ಹತ್ತು ಹತ್ತು ಇಪ್ಪತ್ತು...

ಹತ್ತು ಹತ್ತು ಇಪ್ಪತ್ತು...

ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು... ಸರಿಯಾಗಿ ಜ್ಞಾಪಕ ಇಲ್ಲ. ತಪ್ಪಿದ್ದರೆ, ಸರಿಯಾದದ್ದನ್ನು ತಿಳಿಸಿ... ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ... --------~ *~ --------- ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು ಇಪ್ಪತ್ತು ಹತ್ತು ಮೂವತ್ತು ತೋಟದಿ ಮಾವಿನ ಮರವಿತ್ತು ಮೂವತ್ತು ಹತ್ತು ನಲವತ್ತು ಮಾವಿನ ಮರದಲಿ ಕಾಯಿತ್ತು ನಲವತ್ತು ಹತ್ತು ಐವತ್ತು ಮಾವನು ಕಂಡನು ಸಂಪತ್ತು ಐವತ್ತು ಹತ್ತು ಅರವತ್ತು ಕಲ್ಲನು ಬೀರಿದ ಸಂಪತ್ತು ಅರವತ್ತು ಹತ್ತು ಎಪ್ಪತ್ತು ಮಾವಿನ ಹಣ್ಣು ಉದುರಿತ್ತು ಎಪ್ಪತ್ತು ಹತ್ತು ಎಂಬತ್ತು ಮಾಲಿಯ ಕಂಡನು ಸಂಪತ್ತು ಎಂಬತ್ತು ಹತ್ತು ತೊಂಬತ್ತು ಸಂಪತ್ತು ಕಂಡನು ಆಪತ್ತು ತೊಂಬತ್ತು ಹತ್ತು ನೂರು ಓಡಿ ಮನೆಯ ಸೇರು... --------~ *~ --------- --ಶ್ರೀ

Rating
Average: 5 (1 vote)

Comments