ಹಾಗೆ ಮೂಡಿದ ಸಾಲುಗಳು
ಬಹುಮುಖ ಪಾತ್ರಧಾರಿ
ನಮ್ಮ ಶಿಕ್ಷಕ
ಅಂಕಿ-ಅಕ್ಷರಗಳನ್ನು
ಕಲಿಸುವ ಬೋಧಕ
ತಂದೆತಾಯಿಯಂತೆ
ಪೋಷಿಸಿ ಬೆಳೆಸೋ ಪಾಲಕ
ಕಷ್ಟದಲ್ಲಿ ಕೈಹಿಡಿದು
ಕಾಪಾಡುವ ರಕ್ಷಕ
ಸತ್ಪ್ರಜೆಯನ್ನು ರೂಪಿಸುವ
ಪ್ರಾಮಾಣಿಕ ನಿರ್ಮಾಪಕ
ಸರಿ-ತಪ್ಪುಗಳ ವ್ಯತ್ಯಾಸ
ತಿಳಿಸುವ ಮಾರ್ಗದರ್ಶಕ
ಶಿಸ್ತು ದೇಶಪ್ರೇಮ ದೈಹಿಕಕ್ಷಮತೆ
ಹೆಚ್ಚಿಸುವ ಶಸ್ತ್ರ ಬಳಸದ ಸೈನಿಕ
ಅನಾರೋಗ್ಯ ಬಂದಾಗ
ಉಪಚರಿಸುವ ಚಿಕಿತ್ಸಕ
ಮನರಂಜಿಸುವಂತೆ
ನಕ್ಕು ನಲಿಸುವ ವಿದೂಷಕ
ಕಲಿಸಿಕೊಡುವನು ಕಲೆ
ಸಂಗೀತ ನಾಟ್ಯ ನಾಟಕ
ಜ್ಞಾನವೆಂಬ ಬೀಜಬಿತ್ತಿ
ಬೆಳೆಬೆಳೆಯುವ ಕೃಷಿಕ
ಮಾತಿನಲ್ಲಿ ಮಂತ್ರಮುಗ್ಧರನ್ನಾಗಿಸುವ
ಮಾಟ ಗೊತ್ತಿಲ್ಲದ ಮಾಂತ್ರಿಕ
ಸಮಾಜದ ಪಾಲಿಗೆ
ಇವನು ಜನನಾಯಕ
ಎಂದೂ ಆಗದಿರಲಿ
ಮಕ್ಕಳ ಬಾಳಿಗೆ ಕೀಚಕ
-ಎಸ್. ಕೆ