ಹಮ್ಮು ತೊರೆದವಳು
ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು
ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು
ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು
ನಲ್ಲ ಕಣ್ಣೆದುರಲ್ಲಿ ಬಂದಮೇಲೀತರಳೆ ಸೆಡವೆಂತು ತೋರಿಯಾಳು?
ಸಂಸ್ಕೃತ ಮೂಲ (ಅಮರುಕನ ಅಮರು ಶತಕ, ಪದ್ಯ-೨೮):
ಭ್ರೂಭಂಗೇ ರಚಿತೇಽಪಿ ದೃಷ್ಟಿರಧಿಕಮ್ ಸೋಽತ್ಕಂಠಂ ಉದ್ವೀಕ್ಷ್ಯತೇ
ರುದ್ಧಾಯಾಮಪಿ ವಾಚಿ ಸಸ್ಮಿತಮಿದಮ್ ದಗ್ಧಾನನಮ್ ಜಾಯತೇ |
ಕಾರ್ಕಶ್ಯಂ ಗಮಿತೇಽಪಿ ಚೇತಸಿ ತನುಃ ರೋಮಾಂಚಮಾಲಂಬತೇ
ದೃಷ್ಟೇ ನಿರ್ವಹಣಮ್ ಭವಿಷ್ಯತಿ ಕಥಮ್ ಮಾನಸ್ಯ ತಸ್ಮಿನ್ ಜನೇ ||
-ಹಂಸಾನಂದಿ
Rating