ಹಳೆಯ ತುಣುಕುಗಳು !

ಹಳೆಯ ತುಣುಕುಗಳು !

ಗಾಂಧೀ ಸಹೋದರರು!

ಆತ,
ರಾಜಕೀಯದಲ್ಲಿದ್ದವನು
ವಿಮಾನವೇರಿ ಸತ್ತ;
ಈತ,
ವಿಮಾನದಲ್ಲಿದ್ದವನು
ರಾಜಕೀಯಕ್ಕಿಳಿದು .. .. ?!
*-*-*-*-*-*--*-*-*
೧೩ ಆಗಷ್ಟ್ ೧೯೮೧

(ಈ ಅಪೂರ್ಣ ಚುಟುಕ ೨೧ ಮೇ ೧೯೯೧ ರಂದು (ಅ)ನಿರೀಕ್ಷಿತವಾಗಿ ಪೂರ್ಣಗೊಂಡಿತು)

ಸ್ವಾರ್ಥಿ - ನಿಸ್ವಾರ್ಥಿ !

ನನ್ನಮ್ಮ ನನಗೆ ಕಲಿಸಿದ
ಮೊದಲಕ್ಷರ ಅ (ಮ್ಮ),
ನಮ್ಮ ಮೇಡಂ ಕಲಿಸಿದ
ಮೊದಲಕ್ಷರವೂ ಅ,
ಅಲ್ಲಾ, ನಮ್ಮಮ್ಮ
ಎಷ್ಟೊಂದು ಸ್ವಾರ್ಥಿ,
ನಮ್ಮ ಮೇಡಂ
ಅಷ್ಟೇ ನಿಸ್ವಾರ್ಥಿ!
*-*-*-*--*-*
೦೮ ಸೆಪ್ಟೆಂಬರ್ ೧೯೮೧

(ಇವೆರಡೂ ನನ್ನ ಅಪ್ರಕಟಿತ ಸಂಗ್ರಹದಿಂದ)

Rating
No votes yet