ಹನಿಹನಿಗೂಡಿದರೆ ಹಳ್ಳ

ಹನಿಹನಿಗೂಡಿದರೆ ಹಳ್ಳ

 ಈಚೆಗೆ ಒಂದು ಬ್ಲಾಗ್ ಬರಹವನ್ನೋದಿದಾಗ, ಅಲ್ಲೊಂದು ಟಿಪ್ಪಣಿ ಹಾಕಿದೆ. ಆಮೇಲೆ, ಆ ಟಿಪ್ಪಣಿ ಎಲ್ಲಕಾಲಕ್ಕೂ, ಎಲ್ಲ ದೇಶಕ್ಕೂ ಹೊಂದುವಂತಹದ್ದು ಎನ್ನಿಸಿ, ಅದನ್ನೇ ಇಲ್ಲಿ ಬರೆಯುತ್ತಿದ್ದೇನೆ.

ಪ್ರಯತ್ನವಿಲ್ಲದೆ ಫಲಿತಾಂಶವಿಲ್ಲ ಅನ್ನುವ ವಿಷಯ ಗೊತ್ತಿದ್ದೇ. ಹಾಗೇ, ಬೆಳಗಾಗೇಳುವಷ್ಟರಲ್ಲಿ ದೊಡ್ಡವರಾದವರು ಯಾರೂ ಇಲ್ಲ. ಅದಕ್ಕೇ ನಮಗೆ ದೊರಕುವ ಪ್ರತಿಫಲ ಚಿಕ್ಕದೇ ಆದರೂ, ಪ್ರಯತ್ನವನ್ನು ಬಿಡಬಾರದು ಎನ್ನುವ ಮಾತನ್ನೇ ಈ ಸುಭಾಷಿತ ಹೇಳುತ್ತಿದೆ. 

ಇರುವೆಯಾದರೇನು? ಹೋಗುತಿರಲು ದಾಟಬಹುದು ಯೋಜನ ನೂರು
ಗರುಡನಾದರೇನು? ಅಲುಗದಿರಲು ನಿಂತಲ್ಲೇ ತಾನೇ ನಿಲುವನು?

ಇದರ ಮೂಲ ಹೀಗಿದೆ:

ಗಚ್ಚತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನ್ಯಪಿ |
ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ ||

गच्छत् पिपीलिका याति योजनानाम् शतान्यपि ॥

अगच्छन् वैनतेयोपि पदमेकं न गच्छति ॥

ಹನಿ ಹನಿಗೂಡಿದರೆ ಹಳ್ಳ ಅನ್ನುವ ಮಾತನ್ನು ಮರೆಯದಿರೋಣ ! ಸಣ್ಣ ಕೆಲಸಗಳನ್ನು ಮಾಡುತ್ತ, ಅದರಿಂದಲೇ ನಮ್ಮ ಹಿರಿದಾಸೆಗಳನ್ನು ಕೈಗೂಡಿಸಿಕೊಳ್ಳುಬಹುದು ಎನ್ನುವುದನ್ನು ಯಾವಾಗಲೂ ನೆನೆಯೋಣ!

-ಹಂಸಾನಂದಿ  

 

Rating
No votes yet