ಹಾಗೆ ಮೂಡಿದ ಸಾಲುಗಳು
ಹಿಂದೂ ಮಹಾಕಾವ್ಯಗಳನ್ನು ಶಾಲಾ ಪಠ್ಯಗಳಲ್ಲಿ ಅಳವಡಿಸುತ್ತಾರೆ ಎಂಬ ಸುದ್ದಿಗಳು ಕಿವಿಗೆ ಬಿದ್ದ ಕೂಡಲೆ ಈ ಟೊಳ್ಳು ಜಾತ್ಯತೀತವಾದಿಗಳು ರೇಬಿಸ್ ಬಂದವರಂತೆ ಯಾಕಾಡ್ತಾರೆ? ಇಷ್ಟಕ್ಕು ಕೋಮುಭಾವನೆ ಪ್ರಚೋಧಿಸುವ,ಐಕ್ಯತೆಗೆ ಘಾಸಿಮಾಡುವ,ಅಶ್ಲೀಲತೆ ಪ್ರೇರೇಪಿಸುವ,ಹಿಂಸೆಯನ್ನು ಬಿಂಬಿಸುವ ಒಂದಾದರು ಸಾಲುಗಳನ್ನು ಅದರಿಂದ ಉಲ್ಲೇಖಿಸಲು ಇವರಿಗೆ ಸಾಧ್ಯವಿದೆಯೇ? ಮಹಾಕಾವ್ಯಗಳ ವಸ್ತು ಸಾರ್ವಕಾಲಿಕ ಸತ್ಯಗಳು.ಜೀವನದಲ್ಲಿ ಏನು ಮಾಡಬೇಕು ಏನು ಮಾಡಬಾರದು ಹೇಗೆ ಬದುಕಬೇಕು ಎಂಬುದನ್ನು ಹೇಳುತ್ತದೆ.ಜಗತ್ತಿನ ಧರ್ಮಗಳಲ್ಲಿಯೇ ಅತ್ಯಂತ ಪ್ರಾಯೋಗಿಕ ವಿಧಾನದಲ್ಲಿ ಜೇವನಕ್ರಮವನ್ನು ತಿಳಿಸಿಕೊಟ್ಟ ಧರ್ಮ ಹಿಂದೂ ಧರ್ಮ.ಭಗವದ್ಗೀತೆ,ರಾಮಾಯಣ,ಮಹಾಭಾರತಗಳಲ್ಲಿ ಅಡಕವಾಗಿರುವ ವಿಚಾರಗಳು ಎಲ್ಲಾ ಕಾಲ,ದೇಶ,ಧರ್ಮಗಳನ್ನು ಮೀರಿದ್ದು.ಒರ್ವ ನಾಸ್ತಿಕನು ಓದಿ ಒಪ್ಪಬಹುದಾದ ಗ್ರಂಥಗಳು. ನಾಗರಿಕತೆಗಳ ಹುಟ್ಟಿನಿಂದ ಇಲ್ಲಿಯವರೆಗೆ ಇತಿಹಾಸದ ಘಟನಾವಳಿಗಳನ್ನು ಅವಲೋಕಿಸಿದಾಗ ಹೆಚ್ಚಿನ ಹಿಂಸೆಗಳು ನಡದಿದ್ದು ಹೆಣ್ಣು ಹೊಣ್ಣು ಮಣ್ಣಿಗಾಗಿ.ಮಹಾಕಾವ್ಯಗಳೂ ಕೂಡ ಇದನ್ನೇ ಹೇಳುತ್ತದೆ ಅಲ್ಲವೇ? ನಮ್ಮ ಪೀಳಿಗೆಯವರು ಈ ಲೌಕಿಕ ಆಸಕ್ತಿಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡು ತಮ್ಮ ಭವಿಷ್ಯ ಉತ್ತಮಪಡಿಸಲು ಮಾರ್ಗದರ್ಶಕ ಗ್ರಂಥಗಳು ಅನಿವಾರ್ಯ ಅಲ್ಲವೇ? ತನ್ನ ಒಡಲಲ್ಲಿ ಅಗಾಧ ಜ್ಞಾನವನ್ನು ಇಟ್ಟುಕೊಂಡಿರುವ ಮಹಾಕಾವ್ಯಗಳನ್ನು ಪ್ರಶ್ನಿಸಲು ಈ ದುರ್ಬುದ್ಧಿಜೀವಿಗಳಿಗೆ ಏನು ಹಕ್ಕಿದೆ? -ಎಸ್.ಕೆ-
Comments
ಉ: ಹಾಗೆ ಮೂಡಿದ ಸಾಲುಗಳು
ಈ ಪ್ರತಿಕ್ರಿಯೆ ಓದಿದಾಗ ತಾವೆಷ್ಟು ಮೂರ್ಖರೆಂದು ಅರ್ಥವಾಯಿತು.ರಾಮಾಯಣ ಮಹಾಭಾರತ ನಡೆದಿಲ್ಲ ಎಂದು ಇದುವರೆಗೆ ಯಾರು ಸಾಧಿಸಿ ತೋರಿಸಿಲ್ಲ ಹಾಗೆಯೇ ಕಥೆಗಳಲ್ಲಿರುವ ಮೌಲ್ಯವನ್ನು ಅರಿಯಲು ಅವು ನಿಜವೇ ಆಗಿರಬೇಕಿಲ್ಲ..
ಉ: ಹಾಗೆ ಮೂಡಿದ ಸಾಲುಗಳು
ಎಲ್ಲಾ ದರ್ಮಗ್ರಂಥಗಳನ್ನೂ ಅಧ್ಯಯನ ಮಾಡಲು ಅವಕಾಸವಿದ್ದರೆ ಟೊಳ್ಳು, ಜೊಳ್ಳು ಹಾರಿಹೋಗಿ ಗಟ್ಟಿಕಾಳುಗಳು ಉಳಿಯುವುವು. ಜಾತ್ಯಾತೀತತೆ ಹೆಸರಿನಲ್ಲಿ ಹಿಂದೂ ದರ್ಮಗ್ರಂಥಗಳನ್ನು ಹೊರಗಿಡುವುದು ಮೂರ್ಖನಡೆಯಾಗುತ್ತದೆ. ಒಳ್ಳೆಯ ವಿಚಾರಗಳು ಎಲ್ಲಿಂದ ಬಂದರೂ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು.