ಹಾಗೇ ಸುಮ್ಮನೆ - ೧. ಸ್ವಮಠೇ ನಿಧನಂ  ಶ್ರೇಯಃ!

ಹಾಗೇ ಸುಮ್ಮನೆ - ೧. ಸ್ವಮಠೇ ನಿಧನಂ  ಶ್ರೇಯಃ!

ಒಬ್ಬನು ಒಂದು ಮಠದ ಅನುಯಾಯಿ - ಅವನು ಒಬ್ಬಳನ್ನು ಪ್ರೀತಿಸಿ ಮದುವೆಯಾಗಬಯಸಿದ್ದಾನೆ. ಆದರೆ ಅದಕ್ಕೆ ಆ ಮಠಾಧಿಪತಿಯ ಸಮ್ಮತಿಯಿಲ್ಲ.  ಇನ್ನೊಂದು ಮಠಾಧಿಪತಿಯು ಈ ಮಠಾಧಿಪತಿಯ ಮೇಲಿನ ಪೈಪೋಟಿಯಿಂದ ಈ ಮದುವೆಗೆ ಬೆಂಬಲಿಸುತ್ತಾನೆ. ಮುಂದೇನು ಆಗುತ್ತದೆ ?  ಆ ಸಂಗತಿ ಬಿಡಿ. ಈ ಸಂದರ್ಭದಲ್ಲಿ ಹೀಗೊಂದು ಮಾತು -
'ಸ್ವಮಠೇ ನಿಧನಂ  ಶ್ರೇಯಃ ,  ಪರಮಠ್ಠೇ ಭಯಾವಹಃ '   ಅಂತ ಶ್ರೀಕೃಷ್ಣನೇ ಹೇಳಿದ್ದಾನೆ'. ಈ ಲೇಖನ ಕನ್ನಡದ ಪ್ರತಿಭಾವಂತ ಮತ್ತು ಸದಭಿರುಚಿಯ ಶ್ರೇಷ್ಠ  ಹಾಸ್ಯಕ್ಕೆ ಹೆಸರಾದ  ಅ.ರಾ. ಸೇ.  ಅವರದ್ದು.   ಈ ವಾಕ್ಯವನ್ನು ಮೆಚ್ಚಿದ ನಾನು ಇಬ್ಬರು ಮೂವರು ಗೆಳೆಯರಿಗೆ whatsapp ಮೂಲಕ ಕಳಿಸಿದೆನು.  

   ಅವರು ಈ ವಾಕ್ಯವನ್ನು ಆಸ್ವಾದಿಸುವುದು ಇರಲಿ.  (ಅವರು ಸಂಸ್ಕೃತ ಬಲ್ಲವರು).   ಅವರಿಗೆ ಅರ್ಥವೇ  ಆದ ಹಾಗೆ ಕಾಣಲಿಲ್ಲ. ಹಾಗಂತ ಹೇಳಲೂ ಇಲ್ಲ. ಏನೂ ಪ್ರತಿಕ್ರಿಯೆ ನೀಡಲಿಲ್ಲ. 

ಇನ್ನೊಬ್ಬ  ಗೆಳೆಯ ಸೈನ್ಯ , ಕಾಶ್ಮೀರ , ಚೀನಾ ಮುಂತಾದ ಅಂತರ್ರಾಷ್ಟ್ರೀಯ ಸಂಗತಿಗಳ ಬಗೆಗೆ ನನಗೆ ಅನೇಕ ಇಂಗ್ಲೀಷ್ ಬರಹಗಳನ್ನು ಕಳಿಸುತ್ತಿರುತ್ತಾನೆ. ಅವನಿಗೆ  ಕಾಶ್ಮೀರ ಸಮಸ್ಯೆಯನ್ನು ಸೂಚಿಸುವ  , 'ಕೊರವಂಜಿ' (ಹಿಂದೆ ಇದ್ದ ಹಾಸ್ಯ ಪತ್ರಿಕೆ - ಈಗ ಅಪರಂಜಿ ಪತ್ರಿಕೆ ಇದೆ) ಯ ಬರಹ ವೊಂದನ್ನು ಕಳಿಸಿದೆ. ಆಮೇಲೆ ಅರ್ಥವಾಯಿತೆ  ಅಂತ ಕೇಳಿದೆ.   ಆಗಿರಲಿಲ್ಲ ಅನ್ನುವುದು ತಿಳಿಯಿತು.'  ಕಾಶ್ಮೀರ ಸಮಸ್ಯೆ ಬಗ್ಗೆ ಇದೆ,  ನೋಡಪ್ಪಾ ' ಅಂತ ಹೇಳಿದೆ.  details Please ಅಂತ ಕೇಳಿದ ಪುಣ್ಯಾತ್ಮ!   ಏನೂಂತ ವಿವರಿಸುವುದು ? 

ಇಂತಹ ಸುಸಂಸ್ಕೃತ ಹಾಸ್ಯವನ್ನು ಅರಿತು ನಲಿಯುವ ಮಂದಿ ಎಂದೂ ಕಡಿಮೆ ಸಂಖ್ಯೆಯವರೇ !  ಸಮಾನಧರ್ಮವಿದ್ದ ಒಬ್ಬ ಸಿಕ್ಕಿದರೆ ಸಾಕು ನಕ್ಕು ನಲಿಸಬಹುದು. ಸಂತೆಯನ್ನು ಕಟ್ಟಿಕೊಂಡು ನಮಗೇನು ?  ಅಂತ ಕೊರವಂಜಿಯನ್ನು ಆರಂಭಿಸಿದ ರಾ.ಶಿ.  ಅವರು ಒಂದೆಡೆ ಹೇಳುತ್ತಾರೆ.

 

Rating
Average: 4 (3 votes)

Comments

Submitted by Iynanda Prabhukumar Thu, 10/17/2019 - 11:50

ಸಾಮಾನ್ಯವಾಗಿ ನಮ್ಮ ಧರ್ಮವನ್ನು, ಧರ್ಮಗ್ರಂಥಗಳನ್ನು, ನಂಬಿಕೆಗಳನ್ನು (ಅದು ಮೂಢವಾದರೂ ಸರಿಯೇ) ಕುರಿತು ಲಘುವಾಗಿ ಹಾಸ್ಯ ಮಾಡಿದರೆ ನಾವು ಇಷ್ಟಪಡುವದಿಲ್ಲ. ಆದ್ದರಿಂದ ಅವನ್ನು ಅರ್ಥಮಾಡಿಕೊಳ್ಳಲೆತ್ನಿಸುವದೇ ಇಲ್ಲ. ಹೀಗಾಗಿ ಸಂಸ್ಕೃತ ಬಲ್ಲ ನಿಮ್ಮ ಮಿತ್ರರು ಮೌನಧೋರಣೆಯನ್ನು ತಾಳಿರಬಹುದು! ಅದೇ ಬೇರೆ ಧರ್ಮಗಳ ಬಗ್ಗೆ ಲಘುವಾಗಿಯೇ ಅಲ್ಲ, ಕಟುವಾಗಿಯೇ ಹಾಸ್ಯಮಾಡಿದರೆ ಅದೇನೋ ಮಹದಾನಂದವನ್ನು ಸವಿಯುತ್ತೇವೆ.

Submitted by smurthygr Sun, 10/20/2019 - 12:02

In reply to by Iynanda Prabhukumar

ಇದು ಸರಿ.  ಜನರಿಗೆ ಧರ್‍ಮದ ಬಗ್ಗೆ ಹೆಚ್ಚಿಗೇನೂ ತಿಳಿದಿರದಿದ್ದರೂ, ಆ ಬಗ್ಗೆ ತಾವೂ ಮಾತಾಡುವುದಿಲ್ಲ, ಬೇರೆಯವರು ಮಾತಾಡಿದರೂ ಅರ್‍ಥ ಮಾಡಿಕೊಳ್ಳುವ ಮನೋಧರ್ಮವೂ ಇಲ್ಲ. ಮುಖ್ಯವಾಗಿ ಪ್ರಶ್ನಿಸಿ ತಿಳಿದುಕೊಳ್ಳುವ ಆಸಕ್ತಿ ಇಲ್ಲ.  ಹಾಸ್ಯಕ್ಕೆ ಸ್ಪಂದಿಸುವುದಂತೂ ದೂರ ಉಳಿಯಿತು.