ಹನಿ ಹನಿ ---- ಮಳೆ ಹನಿಯ ಜೊತೆ

ಹನಿ ಹನಿ ---- ಮಳೆ ಹನಿಯ ಜೊತೆ

೧)ದೂರದಲ್ಲಿ ಕಂಡದ್ದನ್ನು ಬೆಳಕೆಂದು ಭಾವಿಸಿ ಅವಳು ಬಿದ್ದುದು ಬೆಂಕಿಗೆ.


೨) ಪ್ರೀತಿ ಅನ್ನೋದೇ ಇಲ್ಲ ಎಂದು ವಾದಿಸುತ್ತಿದ್ದ ಆಕೆ ಪ್ರೀತಿ ಬಿಟ್ಟರೆ ಬೇರೇನು ಇಲ್ಲ ಎಂಬಂತೆ ಆಗಿರೋದು ಮಾತ್ರ ವಿಚಿತ್ರ .


೩)ಪ್ರೀತಿ ಅನ್ನೋ  ಮಾಯೆಯಲ್ಲಿ ಬೀಳೋದೆ ಇಲ್ಲ ಎಂದು ಹಾರಾಡಿ ಹಾರಾಡಿ ಕೊನೆಗೂ ಬಿದ್ದಳು ಮದುವೆ ಎಂಬ ಕಣಿವೆಯಲ್ಲಿ.


೪)ಅಮರ ಮಧುರ ಪ್ರೇಮ ಎಂಬ ಕನಸಲ್ಲಿ ನಾಯಕಿಯಾಗಿದ್ದ ಆಕೆ ಕೊನೆಗೆ  ಸೈಡ್ ಆಕ್ಟರ್ ಕೂಡ ಆಗದೇ ಇದ್ದುದ್ದು ದುರಂತವೇ?


೫)ಅವಳನ್ನು ನೋಡಲು ಕನ್ನಡಿಯೇ ನಾಚುತ್ತಿತ್ತು ಆಗ .ಈಗ ಕನ್ನಡಿ ನೋಡಲೂ ಹಿಂಜರಿಯುತ್ತಾಳೆ .ಎಲ್ಲಾ ಕಾಲದ ಮಹಿಮೆ


೬)ಹೂವಿನಂತೆ ಹೆಣ್ಣು ನೀನು ಅದನ್ನು ಸವಿಯುವ ದುಂಬಿ ನಾನು ಎಂದಾಗ ನಗುತ್ತಾ ಸ್ವಾಗತಿಸಿದವಳು ಸವಿ ಮುಗಿದ ಮೇಲೆ ದುಂಬಿ ಹಾರಲು ಅನುವಾದಾಗ ಬೋರ್ಗರೆದು ಅತ್ತಳು ನಿಜ ತಿಳಿಯಲಿಲ್ಲ ತಾನು ಎಂದು.


೭) ಯಾವ ಹುಡುಗನಿಗೂ ನಾನು ಕಡಿಮೆ ಇಲ್ಲಾ ಅವರಂತೆ ನಾನೂ ಇರಬಲ್ಲೆ ಎಂದು ತಲೆ ಎತ್ತಿ ನಡೆಯುತ್ತಿದ್ದವಳು  ಉಬ್ಬಿದ ಹೊಟ್ಟೆ ತೋರಿಸಲಾರದೆ ತಲೆ ತಗ್ಗಿಸುತ್ತಿದ್ದಾಳೆ.


೮)ಪ್ರಕೃತಿಯ ಚೆಲುವನ್ನೆಲ್ಲಾ  ಹೊತ್ತ ಆಕೆ ಅವನ ಮೋಸವನ್ನು ಸಹಿಸಲಾರದೆ ಪ್ರಕೃತಿಯ ಮತ್ತೊಂದು ಮುಖವನ್ನು ತೋರಿಸಿದಳು.ಆತ ಕಂಗಾಲಾದ.


೯) ಹಿರಿಯರಿಗೆ ಗೌರವ ತೋರಿಸಬೇಕು ಎಂದು ಗಂಡನಿಗೆ ಉಪದೇಶಿಸಿದ ತೌರ  ಕಡೆಯ ಹಿರಿಯರಿಗೆ ಮಾತ್ರ ಎಂಬುದನ್ನು ಕೊನೆಯಲ್ಲಿ ಸೇರಿಸಿದಳು.


 

Rating
No votes yet

Comments