ಹನಿಯ ಪ್ರೇಮ ಕಾವ್ಯ
ಮೇಘದಿಂದ ಜಾರಿದ
ನೀರ ಬಿಂದು
ಧರೆಯ ಬೆರೆಯೆ
ಬೀಜವೊಂದು
ಮೊಳಕೆಯಾಗಿ
ಸೃಷ್ಟಿ ಮೂಲವಾಯಿತು ....
ಬಿದ್ದ ಹನಿಯು
ಕಡಲ ತಡಿಯ ಚಿಪ್ಪ
ಸೇರಿ ಮುತ್ತಾಗಿ
ಪ್ರೇಮಿಕೆಯ ಕೊರಳ
ಸೇರೆ ಅವಳ
ಒಲವು ಪ್ರೇಮಿಗೊಲಿದು
ಅಲ್ಲೇ ಪ್ರೇಮ
ಕಾವ್ಯ ಸೃಷ್ಟಿಯಾಯಿತು....
ಕಮಲ ಬೆಲಗೂರ್
Rating
Comments
ಉ: ಹನಿಯ ಪ್ರೇಮ ಕಾವ್ಯ
ಮೇಡಂ ವಂದನೆಗಳು
ಹನಿಯ ಪ್ರೇಮ ಕಾವ್ಯ ಮತ್ತು ಹೂವೆ ಹೂವೆ ನಿನ್ನ ಚೆಲುವಿಗೆ ಕಾರಣವೇನೆ?' ಕವನಗಳನ್ನು ಒಂದು ಸುಲಲಿತ ಓಘವಿದೆ, ಸುಂದರ ಲಹರಿಯನ್ನೊಳಗೊಂಡ ಅರ್ಥಪೂರ್ಣ ಕವನಗಳು,, ಹೊಸ ವರ್ಷದ ಶುಭಾಶಯಗಳೊಂದಿಗೆ ಧನ್ಯವಾದಗಳು.
In reply to ಉ: ಹನಿಯ ಪ್ರೇಮ ಕಾವ್ಯ by H A Patil
ಉ: ಹನಿಯ ಪ್ರೇಮ ಕಾವ್ಯ
ವಂದನೆಗಳು ಸರ್,
ತಮ್ಮ ಅನಿಸಿಕೆಗೆ ಧನ್ಯವಾದಗಳು.