ಹನಿಗಳು-೨

Submitted by Premashri on Wed, 12/05/2012 - 14:55

         ೧
ಸಾಧಿಸುವ ಛಲವಿದ್ದಾಗ
ದಾರಿ ಕಾಣುವುದು
ಹೆಜ್ಜೆ ಮುಂದಿಟ್ಟಂತೆ

ಇಲ್ಲದಿರೆ
ನೆವ, ಅಡ್ಡಿಗಳೇ
ಕಣ್ಮುಂದೆ ಕುಣಿಯುವುದು
ಹೆಜ್ಜೆ ಮುಂದಿಡದಂತೆ

           ೨
ತವರಿನ ನೆನಪು ಕಾಡಿತ್ತು
ದುಃಖ ಉಮ್ಮಳಿಸುತ್ತಿತ್ತು
ಹಿತನುಡಿ ಕಾಯ್ದಿತ್ತು
ಒಳನಡೆದಳು
ನೀರುಳ್ಳಿ ಹೆಚ್ಚತೊಡಗಿದಳು

Rating
No votes yet

Comments

venkatb83

Wed, 12/05/2012 - 15:36

"ಇಲ್ಲದಿರೆ
ನೆವ, ಅಡ್ಡಿಗಳೇ
ಕಣ್ಮುಂದೆ ಕುಣಿಯುವುದು
ಹೆಜ್ಜೆ ಮುಂದಿಡದಂತೆ"

ಪ್ರೇಮಾ ಶ್ರೀ ಅವ್ರೆ
2 ವರ್ಷ ಒಂದು ವಾರಗಳಿಂದ ನೀವು ಸಂಪದ್ದಲ್ಲಿದ್ದು ಹಲವು ಅತ್ಯುತ್ತಮ ಬರಹಗಳನ್ನು ಬರೆದಿರುವಿರಿ. ಆದರೆ ಯಾವೊಂದನ್ನು ನಾ ನೋಡಿರಲಿಲ ಈಗಸ್ಟೆ ನಿಮ್ಮ ಪ್ರೊಫೈಲ್ ನೋಡಿ ನಿಮೆಲ್ಲ ಬರಹಗಳನ್ನು ಓದಿ ಪ್ರತಿಕ್ರಿಯಿಸಿರುವೆ.. ನಿಮ್ಮ ಬರವಣಿಗೆ ಸರಳವೂ ಚಿಕ್ ಚೊಕ್ಕವೂ ಆಗಿದೆ.

ನನ್ನಿ .

ಶುಭವಾಗಲಿ

\|/

ಮರೆತಿರುವಿರಿ,ನನ್ನ ಎಷ್ಟೊಂದು ಬರಹಗಳಿಗೆ ನೀವು ಮೆಚ್ಚುಗೆಯ ಪ್ರೋತ್ಸಾಹಕ ನುಡಿಗಳನ್ನು ಬರೆದಿರುವಿರಿ.ನಿಮ್ಮ ಮತ್ತು ಇತರ ಸಂಪದಿಗರ ಪ್ರತಿಕ್ರಿಯೆಗಳೇ ನನಗೆ ಬರೆಯಲು ಸ್ಪೂರ್ತಿ.
ಧನ್ಯವಾದಗಳು ಸಪ್ತಗಿರಿಯವರೆ.