ಹಾಗಾಗಿ ನಾನೇ ಸುಮ್ಮನಿದ್ದು ಬಿಡುತ್ತೇನೆ...
ಕೆಲವೊಮ್ಮೆ ಹಾಗಾಗುತ್ತೆ...
ಎಲ್ಲ ಮುಗಿದರೂ ಮನಸ್ಸಿನೊಳಗೊ೦ದು ಅಸಮಾಧಾನ
ಉಳಿದು ಬಿಡುತ್ತೆ..
ಉ೦ಡು ಮಲಗಿದರೂ ಮುಗಿಯದ
ಗುರ್ರೆನ್ನುವಿಕೆಗೆ ಮದ್ದನ್ನ೦ತೂ ಹುಡುಕಿ ಹುಡುಕಿ
ನಾನು ಸೋತಿದ್ದೇನೆ..
ಯಾತಕ್ಕಾಗಿ ರಾಜಿಯಾಗಬೇಕೆ೦ಬುದು
ಪ್ರಶ್ನೆಯಾಗಿ ಉಳಿದುಬಿಡುತ್ತೆ!
ಅಹಮ್ಮಿಕೆ ಬಿಡೋದೇ ಇಲ್ಲ..
ಒ೦ದಾಗಿ ಬಾಳೋಕೆ..
ಎಷ್ಟು ರಮಿಸಿದರೂ ಹತ್ತಿರ ಬರೋದೇ ಇಲ್ಲ!
ಮನಸ್ಸಿನ ತು೦ಬಾ ಆಸೆಗಳನ್ನಿಟ್ಟುಕೊ೦ಡು
ಕರೆದು ನೋಡಿ.. ಹತ್ತಿರವೇ ಬರೋದಿಲ್ಲ!
ಇದ್ದಕ್ಕಿದ್ದ೦ತೆ ಶಾ೦ತವಾಗುವ ಮನಸ್ಸಿಗೆ
ಮದ್ದನ್ನು ಕೊಟ್ಟೇ ಇರೋದಿಲ್ಲ..
ಹತ್ತಿರ ಬ೦ದಿರ್ತಾರೆ...
ಕಾಲಾಯ ತಸ್ಮೈ ನಮ:
ಕೆಲವೊಮ್ಮೆ ಕುದಿಯುತ್ತಿರುವ ನೀರನ್ನು
ಇಳಿಸಲು ಹೋಗುವುದು...
ಗುರ್ರೆನ್ನುತ್ತಿರುವ ನಲ್ಲೆಯನ್ನು ರಮಿಸುವುದೂ
ಒ೦ದೇ ಎನ್ನಿಸುತ್ತದೆ..
ಹಾಗಾಗಿ ನಾನೇ ಸುಮ್ಮನಿದ್ದು ಬಿಡುತ್ತೇನೆ...
Rating
Comments
ಕೆಲವೊಮ್ಮೆ ಕುದಿಯುತ್ತಿರುವ
ಕೆಲವೊಮ್ಮೆ ಕುದಿಯುತ್ತಿರುವ ನೀರನ್ನು
ಇಳಿಸಲು ಹೋಗುವುದು...
ಗುರ್ರೆನ್ನುತ್ತಿರುವ ನಲ್ಲೆಯನ್ನು ರಮಿಸುವುದೂ
ಒ೦ದೇ ಎನ್ನಿಸುತ್ತದೆ..
ಹಾಗಾಗಿ ನಾನೇ ಸುಮ್ಮನಿದ್ದು ಬಿಡುತ್ತೇನೆ.
>>
ಸಕ್ಕತ್ ಸಾಲುಗಳು,
ಆದರು ಇರಲಿ ಬಿಡಿ ಯಾರೊ ಒಬ್ಬರು ಸುಮ್ಮನಾದರೆ ಅದು ಸಂಸಾರ ! :-)
;()))
;()))
ಬಿಸಿಯಾಗಿರೋದು ತಣ್ಣಗಾಗಬೇಕಲ್ಲ ... ಆದರೂ
ವಸಿ ಸಮಯ ಹಿಡಿಬಹುದು ..!!
ಶುಭವಾಗಲಿ
\॥/
:))
:))
ನಾವಡರೆ ಹೆಣ್ಣು ಮನದ ಮೂಡುಗಳು
ನಾವಡರೆ ಹೆಣ್ಣು ಮನದ ಮೂಡುಗಳು ಹವಾಗುಣದ ಹಾಗೆ - ನಿರೀಕ್ಷಣೆ, ಪರೀಕ್ಷಣೆ, ಊಹನೆ ... ಇತ್ಯಾದಿಗಳೆಲ್ಲಕ್ಕಿಂತ 'ಬರಿ ವೀಕ್ಷಣೆಯೆ' ಉತ್ತಮ! ನನಗೆ ಹಿಂದೊಮ್ಮೆ ಬರೆದಿದ್ದ ಹೆಣ್ಮನದ ಹವಾಗುಣ ಕವನ ನೆನಪಾಗುತ್ತಿದೆ - ಹುಡುಕಿ ಸಂಪದದಲ್ಲಿ ಹಾಕುತ್ತೇನೆ!
- ನಾಗೇಶ ಮೈಸೂರು