ಹನ್ನೆರಡು ಹುಣ್ಣಿಮೆಗಳು: ದಯವಿಟ್ಟು ವಿವರ ತಿಳಿಸಿ.

ಹನ್ನೆರಡು ಹುಣ್ಣಿಮೆಗಳು: ದಯವಿಟ್ಟು ವಿವರ ತಿಳಿಸಿ.

ಕನ್ನಡದಲ್ಲಿ ವರ್ಷದ ಪ್ರತಿಯೊಂದು ಹುಣ್ಣಿಮೆಗೂ ಬೇರೆ ಬೇರೆ ಹೆಸರುಗಳಿವೆ. ಈ ಹೆಸರುಗಳು ಕನ್ನಡದ ಮನಸ್ಸು ಹುಣ್ಣಿಮೆಯನ್ನು ಯಾವ ಬಗೆಯ ಶ್ರೀಮಂತಿಕೆಯಲ್ಲಿ ಗ್ರಹಿಸಿಕೊಂಡಿದೆ ಅನ್ನುವುದನ್ನೂ ಸೂಚಿಸುವಂತಿದೆ.

ಜನವರಿ-ಬನದ ಹುಣ್ಣಿಮೆ
ಫೆಬ್ರವರಿ-ಭಾರತ ಹುಣ್ಣಿಮೆ
ಮಾರ್ಚ್-ಹೋಳಿ ಹುಣ್ಣಿಮೆ
ಏಪ್ರಿಲ್-ದವನದ ಹುಣ್ಣಿಮೆ
ಮೇ-ಆಗಿ ಹುಣ್ಣಿಮೆ ಮತ್ತು (ಅಧಿಕ) ಕಾರಹುಣ್ಣಿಮೆ
ಜೂನ್- ಕಾರ ಹುಣ್ಣಿಮೆ
ಜುಲೈ-ಕಡ್ಲಿ ಕಡುಬು ಹುಣ್ಣಿಮೆ [ಗುರುಪೂರ್ಣಿಮಾ]
ಆಗಸ್ಟ್-ನೂಲ ಹುಣ್ಣಿಮೆ
ಸೆಪ್ಟೆಂಬರ್-ಅನಂತ ಹುಣ್ಣಿಮೆ
ಅಕ್ಟೋಬರ್-ಸೀಗೆ ಹುಣ್ಣಿಮೆ
ನವೆಂಬರ್-ಗೌರಿ ಹುಣ್ಣಿಮೆ
ಡಿಸೆಂಬರ್-ಹೊಸ್ತಿಲ ಹುಣ್ಣಿಮೆ

ಕ್ಯಾಲೆಂಡರ್ ನೋಡಿ ದಿನಚರಿ ನಡೆಸುತ್ತಾ ನಾವು ನಿಸರ್ಗದ ಸಂಬಂಧ ಕಳಕೊಂಡಿರುವುದರಿಂದ ಈ ಹುಣ್ಣಿಮೆ ಹೆಸರುಗಳೂ ಮರವೆಗೆ ಸಂದಿವೆ. ನನಗೆ ತಿಳಿದಂತೆ ಉತ್ತರ ಕರ್ನಾಟಕದಲ್ಲಿ ಪ್ರತಿ ಹುಣ್ಣಿಮೆಗೂ ಒಂದೊಂದು ವಿಶಿಷ್ಟ ಆಚರಣೆಯೂ ಇದೆ. ಆದರೆ ಅವೆಲ್ಲ ತಿಳಿದಿಲ್ಲ. ನಮ್ಮಂಥ “ತಿಳಿದವರು” ಅವನ್ನೆಲ್ಲ ಕಳೆದುಕೊಂಡಿದ್ದೇವೆ. ಕೆಲವು ಹುಣ್ಣಿಮೆಗಳ ಹೆಸರು ಅರ್ಥ ಪೂರ್ಣ. ಉದಾಹರಣೆಗೆ ಜೂನ್ ತಿಂಗಳ ಮಳೆಕಾಲ, ಕಾರ್ಗಾಲದ್ದು ಕಾರ ಹುಣ್ಣಿಮೆ ಎಂದು ತಿಳಿಯುತ್ತದೆ. ಆದರೆ ಬನದ ಹುಣ್ಣಿಮೆ, ಸೀಗೆ ಹುಣ್ಣಿಮೆ, ನೂಲ ಹುಣ್ಣಿಮೆ ಇವೆಲ್ಲ ಯಾಕೆ ಏನು ಮರೆತಿದ್ದೇವೆ. ಅಥವಾ ವರ್ಷದ ಒಂದೊಂದು ತಿಂಗಳಲ್ಲೂ ಬರುವ ಹುಣ್ಣಿಮೆಗಳ ಬೆಳಕಿನ ವ್ಯತ್ಯಾಸವನ್ನೂ ಇವು ಸೂಚಿಸುತ್ತವೆಯೋ ಏನೋ! ಪ್ರಾದೇಶಿಕವಾಗಿ ಈ ಹುಣ್ಣಿಮೆಗಳಿಗೆ ಬೇರೆ ಬೇರೆ ಹೆಸರುಗಳೂ ಇದ್ದಾವು. ಗೊತ್ತಿರುವವರು ದಯವಿಟ್ಟು ತಿಳಿಸಿ. ಹಾಗೆಯೇ ನಿಮ್ಮ ನೆನಪಿನಲ್ಲಿ ಇರುವ ಆಯಾ ಹುಣ್ಣಿಮೆ ಸಂಬಂಧದದ ಆಚರಣೆಗಳನ್ನೂ. ಹುಣ್ಣಿಮೆಗಳು ಕಳೆದುಹೋಗದಂತೆ ನೆನಪು ಮಾಡಿಕೊಳ್ಳೋಣ, ಆಗದೇ?

Rating
Average: 4.8 (9 votes)

Comments