ಹನಿಗಳು

ಹನಿಗಳು

  ೧      
ಬೆಳಕನು ಬೀರುತ ರಂಗನು ಹರಡುತ 
ಮೂಡಣದಿ ದಿನಕರನ ಮೆರವಣಿಗೆ !
ಮೊಗ್ಗುಗಳ ಮೊಗದಲಿ ಹಕ್ಕಿಗಳ ಉಲಿಯಲಿ   
ಮುಂಜಾವಿನ ಚಂದದ ಬರವಣಿಗೆ !

  ೨
ಆಲಿಕಲ್ಲು ಸಹಿತ
ಶುರು ಗಾಳಿ ಮಳೆ
ಮುಂಬಾಗಿಲಿಗೆ ಬಂದ
ನಾನು ಸೂಜಿಕಲ್ಲು
    ೩
ಬೆರಳುಗಳು ಅರಳಿಸುತಿವೆ
ಅಂಗಳದಲ್ಲಿ ರಂಗವಲ್ಲಿ
ಮುಂಜಾವು ಮೂಡಿಸುತಿದೆ 
ಮನದಲ್ಲಿ ರಂಗಿನ ಬಳ್ಳಿ
     ೪
ಶಿಶಿರದಲಿ ಹೊನ್ನಎಲೆಗಳಿಗೆ
ಇಳೆಗಿಳಿಯುವ ಆತುರ
ವಸಂತದಲಿ ಚಿಗುರೆಲೆಗಳಿಗೆ
ಮೆರೆದಾಡುವ ಕಾತರ

Rating
No votes yet

Comments