ಹಳೆಯ ಹಿಂದಿ ಹಾಡು - ನಿರುದ್ಯೋಗ ಮತ್ತು ಪ್ರೇಮ ಕುರಿತಾದದ್ದು

ಹಳೆಯ ಹಿಂದಿ ಹಾಡು - ನಿರುದ್ಯೋಗ ಮತ್ತು ಪ್ರೇಮ ಕುರಿತಾದದ್ದು

70ರ ದಶಕದಲ್ಲಿ ಭಾರತದಲ್ಲಿ ನಿರುದ್ಯೋಗ ಅತಿಯಾಗಿತ್ತು. ಆ ಹೊತ್ತಿನಲ್ಲಿ ಹಿಂದಿಯಲ್ಲಿ ರೋಟಿ ಕಪಡಾ ಔರ್ ಮಕಾನ್ ಎಂಬ ಸಿನಿಮಾ ಬಂದಿತ್ತು . ಹೊಟ್ಟೆ, ಬಟ್ಟೆ ಮತ್ತೆ ಒಂದು ಸೂರು ಮನುಷ್ಯನ ಮೂಲ ಬಯಕೆಗಳು. ಇದು ಪಾಕಿಸ್ತಾನದಲ್ಲಿ ನ ಚುನಾವಣಾ ಘೋಷಣೆ ಕೂಡ ಆಗಿತ್ತು.
ಈ ಹಾಡಿನಲ್ಲಿ ನಾಯಕ ಮತ್ತು ನಾಯಕಿ ಪರಸ್ಪರ ಪ್ರೀತಿಸುತ್ತಿದ್ದರೂ ಮದುವೆಯಾಗಿ ಸಂಸಾರ ಹೂಡಲು ಒಂದು ನೌಕರಿಗಾಗಿ ಕಾಯುತ್ತಿದ್ದಾರೆ.

ಹಾಡಿನ ಭಾವಾನುವಾದ :-

ಈ ಕಷ್ಟ ತಾಳಲಾಗದು,
ಈ ಮಳೆಗಾಲ ಮತ್ತು ಈ ವಿರಹ
ಕ್ಷಣಕ್ಷಣಕ್ಕೂ ನನ್ನನು ಕಾಡಿವೆ,
ನಿನ್ನ ನೌಕರಿ ಕೊಟ್ಟೀತು ನಾಲ್ಕು ಕಾಸು
ನನ್ನ ಲಕ್ಷ ಲಕ್ಷದ ಮಳೆಗಾಲ ಕಳೆದು ಹೋಗುತ್ತಿದೆ!

ಎಷ್ಟು ಶ್ರಾವಣಗಳು ಕಳೆದು ಹೋದವು,
ಆಸೆಯನ್ನು ಇಟ್ಟುಕೊಂಡು ಕುಳಿತೆ
ನನ್ನ ನಲ್ಲ ಸಿಗುವ ಶ್ರಾವಣ
ಬಂದೀತು ಎಂದಿಗೋ?
ಮಧುರ ಮಿಲನದ ಈ ಶ್ರಾವಣ
ಕೈಯಿಂದ ಜಾರಿ ಹೋಗುತ್ತಿದೆ
ನಿನ್ನ ನೌಕರಿ ಕೊಟ್ಟೀತು ನಾಲ್ಕು ಕಾಸು
ನನ್ನ ಲಕ್ಷ ಲಕ್ಷದ ಮಳೆಗಾಲ ಕಳೆದು ಹೋಗುತ್ತಿದೆ!

ಪ್ರೇಮಬಂಧನ ಇಂತಹುದು,
ಒಮ್ಮೆ ಸಿಲುಕಿದರೆ ಬಿಡುಗಡೆಯೇ ಇಲ್ಲ !
ನೌಕರಿಯದಾದರೋ ಏನು ಖಾತರಿ
ಇವತ್ತು ಸಿಗುತ್ತದೆ , ನಾಳೆ ಹೋಗುತ್ತದೆ!
ಆಕಾಶವೇ ಸ್ವಯಂವರ ಏರ್ಪಡಿಸಿದೆ
ಆದರೂ ನೀನು ಹಿಂಜರಿವೆ!

ಹಾಡನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಿ ಮತ್ತ ಕೇಳಿ
https://youtu.be/BxR7eBbLBfk

ಮೂಲ ಸಾಹಿತ್ಯ ಇಲ್ಲಿದೆ: -

ಅರೆ ಹಾಯ್ ಹಾಯ್ ಯೆ ಮಜಬೂರೀ
ಮೇ ಮೌಸಮ್ ಔರ್ ಯೆ ದೂರೀ
ಮುಜೆ ಪಲ್ ಪಲ್ ಹೈ ಹೈ ತಡ್ಪಾಯೆ
ತೇರೀ ದೋ ಟಕಿಯಾ ದೀ ನೌಕ್ರೀ
ಮೇರಾ ಲಾಖೋಂ ಕಾ ಸಾವನ್ ಜಾಯೆ
ಅರೆ ಹಾಯ್ ಹಾಯ್ ಯೆ ಮಜಬೂರೀ ...........
ಕಿತನೇ ಸಾವನ್ ಬೀತ್ ಗಯೇ,
ಬೈಠೀ ಹೂಂ ಆಸ್ ಲಗಾಯೆ
ಕಿಸ್ ಸಾವನ್ ಮಿಲೆ ಸಜನವಾ ,
ವೊ ಸಾವನ್ ಕಬ್ ಆಯೆ, ಕಬ್ ಆಯೆ
ಮಧುರ್ ಮಿಲನ್ ಕಾ ಯೆ ಸಾವನ್
ಹಾತೋಂ ಸೆ ನಿಕ್ಲಾ ಜಾಯೆ
ಓ ತೇರಿ ದೊ ಟಕಿಯಾ ದೀ ನೌಕ್ರೀ
ತೆ ಮೇರಾ ಲಾಖೋಂ ಕಾ ಸಾವನ್ ಜಾಯೆ
ಅರೆ ಹಾಯ್ ಹಾಯ್ ಯೆ ಮಜಬೂರೀ .............
ಪ್ರೇಮ್ ಕಾ ಐಸಾ ಬಂಧನ್ ಹೈ
ಜೋ ಬಂಧ್ ಕೆ ಫಿರ್ ನಾ ಟೂಟೆ
ಔರ್ ನೌಕರಿ ಕಾ ಹೈ ಹೈ ಭರೋಸಾ,
ಆಜ್ ಮಿಲೆ ಕಲ್ ಛೂಟೆ, ಕಲ್ ಛೂಟೆ
ಅಂಬರ್ ಪೆ ಹೈ ಧಾರ ಸ್ವಯಮ್
ಔರ್ ಫಿರ್ ಬೀ ತೂ ಘಬರಾಯೇ
ಓ ತೇರಿ ದೊ ಟಕಿಯಾ ದೀ ನೌಕ್ರೀ
ತೆ ಮೇರಾ ಲಾಖೋಂ ಕಾ ಸಾವನ್ ಜಾಯೆ
ಅರೆ ಹಾಯ್ ಹಾಯ್ ಯೆ ಮಜಬೂರೀ .............

Rating
No votes yet