ಹರಿಶಿಣದ ಎಲೆ ಗಟ್ಟಿ

ಹರಿಶಿಣದ ಎಲೆ ಗಟ್ಟಿ

ಎಲ್ಲರೂ ಸೌತೆ ಕೊದ್ದೆಲು, ಗೋಳಿಬಜೆ, ಮಸಾಲೆದೋಸೆ, ಬೋಂಡಾ, ಜಾಮೂನು ಬಗ್ಗೆ ಮಾತಾಡುತ್ತಿದ್ದರೆ ಆಹಾ! ಬಾಯಲ್ಲಿ ನೀರೂರುತ್ತಿದೆ. ರೂಪರವರು ನನಗೆ ಬೇರೆ ಅಡಿಗೆ ಬರಲ್ಲ ಅಂದುಕೊಂಡಿದ್ದಾರೆ. :-) ಅದಕ್ಕೆ ಹಾಗೇ ಯೋಚನೆ ಮಾಡ್ತಿದ್ದಾಗ idea ಹೊಳೆಯಿತು. ಹರಿಶಿಣ ಎಲೆ ಗಟ್ಟಿ. ಏನೂ ರುಚಿ ಇರುತ್ತೆ ಅಂದುಕೊಂಡಿದ್ದೀರಿ. ಬಲ್ಲವರೇ ಬಲ್ಲವರು ಅದರ ರುಚಿಯಾ. ಹಾಗೇ ಅದರ ಬಗ್ಗೆ ಬರೆದರೆ ಪರದೇಶದಲ್ಲಿರುವ ನಮ್ಮ ಕರಾವಳಿ ಮಿತ್ರರಿಗೆಲ್ಲಾ ಖುಶಿಯಾಗಬಹುದು ಅಂದುಕೊಂಡೆ. ಬೆಂಗಳೂರಿಗರು ಕಡುಬು ಮಾಡುವ ಹಾಗೆ ಅಕ್ಕಿಹಿಟ್ಟನ್ನು ಮುದ್ದೆಯ ಹಾಗೆ ಮಾಡಿ ಅದನ್ನು ಈ ಅರಿಶಿನದ ಎಲೆಗೆ ಬಳಿಯಬೇಕು. ಅದರ ಮಧ್ಯಕ್ಕೆ ಹೂರಣವನ್ನು (ಹೂರಣಕ್ಕೆ : ತೆಂಗಿನಕಾಯಿ ತುರಿ, ಬೆಲ್ಲ, ಏಲಕ್ಕಿ ಪುಡಿ ಹಾಕಿ ರುಬ್ಬಿ ಪಾಕ ಮಾಡಿಕೊಂಡದ್ದು) ಇಟ್ಟು ಎಲೆಯನ್ನು ಮಡಚಿ ಕುಕ್ಕರಿನಲ್ಲಿ ಇಡ್ಲಿಯ ಹಾಗೆ ಬೇಯಿಸಬೇಕು. ಆಹಾ! ಏನು ಪರಿಮಳ ಬರುತ್ತೆ ಅಂತೀರಿ? ಮಾಡಿ ನೋಡಿ ಚೆನ್ನಾಗಾದರೆ ನನಗೆ ಕಳಿಸಿ.

ವಿ.ಸೂ : ಈ ಎಲೆ ಮಂಗಳೂರಿನ ಅಂಗಡಿಗಳಲ್ಲಿ ನಾಗರ ಪಂಚಮಿ ಯ ದಿವಸದಿಂದ ದೀಪಾವಳಿಯವರೆವಿಗೂ ದೊರೆಯುತ್ತದೆ.

Rating
No votes yet

Comments