಾಯಿತು. ಅಂದು ಮಳೆ ಬಾರದಿದ್ದರಿಂದ ಸಂಜೆಯವರೆಗೂ ಶೋಧ ಕಾರ್ಯ ಮುಂದುವರೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮತ್ತೆ ಬೆಳಿಗ್ಗೆಯೇ ಶುರು ಮಾಡಬೇಕೆಂದು ಬರುತ್ತಿದ್ದಾಗ ಅಲ್ಲೊಂದು ಬಂಡೆಯ ಬಳಿ ಒಂದು ಜೊತೆ ರಕ್ತಸಿಕ್ತ ಬಟ್ಟೆಗಳು, ಪಕ್ಕದಲ್ಲೇ ಕಿತ್ತು ಹೋಗಿದ್ದ ಒಂದು ಜೊತೆ ಶೂಗಳು ಬಿದ್ದಿದ್ದವು. ಅವುಗಳನ್ನು ನೋಡಿದರೆ ತುಂಬಾ ಹಳೆಯದೆಂದು ತೋರುತ್ತಿರಲಿಲ್ಲ.
ಬಹುಷಃ ಈ ವಸ್ತುಗಳು ಆ ಯುವಕನದ್ದೆ ಇರಬಹುದು. ಆದರೆ ಆತನ ದೇಹ ಮಾತ್ರ ಅಲ್ಲೆಲ್ಲೂ ಕಾಣಲಿಲ್ಲ. ಮರುದಿನ ಬೆಳಿಗ್ಗೆ ಮತ್ತೊಮ್ಮೆ ಹುಡುಕಿ ನೋಡೋಣ. ಸಿಕ್ಕರೆ ಸರಿ ಇಲ್ಲವಾದರೆ ಯಾವುದಾದರೂ ಪ್ರಾಣಿ ಎಳೆದುಕೊಂಡು ಹೋಗಿರಬಹುದು ಎಂಬ ತೀರ್ಮಾನಕ್ಕೆ ಬರಬಹುದು ಎಂದು ತೀರ್ಮಾನಿಸಿದ ತಂಡ ಆ ವಸ್ತುಗಳನ್ನು ತೆಗೆದುಕೊಂಡು ಗುಹೆಗೆ ಮರಳಿದವು.
ಮರುದಿನ ಬೆಳಿಗ್ಗೆ ಮತ್ತದೇ ಜಾಗದ ಬಳಿ ಬಂದು ಸುತ್ತೆಲ್ಲ ಹುಡುಕಿದರೂ ಯಾವುದೇ ಕುರುಹು ಕಾಣಲಿಲ್ಲ. ಸಂಜೆಯ ವೇಳೆಗೆ ವಾಪಸ್ ಫಾರೆಸ್ಟ್ ಆಫೀಸ್ ಗೆ ಹೊರಡುವುದೆಂದು ತೀರ್ಮಾನಿಸಿ ಎರಡೂ ತಂಡಗಳು ಅಲ್ಲಿಂದ ಹೊರಟವು. ಎರಡು ದಿನಗಳ ನಂತರ ಫಾರೆಸ್ಟ್ ಆಫೀಸ್ ತಲುಪಿದ ತಂಡಗಳು ಅಲ್ಲಿ ಸಿಕ್ಕ ವಸ್ತುಗಳನ್ನು ತೋರಿಸಿ ಇವು ಮಾತ್ರ ದೊರಕಿತು ಎಂದು ತಿಳಿಸಿದರು.
ಕೂಡಲೇ ಫಾರೆಸ್ಟ್ ಆಫೀಸರ್ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ತಕ್ಷಣ ಪೋಲಿಸ್ ಆಫೀಸರ್ ಎರಡೂ ಕುಟುಂಬದವರಿಗೆ ಕರೆ ಮಾಡಿ ವಿಷಯ ತಿಳಿಸಿ, ಮನುವನ್ನು ಕರೆದುಕೊಂಡು ಫಾರೆಸ್ಟ್ ಆಫೀಸ್ ಗೆ ಬಂದರು. ಅಲ್ಲಿದ್ದ ವಸ್ತುಗಳನ್ನು ನೋಡಿದ ಮನು ಕೂಡಲೇ ಅಳಲು ಶುರುಮಾಡಿ ಹೌದು ಸರ್ ಇದು ಕೃಷ್ಣನ ವಸ್ತುಗಳೇ...ಆದರೆ ಕೃಷ್ಣ...ಎಂದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ.
ಸಂಜೆಯ ಹೊತ್ತಿಗೆ ಎರಡೂ ಕುಟುಂಬಗಳು ಬಂದು ಸೇರಿದರು. ಕೃಷ್ಣನ ತಾಯಿ ಆ ವಸ್ತುಗಳನ್ನು ನೋಡಿದ ಕೂಡಲೇ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ಕೃಷ್ಣನ ತಂದೆ ಆ ಬಟ್ಟೆಗಳನ್ನು ಕಣ್ಣಿಗೆ ಒತ್ತಿಕೊಂಡು ಅಳಲು ಶುರುಮಾಡಿದರು. ಮನುವಿನ ತಾಯಿ ತಂದೆ ಎಲ್ಲರನ್ನೂ ಸಮಾಧಾನ ಮಾಡುವುದರಲ್ಲಿ ಮಗ್ನರಾಗಿದ್ದರು. ಪೋಲಿಸ್ ಅಧಿಕಾರಿಗಳು ಮುಂದಿನ ಪ್ರಕ್ರಿಯೆಗಳನ್ನು ನಡೆಸಲು ಮುಂದಾಗುತ್ತಿದ್ದರು. ಅಷ್ಟರಲ್ಲಿ ಗೈಡ್ ಸಿದ್ದ ಆತುರಾತುರವಾಗಿ ಓಡಿ ಬಂದು ಫಾರೆಸ್ಟ್ ಆಫೀಸರ್ ಎದುರುಗಡೆ ನಿಂತು ಏದುಸಿರು ಬಿಡುತ್ತ ಸರ್ ಅರ್ಜೆಂಟಾಗಿ ಆಚೆ ಬನ್ನಿ ಎಂದು ಕರೆದುಕೊಂಡು ಬಂದ.
ಫಾರೆಸ್ಟ್ ಆಫೀಸರ್ ಕುತೂಹಲದಿಂದ ಆಚೆ ಬಂದು ನೋಡಿದರೆ ಅಲ್ಲೊಬ್ಬ ಯುವಕ ಇನ್ನೇನು ಆಗಲೋ ಈಗಲೋ ಕುಸಿದು ಬೀಳುವ ಸ್ಥಿತಿಯಲ್ಲಿ ನಿಂತಿದ್ದ. ಫಾರೆಸ್ಟ್ ಆಫೀಸರ್ ತಕ್ಷಣ ಗಾಭರಿಯಿಂದ ಒಳಗೆ ಓಡಿ ಬಂದು ಮನು ಮತ್ತು ಪೋಲಿಸ್ ಆಫೀಸರನ್ನು ಕರೆದುಕೊಂಡು ಆಚೆ ಬಂದರು. ಮನು ಆಚೆ ಬಂದು ಅಲ್ಲಿ ನಿಂತಿದ್ದ ಯುವಕನನ್ನು ನೋಡಿ ಓಡಿ ಹೋಗಿ ಕೃಷ್ಣ ಎಂದು ತಬ್ಬಿಕೊಂಡ. ಕೂಡಲೇ ಕೃಷ್ಣ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟ. ತಕ್ಷಣ ಅವನನ್ನು ಅಲ್ಲೇ ಪಕ್ಕದಲ್ಲಿದ್ದ ಫಾರೆಸ್ಟ್ ಆಸ್ಪತ್ರೆಗೆ ಕರೆದೊಯ್ದರು.
ಅವನಿಗೆ ಪ್ರಥಮ ಚಿಕಿತ್ಸೆ ಮಾಡಿ ಒಂದರ್ಧ ಗಂಟೆಗೆ ಅವನಿಗೆ ಪ್ರಜ್ಞೆ ಬಂದಿತು. ಕಣ್ಣು ಬಿಟ್ಟ ಕೃಷ್ಣನಿಗೆ ಸುತ್ತಲೂ ಎಲ್ಲರೂ ನೆರೆದಿದ್ದನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಿತು. ಪೋಲಿಸ್ ಅಧಿಕಾರಿ ಬಂದು ಏನು ನಡೆಯಿತು ಎಂದು ಕೇಳಿದಾಗ, ಸರ್ ಅವತ್ತು ನಾನು ಅಲ್ಲಿಂದ ಜಾರಿ ಬಿದ್ದಾಗ ಸೀದಾ ಹೋಗಿ ಒಂದು ಮರದ ಕೊಂ
ನಂತರ ಆ ಬಟ್ಟೆ ಮತ್ತು ಶೂವನ್ನು ಅಲ್ಲೇ ಬಿಚ್ಚಿ ಹಾಕಿ ಬ್ಯಾಗಿನಲ್ಲಿದ್ದ ಮತ್ತೊಂದು ಬಟ್ಟೆಯನ್ನು ಹಾಕಿಕೊಂಡೆ. ಆದರೆ ಅಲ್ಲಿಂದ ಹೇಗೆ ಆಚೆ ಬರಬೇಕೋ ಗೊತ್ತಾಗಲಿಲ್ಲ. ಹೊಟ್ಟೆ ಬೇರೆ ಹಸಿಯುತ್ತಿತ್ತು. ಕಾಡು ಪ್ರಾಣಿಗಳ ಭಯ ಬೇರೆ. ಬ್ಯಾಗಿನಲ್ಲಿದ್ದ ತಿಂಡಿ ಮೂರುದಿನ ಅಡ್ಜಸ್ಟ್ ಮಾಡಿದೆ. ನಂತರ ಅಲ್ಲೇ ಹರಿಯುತ್ತಿದ್ದ ನೀರು ಕುಡಿಯುತ್ತಿದ್ದೆ. ಮೊಬೈಲ್ ಚಾರ್ಜ್ ಇಲ್ಲದೆ ಸತ್ತು ಹೋಗಿತ್ತು. ಯಾವ ಯಾವ ದಾರಿಯಲ್ಲಿ ನಡೆದೆನೋ ಗೊತ್ತಿಲ್ಲ. ಸತತವಾಗಿ ನಡೆದೂ ನಡೆದೂ ಕೊನೆಗೆ ಯಾವುದೋ ಹಳ್ಳಿ ತಲುಪಿದೆ. ಅಲ್ಲಿಂದ ಯಾರೋ ಒಬ್ಬರು ನನ್ನನ್ನು ಕರೆದುಕೊಂಡು ಬಂದು ನಿಮ್ಮ ಆಫೀಸ್ ಬಳಿ ಬಿಟ್ಟರು ಸರ್.
ಅಲ್ಲಿ ನೆರೆದಿದ್ದ ಎಲ್ಲರಿಗೂ ಅದೊಂದು ಪವಾಡವೆನಿಸಿತು. ಕೃಷ್ಣ ನಿಜಕ್ಕೂ ನೀನು ಅದೃಷ್ಟಶಾಲಿ ಕಣಯ್ಯಾ. ನೀನು ಸಾವನ್ನೇ ಗೆದ್ದು ಬಂದಿದ್ದೀಯ. ಆದರೆ ಇನ್ನು ಮುಂದೆ ಯಾವತ್ತೂ ಈ ರೀತಿ ನಿಯಮಗಳನ್ನು ಮೀರಿ ನಡೆಯಬೇಡಿ. ನೋಡಿ ನಿಮ್ಮಿಂದ ಎಲ್ಲರಿಗೂ ಎಷ್ಟು ಕಷ್ಟ. ನಮ್ಮ ಕಷ್ಟ ಬಿಡಿ...ನಾವಿರುವುದೇ ಅದಕ್ಕಾಗಿ...ಆದರೆ ನಿಮ್ಮನ್ನೇ ನಂಬಿಕೊಂಡಿರುವ ನಿಮ್ಮ ಕುಟುಂಬದ ಗತಿ ಏನಾಗಬೇಕು. ಈ ಹತ್ತು ದಿನದಲ್ಲಿ ನಿಮ್ಮ ತಾಯಿ ತಂದೆ ಅದೆಷ್ಟು ಕಷ್ಟ ಪಟ್ಟಿರುತ್ತಾರೆ? ಎಂದು ಹೇಳಿ ಫಾರೆಸ್ಟ್ ಆಫೀಸರ್ ಮತ್ತು ಪೋಲಿಸ್ ಅಧಿಕಾರಿ ಅಲ್ಲಿಂದ ಹೊರಟರು
Comments
ನಾನು ಹತ್ತು ದಿನ ಬರುತ್ತೆ ಅಂತ
ನಾನು ಹತ್ತು ದಿನ ಬರುತ್ತೆ ಅಂತ ಇದ್ದೆ , ಆದರೆ ಎರಡನೆ ಬಾಗದಲ್ಲಿ ಮುಗಿದು ಹೋಯ್ತು! ಚೆನ್ನಾಗಿದೆ
ಎರಡು ದಿನ ಬರೆದರೇನೇ ಓದುವುದು
ಎರಡು ದಿನ ಬರೆದರೇನೇ ಓದುವುದು ಕಷ್ಟ. ಇನ್ನು ಹತ್ತು ದಿನ ಬರೆದರೆ ಯಾರು ಓದುತ್ತಾರೆ ಪಾರ್ಥ ಅವರೇ?
ಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.