ಹಬ್ಬ

ಹಬ್ಬ

ಪುಕ್ಕಟೆ O.S. ಗಳು ಇವೆ ಎಂದು ಅಲ್ಲಿ ಇಲ್ಲಿ ಕೇಳಿ, ಓದಿ ತಿಳಿದಿತ್ತು. ಈ ಪುಕ್ಕಟೆ o.s ಗಳೆಂದರೆ ಯಾರೊ ಕೆಲಸ ಇಲ್ಲದವರು ಸಮಯ ಕಳೆಯಲು ಮಡುತ್ತಿರುವ ಕೆಲಸವೆಂದು ತಿಳಿದಿದ್ದೆ ಆದರೆ ಹಬ್ಬದಲ್ಲಿ ಭಾಗವಹಿಸಿದಾಗಲೇ ಗೊತ್ತಾಗಿದ್ದು ಎಂತ ಮಹಾನ್ ಕೆಲಸ ಮಾಡಿದ್ದಾರೆ ಎಂದು ಈಗಾಗಲೆ ಬಹು ರಾಷ್ಟ್ರೀಯ ಕಂಪನಿಗಳು ಭಾರತದ ವ್ಯವಸಾಯ ಕ್ಷೇತ್ರವನ್ನು ತಮ್ಮ ಮುಷ್ಠಿಯಲ್ಲಿ ತೆಗೆದುಕಿಳ್ಳುವತ್ತ ಯಶಸ್ವಿ ಕಾಣುತಿದ್ದಾರೆ ಇದರ ವಿರುದ್ಧವಾಗಿ ಅಲ್ಲೊಬ್ಬ ಇಲ್ಲೊಬ್ಬ ಸ್ವಯಂ ಪ್ರೇರಿತರು ಸಹಜ ಕೃಷಿಯಂತದನ್ನು ತೋರಿಸಿ ಕೊಟ್ಟು ಏಕಸ್ವಾಮ್ಯವಾಗುದನ್ನು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಈ ತಂತ್ರಂಶಗಳ ವಿಷಯದಲ್ಲಿ ಕೂಡ ಇದನ್ನು ತಪ್ಪಿಸುವಲ್ಲಿ ಈ ಮೈಸೂರಿನ ಸ್ವಯಂ ಘೋಷಿತರು ಆಯೋಜಿಸಿದ್ದ ಹಬ್ಬ ತುಂಬ ಪ್ರಯೋಜನಕಾರಿಯಾಗಿದೆ. ಅದರೆ ನಮ್ಮಂತ ಆಂಗ್ಲ ಭಾಷಾ ಜ್ಞಾನದ ಕೊರೆತೆ ಇರುವ ಹಾಗು ತಂತ್ರಾಂಶದ ಒಳ ತಿರುಳು ತಿಳಿಯದ ನಮ್ಮಂತವರು ಈ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ.

ಹಬ್ಬದಲ್ಲಿ ಲಿನಿಕ್ಸ ತಂತ್ರಾಂಶ ಪುಕ್ಕಟೆಯಾಗಿ ಕೊಟ್ಟಿದ್ದು ನನಗೇನೋ ಸರಿ ಬರಲಿಲ್ಲ, ಸ್ವಲ್ಪವಾದರೂ ಹಣ ಪಡೆಯ ಬೇಕಾಗಿತ್ತು, ಅಂದು ನೀವು ಕೊಟ್ಟ ಜ್ಙಾನ ಬೆಲೆ ಕಟ್ಟಲಾಗದ್ದು.

ಬಸವರಾಜು ಟಿ.ವಿ.

Rating
No votes yet

Comments