ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!
ಹಿಂದೊಮ್ಮೆ http://sampada.net/blog/savithru/24/02/2009/17274 ಬ್ಲಾಗಿನಲ್ಲಿ
"ಮೇಲಿನ ರೀತಿಯ ಪದದ ಹುಟ್ಟು ಮತ್ತು ಅರ್ಥೈಸುವಿಕೆ ಅದೇನೇ ಇರಲಿ .....ಇಂದಿನ ಮತ್ತು ಹಿಂದಿನ ನಿತ್ಯ ಬಳಕೆಯಲ್ಲಿ ಧರ್ಮ ಅಂದರೆ ರಿಲಿಜನ್ ಅನ್ನೋ ರೀತಿಯಲ್ಲೇ ಬಳಕೆಯಾಗಿದೆ. ನನಗೆ ಮತಕ್ಕೂ ಧರ್ಮಕ್ಕೂ ರಿಲಿಜನ್ ಗೂ ಈಗಿನ/ಹಿಂದಿನ ಬಳಕೆಯಲ್ಲಿ ಏನೂ ವ್ಯತ್ಯಾಸ ಕಾಣ್ತಾ ಇಲ್ಲ."
ಅಂತ ಕೊಸರು ಸೇರಿಸಿದ್ದೆ. ಆದರೆ ಈ ವಿಷಯ ಚರ್ಚೆಗೆ ಬರದ ಕಾರಣ ಮುಂದೆ ಬರೆಯಲು ಮರ್ತು ಹೋಗಿತ್ತು. ಇವತ್ತು ಶನಿವಾರ - ರಜ. ಹಾಗಾಗಿ ಎರಡು ಮಾತುಗಳು.
......................................
ಪಂಪ ತನ್ನ ಆದಿಪುರಾಣದಲ್ಲಿ ( ಪೂರ್ವ ಭವಾವಳಿ , ೧ನೆ ಪೀಠಿಕೆ ) ಯಲ್ಲಿ ಹೀಗೆ ಹೇಳ್ತಾನೆ.
ಇದುವೆ ಸುಕವಿ ಪ್ರಮೋದ
ಪ್ರದಮಿದುವೆ ಸಮಸ್ತ ಭವ್ಯ ಲೋಕ ಪ್ರಮುದ
ಪ್ರದಮೆನೆ ನೆಗಲ್ದಾದಿ ಪುರಾ
ನದೊಳರಿವುದು ಕಾವ್ಯ ಧರ್ಮಮಂ ಧರ್ಮಮುಮಂ
ಈ ಕಂದಪದ್ಯದಲ್ಲಿ ಕೊನೆಯ ಸಾಲು ನಮಗೆ ಸ್ವಲ್ಪ ಮುಖ್ಯ.
"ಆದಿಪುರಾಣದೊಳರಿವುದು ಕಾವ್ಯ ಧರ್ಮಮಂ ಧರ್ಮಮುಮಂ " ಪಂಪ ತನ್ನ ಆದಿಪುರಾಣದಲ್ಲಿ ಕಾವ್ಯ ಧರ್ಮ ಇದೆ, ಧರ್ಮವೂ ಇದೆ ಅನ್ನುತ್ತಾನೆ.
ಆದಿ ಪುರಾಣ, ಮೊದಲ ತೀರ್ಥಂಕರ ವೃಷಭದೇವ ಮತ್ತವನ ಮಕ್ಕಳು ಭರತ-ಬಾಹುಬಲಿಯರ ಕಥೆ ಹೇಳುವ ಮತ್ತು ಅದರ ಮೂಲಕ ಜೈನ ಧರ್ಮವನ್ನು ಸಾರುವ / ಎತ್ತಿ ಹಿಡಿಯುವ ಪುರಾಣ.
ಆದಿಪುರಾಣದ ವಿಷಯವನ್ನು ತೆಗೆದುಕೊಂಡರೆ ಇಲ್ಲಿ ಪಂಪನ "ಧರ್ಮ" ಪ್ರಯೋಗ ಜೈನ ಧರ್ಮ = ಜೈನ religion ಅಂತಾನೆ ಅರ್ಥ ಕೊಡುತ್ತೆ. ಧರ್ಮ ಅಂತ standalone ಪದವಾಗಿ ಬಳಸಿದಾಗ ಅಲ್ಲಿ ಧರ್ಮ ಅಂದರೆ religion ಅಂತ ಅರ್ಥ. "ಕಾವ್ಯ ಧರ್ಮ" ಅಂತ ಬೇರೆ ಪದೊದೊಡನೆ ಬಂದಾಗ ಧರ್ಮ ಪದದರ್ಥ ಬೇರೆಯಾಗುತ್ತೆ.
ಅಂದಹಾಗೆ ಪಂಪನ ಕಾಲ ೧೦ನೆ ಶತಮಾನ. ಆದಿಪುರಾಣ ಬರೆದಿದ್ದು ಕ್ರಿಸ್ತ ಶಕ ೯೪೨ರಲ್ಲಿ.
......................................
ಬಸವಣ್ಣನ ಈ ವಚನ ಗಮನಿಸೋಣ.
ದಯವಿಲ್ಲದಾ ಧರ್ಮವಾವುದಯ್ಯಾ,
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ
ಇಲ್ಲಿಯೂ ಸಹ ಬಸವಣ್ಣ ನ ಧರ್ಮ ಪದ ಬಳಕೆ religion ಪದವನ್ನೇ ಸೂಚಿಸುತ್ತೆ.
ಪ್ರಾಣಿಬಲಿ, ಬಲವಿಲ್ಲದ ಜನರ ಅವಮಾನ, ಶೋಷಣೆ ಇವನ್ನೆಲ್ಲ ಒಂದು ಕಾಲದಲ್ಲಿ ( ಮತ್ತು ಈಗಲೂ ) ಧರ್ಮದ / religion ನ ಆಚರಣೆಯೇ ಅಂತ ತಿಳಿದವರಿದ್ದರು. ಇಂತ ಧರ್ಮಾಚರಣೆ ಬಗ್ಗೆ ನೆ ಬಸವಣ್ಣ ಹೇಳ್ತಾ ಇರೋದು.
ನನಗಂತೂ ಬಸವಣ್ಣನ ಈ ವಚನದಲ್ಲಿನ ಧರ್ಮ ಪದ religion ಗೆ ಸಂವಾದಿ ಅಂತಾನೆ ಅನ್ನುಸ್ತ ಇರೋದು.
ಅಂದ ಹಾಗೆ ಬಸವಣ್ಣನ ಕಾಲ ೧೨ ನೆ ಶತಮಾನ.
..................................
ಹೀಗಿನಂತೆ ಹೊರಗಿನ ಪ್ರಭಾವ ಪಂಪ, ಬಸವಣ್ಣನ ಕಾಲೆಕ್ಕೆ ನಮ್ಮ ಮೇಲೆ ಆಗಿರಲಿಲ್ಲ.
....................................
ಇದನೆಲ್ಲ ಯಾಕೆ ಬರೀಬೇಕಾಯ್ತು ಅಂದರೆ ಸುಮಾರು ಹತ್ತನೇ ಶತಮಾನದೊಷ್ಟೊತ್ತಿಗೆ ನಮ್ಮಲ್ಲಿ ಧರ್ಮ ಪದ ಮತ /religion ಪದದರ್ಥವನ್ನು ಆಗಲೇ ಪಡೆದಿಕೊಂದಿತ್ತು. ಮತ್ತು ಅನೇಕ ಶತಮಾನಗಳ ನಂತರ ಇಂಗ್ಲಿಷ್ ನಮ್ಮಲ್ಲಿ ಕಾಲಿಟ್ಟ ನಂತರ religion ಗೆ ಸಂವಾದಿಯಾಗಿ ಧರ್ಮವನ್ನು ಸರಿಯಾಗಿಯೇ / ಹಿಂದೆ ಬಳಕೆಯಲ್ಲಿದ್ದ ರ್ಥದ್ದಲ್ಲಿಯೇ ಬಳಸುಲ ಶುರುಮಾಡಿದರು.
ಧರ್ಮ ಪದದ ವ್ರ್ಯುತ್ಪತ್ತಿ / ಮೂಲ ಅರ್ಥ ಏನೇ ಇರಲಿ... ಭಾಷೆಯ / ಪದಗಳ ಅರ್ಥ ಬದಲಾಗೋದು / ವಿಕಾಸವಾಗೋದು/ ಸಂಕುಚಿತವಾಗೋದ ಜೀವಂತ ಭಾಷೆಯ ಲಕ್ಷಣ. ಹಾಗೇನೆ ಒಂದೇ ಪದಕ್ಕೆ ಅನೇಕ ಅರ್ಥಗಳು (ಮೂಲದಿಂದಲೂ) ಇರಲು ಸಾಧ್ಯ. ನನ್ನ ಪ್ರಕಾರ ಕನ್ನಡಿಗರಲ್ಲಿ ಮೊದಲಿಂದಲೂ ಧರ್ಮ ಪದಕ್ಕೆ religion ಅನ್ನೋ ಅರ್ಥಾನೂ ಇದೆ.
......................................
ಸಾರಾಂಶ :
೧. ಅರ್ಥ ವ್ಯತ್ಯಾಸ / ವಿಕಾಸ/ ಸಂಕೋಚ ಜೀವಂತ ಭಾಷೆಯ ಲಕ್ಷಣ. ಭಾರತದಲ್ಲಿ ಸಂಸ್ಕೃತವನ್ನೊಂದು ಬಿಟ್ಟರೆ , ಕನ್ನಡವನ್ನೂ ಸೇರಿಕೊಂಡು ಹಿಂದಿ, ತಮಿಳು ತೆಲುಗು, ಮಲಯಾಳಂ, ಮುಂತಾದ ಹೆಚ್ಚಿನ ಭಾಷೆಗಳು ಜೀವಂತ ಭಾಷೆಗಳು. ಹಾಗಾಗಿ ಬಳಕೆಯಲ್ಲಿರುವ ಜೀವಂತ ಭಾಷೆಗಳು ನಮಗೆ ಅರ್ಥ ಗ್ರಹಿಸಲು ಆಧಾರವಾಗಬೇಕು.
೨. ನಮಲ್ಲಿಗೆ ಇಂಗ್ಲೀಶ್ ಬರಕ್ಕೆ ಮುಂಚೆ "ಧರ್ಮ" ಪದದ ಅರ್ಥ ಮುಖ್ಯ. ಸಧ್ಯಕ್ಕೆ ಕೇವಲ ಎರಡು ಉದಾಹರಣೆಗಳು ಮಾತ್ರ ನನ್ನ ತಲೆಗೆ ಹೊಳೆದವು. ಇನ್ನೂ ಅನೇಕ ಕೊಡಬಹುದು.
೩. ಮೇಲಿನ ಉದಾಹರಣೆಗಳನ್ನು ಗಮನಿಸಿದರೆ ಈಗಿನ ನಮ್ಮ religion definition ಗೂ ಧರ್ಮ ಪದ ಬಳಕೆಗೂ ನನಗೆ ವ್ಯತ್ಯಾಸ ಕಾಣುತಾ ಇಲ್ಲ.
Comments
ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!
ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!
ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!
ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!
ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!
In reply to ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ! by abdul
ಉ: ಹಳೆಗನ್ನಡ ಸಾಹಿತ್ಯದಲ್ಲಿ ಧರ್ಮ!