ಹನಿ ಹನಿ ಪ್ರೇಮ್ ಕಹಾನಿ....
ಅ೦ತು ಈ ಶನಿವಾರ ’ಮು೦ಗಾರು ಮಳೆ’ಯಲ್ಲಿ ನೆನೆದೆ.ಬಿಡುಗಡೆಯಾಗಿ ಸರಿಸುಮಾರು ಅರ್ಧ ವರ್ಷ ಕಳೆದರು ಚಿತ್ರವನ್ನು ನೊಡದಿರುವುದಕ್ಕೆ ನನ್ನದೆ ಆದ ಕೆಲ ವೈಯಕ್ತಿಕ ಕಾರಾಣಗಳಿವೆ.ಇರಲಿ,ಅದೆಲ್ಲದರ ಚರ್ಚೆ ಇಲ್ಲಿ ಬೆಡ.
ಈ ಚಿತ್ರ ನಾನು ಇನ್ನು ನೊಡಿಲ್ಲವೆ೦ದು ತಿಳಿದು,ಸಿಟ್ಟಾಗಿ,ಆಯ್ಯೊ ಪಾಪಿ ಏನ್ನುವ ದ್ರಷ್ಟಿ ಬೀರುವ ನನ್ನ ಅಸ೦ಖ್ಯಾತ ಸ್ನೆಹಿತರು ಹಾಗು ಮು೦ಗಾರು ಮಳೆಯ ಭಕ್ತ ಮ೦ಡಳಿ "ಮುಮ ನೊಡದ ನೀನು ಇದ್ದರೆಷ್ತು,ಇಲ್ಲದ್ದಿದ್ದರೆಷ್ತು,ನೀನು ಹುಟ್ಟಿದ್ದೆ ವೆಸ್ಟ್..." ಯೆ೦ದು ಹಿಡಿಶಾಪ ಹಾಕಿದ್ದರಿಂದ ನನಗೆ ಒಳಗೊಳಗೆ ವೊ೦ಥರಾ ಪಾಪ ಪ್ರಘ್ನೆ ಕಾಡುತ್ತಿತ್ತು. ಚಿತ್ರ ನೊಡದಿದ್ದರೆ ಇವರು ನನಗೆ ಬಹಿಶ್ಕಾರ ಹಾಕುವುದು ಖಾತ್ರಿ ಯೆ೦ಬ ಬಲವಾದ ಗುಮಾನಿ ಹರಡಿದ್ದರಿಂದ, ಬೇರೆ ವಿಧಿ ಇಲ್ಲದೆ ಹೋಗಿ ಥೇಟರಿನಲ್ಲಿ ಕುಳಿತೆ.
ನಿಜಕ್ಕು ಚಿತ್ರ ತು೦ಬಾ ಚೆನ್ನಾಗಿ ಮೂಡಿ ಬಂದಿದೆ(ನನ್ನಿಂದ ಪ್ರತ್ಯೆಕವಾಗಿ ಋಜುವಾತು ಪಡಿಸಿಕೊಳ್ಳಬೆಕಾಗಿಲ!!),ಹೀಗಾಗಿ ಕೋನೆಯವರಿಗೂ ನಿಮಗೆ ಸಿನಿಮಾ ಒ೦ದಿಷ್ತು ಬೋರ್ ಹೊಡೆಸುವುದಿಲ್ಲ.ಮು೦ಗಾರು ಮಳೆಯ ಮೊದಲ ಫ್ರೇಮಿನಿಂದ,ಮುಂದೆನಾಗುತ್ತದೆಂಬ ತುಡಿತ ನಿಮ್ಮನ್ನು ಇನ್ನಷ್ತು ಕಾತರದಿಂದ ವೀಕ್ಷಿಸುವಂತೆ ಮಾಡುತ್ತದೆ.ಹೇಳಿಕೊಳ್ಳುವಂಥಾ ಕಥೆ ಇರದಿದ್ದರು ನಿರುಪಣೆ ಕ್ರಿಸ್ಪಿಯಾಗಿದೆ. ನಿರ್ದೆಶನದಲ್ಲಿರುವ ಶಿಸ್ತು ಹಾಗು ಚಿತ್ರದ ಸಹಜತೆ ಮು೦ಗಾರು ಮಳೆ ಯ ಪ್ಲಸ್ ಪಾಇನ್ಟ್.
ಹಾಡುಗಳು ಹಾಗು ಸಂಗೀತವೆ ಚಿತ್ರದ ಜೀವಾಳ.ಜಯಂತ ಕಾಯ್ಕಿಣಿಯವರ ಸಾಹಿತ್ಯ ನೇರ ಹ್ರದಯಕ್ಕೆ ಇಳಿದು ನಿಮ್ಮನ್ನು ಕಾಡುತ್ತದೆ.ಪ್ರಾಯಃ ಇಸ್ಟೊಂದು ಹ್ರುದಯಸ್ಪಷ್ರಿ ಹಾಡುಗಳು ಇತ್ತಿಚಿನ ಕನ್ನಡ ಸಿನಿಮಾಗಳಲ್ಲಿ ಬ೦ದಿರುವುದು ಇದೆ ಮೊದಲು ಎ೦ದರೆ ತಪ್ಪಾಗಲಾರದು.ಮಧುರವಾದ ಸಂಗೀತ ಹಾಡುಗಳನ್ನು ಮಾದಕತೆಯಿಂದ ತುಳುಕಿಸಿದೆ.ಮಲೆನಾಡಿನ ಪ್ರಕ್ರತಿ ಸಿರಿಯ ಸಮ್ರದ್ಧತೆ ಪ್ರೆಕಶಕನ ಮನ ತಣಿಸಿದೆ.
ಇದು ನಾಯಕಪ್ರಧಾನ ಚಿತ್ರ,ಹೀಗಾಗಿ ಸಹಜವಾಗಿಯೆ ಗಣೆಶ್ ನಿಮ್ಮನ್ನು ಆವರಿಸಿಕೊಂಡು ಬಿಡುತ್ತಾರೆ.ನಾಯಕ ಅನುಭವಿಸುವ ಪ್ರತಿಯೊಂದು ಭಾವನೆಗಳಲ್ಲಿ ನೀವು ಸಹಸ್ಪಂದಿಯಾಗಿ ಬಿಡುತ್ತಿರಿ.ಚಿತ್ರದ ಕೊನೆಯ ಘಟ್ಟದಲ್ಲಿ ,ಮು೦ಗಾರು ಮಳೆ ಒಂದು ದಿಕ್ಕಿನಲ್ಲಿ ಸಾಗಿದರೆ ಪ್ರೆಕ್ಶಕರೆಲ್ಲರು ಗಣೆಶ ಅನುಭವಿಸುವ ಭಾವನೆಗಳಲ್ಲಿ ಸಿಕ್ಕಿ ನಲಗುತ್ತಾರೆ. .ಹೀಗೆ ಈ ಭಾವನೆಗಳ ಹಾಗು ನಿಜ ಜೀವನದ ಮಾನಸಿಕ ಧ್ರುವೀಕರಣ ನಿಮ್ಮಲ್ಲಿ ಒ೦ದು ವೊಇಡ್ ಕ್ರೆಯೆಟ್ ಮಾಡುತ್ತದೆ.ಈ ಗುಂಗಿನಿಂದ ಹೊರಬರಲು ನಿಮಗೆ ಸ್ವಲ್ಪ ಹೊತ್ತೆ ಬೇಕಾಗಬಹುದು.ನೀವು ತುಂಬಾ ಎಮೊಶನಲ್ ಅಗಿದ್ದರೆ ನಿಮ್ಮ ಭಾವನೆಗಳನ್ನು ಹತೋಟಿಗೆ ತರುವುದು ಸ್ವಲ್ಪ ಕಸ್ಟವೇ...... ಅಸ್ಟೂಂದು ಮಾಂತ್ರಿಕತೆ ವದಗಿಸಿದ್ದಾರೆ ನಿರ್ದೆಶಕ ಯೋಗರಾಜ
ಭಟ್.
ಮದುವೆ ನಿಶ್ಕರ್ಷೆಯಾಗಿ ಇನ್ನೊಂದು ವಾರದಲ್ಲಿ ಹಸೆಮಣೆ ಏರುವ ಹುಡುಗಿಯನ್ನು ’ಪಟಾ’ಯಿಸುವ ಟಿಪ್ಸ್ಗಳೇನಾದರು ಬೇಕಾಗಿದ್ದರೆ ಮು೦ಗಾರು ಮಳೆಯನ್ನು ನೊಡಿ.ಇವುಗಳನ್ನು ಗಣೆಶ್ ನಿಮಗಾಗಿ ಧಾರಾಳವಾಗಿಯೆ ಒದಗಿಸಿದ್ಡಾರೆ. ಅಸ್ಟೊಂದು ಎದೆಗಾರಿಕೆ ಇದ್ದರೆ ನೀವು ವ೦ದು ಕೈ ನೋಡಿ.ಹುಡುಗಿಯೊಬ್ಬಳನ್ನು ಬಿಟ್ಟರೆ,ಬೇರೇಲ್ಲ ಶೊಡಶೋಪಚಾರಗಳು ನಿಮಗೆ ಸಿಗುವುದು ಗ್ಯಾರಂಟಿ.
ಒಟ್ಟಿನಲ್ಲಿ ಒಮ್ಮೆ ನೊಡಬಹುದಾದ ಮುಂಗಾರು ಮಳೆ.ಕನ್ನಡದ ಎಪ್ಪತ್ತು ಹಾಗ ಎಂಬತ್ತರ ದಶಕದ ಸುವರ್ಣ ಯುಗದ ಚಿತ್ರಗಳನ್ನು ನೆನೆಪಿಸುವ ಹಾಗು ಸದಾ ನೆನಪಿನಲ್ಲಿ ಉಳಿಯುವ ಚಿತ್ರಗಳಲ್ಲಿ ಇದು ಒಂದು ಎನ್ನಲು ಅಡ್ಡಿ ಇಲ್ಲ.ಕನ್ನಡದಲ್ಲಿ ಸಧಭಿರುಚಿಯ ಚಿತ್ರಗಳು ಇನ್ನಸ್ಟು ಬರಲಿ ಎಂಬುದೆ ಎಲ್ಲರ ಹಾರೈಕೆ.ಆದರೆ ಒಂದು ಯಶಸ್ವಿ ಮು೦ಗಾರು ಮಳೆಯ ಜಾಡು ಹಿಡಿದು ಜಡಿಮಳೆ,ಸೋನ ಮಳೆ,ಹಿಂಗಾರು ಮಳೆ,ಮಳೆ ಬಂತು ಮಳೆ (ಮತ್ತೆ ಬಂದರು ಬರಬುಹುದು!!)ಹೀಗೆ ನಾಯಿಕೊಡೆಗಳಂತೆ ಹಲವಾರು ’ಪ್ರೇಮ ಕಥೆ’ಗಳು, ಗೊತ್ತು ಗುರಿ ಇಲ್ಲದೆ,ಸಂತೆಗೆ ಮುನ್ನ ಮೂರು ಮಳ ಮಲ್ಲಿಗೆ ನೆಯ್ದ್ಂತೆ,ಇತ್ತ ಕಥೆಯು ಇಲ್ಲ, ಅತ್ತ ಸಹಜತೆಯು ಇಲ್ಲದೆ, ಚಿತ್ರಗಳು ಪ್ರೆಕ್ಶಕನಿಗೆ ರುಚಿಸದಂತೆ ಮಾಡುವುದು ಇತ್ತಿಚೀನ
ಕನ್ನಡ ಚಿತ್ರರಂಗದ ಓಂದು ವಿಪರ್ಯಾಸದ ಸಂಗತಿ. ಮುಂಬರುವ ಚಿತ್ರಗಳು ಹಾಗಾಗದಿರಲಿ ಎಂದು ಆಶಿಸೋಣಾ.
ಹೋಗುವ ಮುನ್ನ, ಈಗ ನಿಮ್ಮ ಗಾಡಿ ಮೆಕ್ಯಾನಿಕ್ಕುಗಳ ಶುಕ್ರದೆಸೆ.ಇದೆ ಗಣೆಶ್ ಅಭಿನಯದ ’ಚೆಲುವಿನ ಚಿತ್ತಾರ’ ಭಾರಿ ಯಶಸ್ಸು ಕಾಣುತ್ತಿದೆಯಂತೆ(ಗಣೆಶ್ ಮೆಕ್ಯಾನಿಕ್ಕಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ).ಚಿತ್ರಕಥೆಯ ಪ್ರಭಾವಕ್ಕೊಳಗಾದ ಹದಿ ಹರೆಯದ ಹೈಸ್ಕುಲ್ ಕಾನ್ವೆಂಟ್ ಪೋರಿಯರು ಮೆಕ್ಯಾನಿಕ್ಕುಗಳ ಹಿಂದೆ ನನ್ನೆ ಪ್ರೀತಿಸು ಎಂದು ದೊಂಬಾಲು ಬಿದ್ದಿದ್ದಾರಂತೆ.ಆಹಾ! ಎಂಥಾ ಸ್ವರ್ಗ ಸುಖಾಃ ಎಂದು ,ಈ ಹಾಳಾದ ,ದಿನಕ್ಕೆ ಹತ್ತು ತಾಸು ಮೊನಿಟರ್ ನೊಡುವ,ಅರಸಿಕ ಕೆಲಸಕ್ಕೆ ಸಲಾಮು ಹೆಡೆದು,ಪಾನರ್ ಹಿಡಿದು ಯಾವುದಾದರು ಗರ್ಲ್ಸ ಹೈಸ್ಕುಲ್ ಬಳಿ ,ನಲ್ಲೆಯರ ಜೊತೆ ಲಲ್ಲೆ ಹೊಡೆಯುವ ತುಂಟ ಯೋಚನೆ ನಿಮ್ಮಲ್ಲ್ಲಿ ಸುಳಿದರೆ ಜೋಕೆ.ಚಿತ್ರದ ಕೊನೆಯಲ್ಲಿ ನಾಯಕ , ನಾಯಕಿ ಸಿಗದೆ (ನನ್ನಹಾಗೆ) ಹಚ್ಛನಾಗುತ್ತಾನಂತೆ.ನಯಕಿ ಹಾಯಾಗಿ ಗಂಡನ ಮನೆ ಸೇರುತ್ತಾಳಂತೆ.
ಪಾನರ್ ಇಲ್ಲವೆ ಮೋನಿಟರ್ ಆಯ್ಕೆ ನಿಮಗೆ ಬಿಟ್ಟಿದ್ದು...
Comments
ಉ: ಹನಿ ಹನಿ ಪ್ರೇಮ್ ಕಹಾನಿ....