ಹಳೆಯ ಹಿಂದಿ ಹಾಡು - ಸ್ನೇಹಿತ, ಸ್ನೇಹಿತನಾಗಿ ಉಳಿಯಲಿಲ್ಲ

ಹಳೆಯ ಹಿಂದಿ ಹಾಡು - ಸ್ನೇಹಿತ, ಸ್ನೇಹಿತನಾಗಿ ಉಳಿಯಲಿಲ್ಲ

ಇದು ಹಿಂದಿಯ ಸಂಗಮ್ ಎಂಬ ಮಲ್ಟಿ ಸ್ಟಾರರ್ ಚಿತ್ರದ ಹಾಡು. ಈ  ಯಶಸ್ವಿ ಚಿತ್ರದ ಬಗ್ಗೆ ಮಾಹಿತಿಯನ್ನು ನೀವು ಗೂಗಲ್ ನಿಂದ ಲೋ ಅಥವಾ ಹಿರಿಯರಿಂದಲೋ ಪಡೆಯಬಹುದು. (ಧಾರವಾಡದಲ್ಲಿ ಈ ಸಿನಿಮಾ ಬಿಡುಗಡೆಯಾದಾಗ ನೂಕುನುಗ್ಗಲು, ಲಾಠಿಚಾರ್ಜ್ ಆಗಿತ್ತಂತೆ!)
ಇದನ್ನು ಹಾಡಿದ್ದು ಮುಕೇಶ್.
ಈ ಹಾಡನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು ಮತ್ತು ಕೇಳಬಹುದು.
https://youtu.be/f6SUVCh8AD0

ಈ ಕೆಳಗೆ ಅದರ ಅರ್ಥವನ್ನುಕನ್ನಡದಲ್ಲಿ ಮತ್ತು  ಅದರ ಸಾಹಿತ್ಯವನ್ನು  ಕನ್ನಡ ಲಿಪಿಯಲ್ಲಿ   ಕೊಟ್ಟಿದ್ದೇನೆ.
 
ಸ್ನೇಹಿತ, ಸ್ನೇಹಿತನಾಗಿ ಉಳಿಯಲಿಲ್ಲ
ಪ್ರೀತಿ, ಪ್ರೀತಿಯಾಗಿ ಉಳಿಯಲಿಲ್ಲ.
ಬದುಕೇ , ನನಗೆ ನಿನ್ನ ಮೇಲೆ ವಿಶ್ವಾಸ ಉಳಿಯಲಿಲ್ಲ!
 
 
ಪ್ರೀತಿಯನ್ನು ಜೋಪಾನವಾಗಿ ಇಡಲು ಯಾರಿಗೆ ಒಪ್ಪಿಸಿ  ಹೋಗಿದ್ದೆನೋ 
ಆ ಗೆಳೆಯ ನೀನೆ ಇದ್ದೆ. ಅದು ನೀನು ತಾನೇ? 
ಯಾರು ನನ್ನ ಜೀವನದಲ್ಲಿ ಜೊತೆಯ ಪಯಣಿಗನಾಗಿದ್ದನೋ 
ಆ ಗೆಳೆಯ ನೀನೆ ಇದ್ದೆ. ಅದು ನೀನು ತಾನೇ ?
ಎಲ್ಲಾ ರಹಸ್ಯಗಳು ಬಯಲಾದವು;
ಗೌಪ್ಯತೆ ಏನೂ ಉಳಿಯಲಿಲ್ಲ
ಬದುಕೇ , ನನಗೆ ನಿನ್ನ ಮೇಲೆ ವಿಶ್ವಾಸ ಉಳಿಯಲಿಲ್ಲ!
 
ಅವಳು ಹಿಂಜರಿಯುತ್ತ ನನ್ನನ್ನು ಅಪ್ಪಿದಳು
ಅವಳ ಕೊರಳು ತುಂಬಿ ಬಂದಿತ್ತು
ಅದು , ನೀನು ಅಲ್ಲವಾದರೆ ಅದು ಯಾರು? ಅದು ನೀನು ತಾನೇ? 
ನನ್ನ ಪ್ರಯಾಣದ ವೇಳೆ ಕಂಗಳಲ್ಲಿ ಕಂಬನಿ ಇದ್ದವಳು
ಅದು ನೀನು ಅಲ್ಲವಾದರೆ ಅದು ಯಾರು? ಅದು ನೀನು ತಾನೇ? 
ಪ್ರೀತಿಯ. ಮತ್ತಿನ ರಾತ್ರಿ ಕಳೆಯಿತು , ಮೃದುತ್ವ ಕೂಡ ಉಳಿಯಲಿಲ್ಲ
ಬದುಕೇ , ನನಗೆ ನಿನ್ನ ಮೇಲೆ ವಿಶ್ವಾಸ ಉಳಿಯಲಿಲ್ಲ!
 
ಸಾಹಿತ್ಯ:
 
ದೋಸ್ತ್ ದೋಸ್ತ್ ನಾ ರಹಾ,
ಪ್ಯಾರ್, ಪ್ಯಾರ್ ನಾ ರಹಾ.
ಜಿಂದಗಿ ಹಮೆ ತೇರಾ ಐತಬಾರ್ ನಾ ರಹಾ
ಅಮಾನತೇ ಮೇ ಪ್ಯಾರ್ ಕಿ,
ಗಯಾ ಥಾ ಜಿಸ್ಕೊ ಸೋಂ ಪ್ ಕರ್
ವೋ ಮೇರೆ ದೋಸ್ತ್ ತುಂ ಹಿ ಥೆ
ತುಂ ಹೀ ತೋ ಥೆಜೋ
ಜಿಂದಗಿ ಕೀ ರಾಹ್ ಮೇ ಬನೆ ಥೆ ಮೇರೆ ಹಮ್ ಸಫರ್
ವೋ ಮೇರೆ ದೋಸ್ತ್ ತುಂ ಹಿ ಥೆ
ತುಂ ಹೀ ತೋ ಥೆ
 
ಸಾರೆ ಭೇದ್ ಖುಲ್ ಗಯೆ, ರಾಜ್ದಾರ್ ನಾ ರಹಾ
ಜಿಂದಗಿ ಹಮೆ ತೇರಾ ಐತಬಾರ್ ನಾ ರಹಾ
 
ಗಲೇ ಲಗಿ ಸಹಮ್ ಸಹಮ್
ಭರೇ ಗಲೇ ಸೆ ಬೋಲ್ ಕೆ
ವೊ ತುಮ್ ನ ಥಿ ತೋ ಕೌನ್ ಥಾ, ತುಮ್ ಹೀ ತೋ ಥಿ
ಸಫರ್ ಕೆ ವಕ್ತ್ ಮೇ ಪಲಕ್ ಪೆ ಮೋತಿಯೊ ಕೋ ತೋಲತೀ
ವೊ ತುಮ್ ನ ಥಿ ತೋ ಕೌನ್ ಥಾ, ತುಮ್ ಹೀ ತೋ ಥಿ
ನಶೆ ಕಿ ರಾತ್ ಢಲ್ ಗಯಿ, ಅಬ್ ಖುಮಾರ್ ನಾ ರಹಾ
ಜಿಂದಗಿ ಹಮೆ ತೇರಾ ಐತಬಾರ್ ನಾ ರಹಾ
 

Rating
No votes yet