ಹಾಗೇ ಸುಮ್ ಸುಮ್ನೆ.... :)

ಹಾಗೇ ಸುಮ್ ಸುಮ್ನೆ.... :)

ಪ್ರೇಮಿಗಳ ದಿನ Valentines day ಒಂದೇ ದಿನ ಸಾಕಾ ???...

Valentines day ಏನು ಹಾಗಂದ್ರೆ ??? ಪ್ರೀತಿ ಮಾಡ್ತಾ ಇರೋವ್ರಿಗೆ ಹಗಲು ರಾತ್ರಿ ಏನು ಗೊತ್ತಾಗೋದಿಲ್ಲ, ಅಂತಾದ್ರಲ್ಲಿ ಪ್ರೇಮಿಗಳ ದಿನ ಅಂತನೇ ಯಾಕೆ ಕರೀತಾರೆ ??? ಈ ಆಲೋಚನೆ ನಿನಗೂ ಬಂದಿರಬಹುದು. ಅಲ್ವ ??? ಪ್ರೀತಿ ಮಾಡೋಕೆ ಶುರು ಮಾಡಿದ್ರೆ ಅದಕ್ಕೆ ಅಂತ್ಯ ಅನ್ನೋದೇ ಇರೋದಿಲ್ಲ. ಮನಸ್ಸಿಂದ ಬರೊ ಮಾತೆಲ್ಲಾ ಕವನ ಆಗತ್ತೆ. ಮನಸ್ಸಿನ ಭಾವನೆ ಹಂಚಿಕೊಳ್ಳೋಕೆ ನೀನು ಇರಲಿಲ್ಲ ಅಂದರೆ ಅದೇ ವೇದನೆ ಆಗತ್ತೆ.

ನಾವು ಕಟ್ಟಿರುವ ಪುಟ್ಟ ಕನಸಿನ ಲೋಕದಲ್ಲಿ ಇತ್ತೀಚೆಗೆ ನಮಗೆ ವಿಹರಿಸೋದಕ್ಕೆ ಸಮಯ ಸಿಕ್ತಾ ಇಲ್ಲ ಅಲ್ವ ?? ಏನು ಮಾಡೋದು ಹೇಳು ನೀನೆ. ನಾನು ನಿನ್ನಜೊತೆ ಮಾತಾಡೋಣ ಅಂದ್ರೆ ನನ್ನ ಸುತ್ತಾ ಸುತ್ತಾಡುತ್ತಿರುವ ಸಮಸ್ಯೆಗಳು ಏನು ಅನ್ನೋದು ನಿನಗೂ ಗೊತ್ತು ಅಲ್ವ... ಸ್ವಲ್ಪ ದಿನ adjust ಮಾಡ್ಕೊತೀಯ ಅಲ್ವ ??? ಈಗ ನಿನ್ನ ಮನಸ್ಸಲ್ಲಿ ಅನ್ನಿಸ್ತಾ ಇರ್ಬಹುದು "ಪ್ರತೀ ಸಲನೂ ನಾನೇ compromise ಆಗೋದು ಅಂತ. ಹೌದು ಕಣೇ ನನ್ನ ಪ್ರೀತಿಯ ಹುಡುಗಿ... ನಿನಗಾಗಿ ನಾನು ಕೂಡಾ ಏಷ್ಟೋ ವಿಚಾರದಲ್ಲಿ compromise ಆಗ್ತಾ ಇರ್ತೀನಿ. ಆದ್ರೆ ನಿನಗೆ ಅದೆಲ್ಲಾ ಹೇಳೋದಿಲ್ಲ ಅಷ್ಟೆ. ನಾನು ಮನಸ್ಸಲ್ಲಿ ನೊಂದಿದ್ದರೂ ನಿನ್ನ ಮಾತುಗಳನ್ನ ಕೇಳಿ ಸಮಾಧಾನ ಪಡ್ಕೋತೀನಿ. ನೀನು ಅಕಸ್ಮಾತಾಗಿ ಏನಾಯ್ತೂ ಅಂತ ಕೇಳಿದ್ರೆ ಮಾತ್ರ ನಾನು ನಿನ್ನ mood ನೋಡಿ ವಿಚಾರನ್ನ ಹೇಳ್ಬಹುದೋ ಇಲ್ವೋ ಅಂತ ಯೋಚನೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳೋದು. ನಾನು ಎಷ್ಟೋಸಲ ನಿನ್ನ ವಿಚಾರವನ್ನೇ ಮನಸ್ಸಿನಲ್ಲಿ ಆಲೋಚಿಸುತ್ತಿರುವಾಗ ಅದು ನಿನಗೆ ಗೊತ್ತಾಗಿ ನನ್ಗೆ call ಮಾಡ್ತೀಯೇನೋ ಅನ್ಸತ್ತೆ. ಆಗ ನಾನು "ನಿನ್ನ ಮನಸ್ಸಿನಲ್ಲಿ ನೆನಪಿಸ್ಕೊತಾ ಇದ್ದೆ ಕಣೇ" ಅಂತ ಹೇಳಿದ್ರೆ ನಿಂಗೆ ಸುಳ್ಳು ಅಂತ ಅನ್ನಿಸ್ಬಿಡತ್ತೆ. ನಾನೇನ್ ಮಾಡ್ಲಿ ಹೇಳು.

ನನ್ನಲ್ಲಿ ಪ್ರೇತಿಯಭಾವನೆ ಮೂಡಿಸಿದವಳು ನೀನು, ನನಗೆ ಪ್ರೀತಿಯ ಪಾಠ ಹೇಳಿಕೊಟ್ಟವಳು ನೀನು. ನನ್ನ ಈ ನೋವು ತುಂಬಿರುವ ಮನದಲ್ಲಿ ಸಮಾಧಾನದ ಲೀಪನ ಹಚ್ಚಿ ಬಂದ ಧನ್ವಂತರಿ ನೀನೆ. ನನ್ನ ಮನಸಲ್ಲಿ ಎನಾದರು ಬೇಸರವಿದ್ದಲ್ಲಿ ಅದನ್ನ ನೀನು ಕಂಡುಹಿಡಿದು ಬಿಡುತ್ತೀಯಲ್ಲ.... ಅಭ್ಭಾ !!!!!! ಹೇಗೆ ಕಂಡು ಹಿಡಿತೀಯ ನನ್ನ ಮುದ್ದು ಪುಟಾಣಿ ???? ನೊಡು ಒಮೊಮ್ಮೆ ನನಗೂ ಭಯ ಅನ್ನೋದು ಬಂದು ಕಾಡುತ್ತೆ ಕಣೇ, ನನ್ನಿಂದ ನೀನು ದೂರಾಗಿ ಬಿಡುತ್ತೀಯ, ನನ್ನ ನಿನ್ನ ಮಧುರ ಕ್ಷಣಗಳು ಕಗ್ಗತ್ತಲಲ್ಲಿ ಕರಗಿ ಹೋಗುತ್ತೇ, ನಾವಿಬ್ಬರೂ ಬರೀ ನೆನಪಲ್ಲಿ ನೆನಪಾಗಿ ಉಳಿದುಬಿಡುತೇವೆ ಅಂತೆಲ್ಲಾ ನನ್ನ ಮನಸ್ಸಿನ ಎಚ್ಚರಿಕೆಯ ಘಂಟೆ ಬಾರಿ ಬಾರಿ ಸದ್ದು ಮಾಡಿ ಎಚ್ಚರಿಕೆ ಕೊಡತ್ತೆ. ಆ ಸಮಯದಲ್ಲಿ ನನಗೆ ಏಷ್ಟು ನೋವಾಗುತೆ ಅಂತ ನಿನಗೆ ಗೊತ್ತಾ ??? ನೀನಿಲ್ಲದೇ ಮುಂದಿನ ಜೀವನದ ಕಲ್ಪನೆ ಯನ್ನೂ ನಾನು ಮಾಡಲಾರೆ. ನನ್ನಷ್ಟೇ ನಿನಗೂ ನೋವಾಗ್ತಾ ಇದೆ ಅಂತ ನನ್ಗೆ ಗೊತ್ತು ಕಣೇ. ಆದರೆ ನೋಡು ಚಿನ್ನ ಬದುಕು ಶಾಶ್ವತವಲ್ಲ. ನಾವಿಬ್ಬರೂ ಮತ್ತೆ ನಮ್ಮ ಪ್ರೇಮ ಖಂಡಿತಾ ಶಾಶ್ವತ. ಇಲ್ಲಾ ಅಂದಿದ್ದರೆ ನಾನು ನಿನಗೆ ಪರಿಚಯ ಆಗ್ತಾ ಇದ್ನ ?? ನಮ್ಮ ನಡುವೆ ಸ್ನೇಹ ಮೂಡುತಿತ್ತಾ ?? ಸ್ನೇಹ ಪ್ರೀತಿಗೆ ತಿರುಗುತ್ತಿತ್ತಾ ??? ನೋಡು ನನ್ನ ಮುದ್ದಿನ ಪುಟಾಣಿ ಹುಡುಗಿ, ಒಂಟಿಕೊಪ್ಪಲ್ ವೆಂಕಟರಮಣನ ಹತ್ತಿರ ಇಬ್ಬರೂ ಒಟ್ಟಿಗೇ ಹೋಗಿ application ಹಾಕೋಣ ;) ಏನಂತೀಯ ??? ನನ್ಗೆ ಗೊತ್ತು, ಈಗ ನಿನ್ನ ತಲೇನಲ್ಲಿ ಏನು ನಡಿತಾ ಇದೆ ಅಂತ. ನೀನು ಅಲ್ಲಿಗೆ ಖಂಡಿತಾ ಬರೋದಿಲ್ಲ ಅಲ್ವ ??? :P ಬಂದರೆ ನನ್ನ ನೋಡಿದ್ರೆ ನಿನಗೆ ನನ್ನ ಬಿಟ್ಟು ಹೋಗೊಕೆ ಮನಸ್ಸಾಗೋದಿಲ್ಲ ಅಂತ ನಿನಗೆ ಅನ್ಸತ್ತೆ ಅಲ್ವೇನೇ ??? ಹೋಗಲಿ ಬಿಡು ನಾನು ನಿನ್ನ ಮನಸ್ಸಲ್ಲೇ ಇದೀನಿ ಅಲ್ವಾ ??? :) ಹಾಗೇ ನೀನು ಕೂಡಾ ನನ್ನ ಮನಸ್ಸಲ್ಲಿ permanent ಆಗಿ ಮನೆ ಮಾಡಿದೀಯ :) ಹಾಗಾಗಿ ನಾವಿಬ್ಬರೂ ಎಲ್ಲೂ ಒಂಟಿಯಾಗಿ ಹೋಗೊದಕ್ಕೆ ಸಾಧ್ಯನೇ ಇಲ್ಲ, ಅಲ್ವೇನೇ ??? ಇಷ್ಟು ಇಬ್ಬರೂ ಒಬ್ಬರನ್ನೋಬ್ಬರು ಇಷ್ಟಾ ಪಟ್ಟುಕೊಂಡು ದಿನಾ ಮುದ್ದಾಡುತ್ತಾ ಇರೋವಾಗ ಪ್ರೇಮಿಗಳ ದಿನ ಅಂತ ಕೇವಲ ಒಂದು ದಿನ ಅದನ್ನ ಆಚರಿಸೋದಾ ??? ಛೆ ಛೆ.... ಆ ಚಾನ್ಸೇ ಇಲ್ಲ ಬಿಡು. ಅದೆಲ್ಲಾ ಕೇವಲ ವಿದೇಶಿಯರಿಗೆ ಮಾತ್ರ. ನಮ್ಮದು ಪ್ರೇಮಿಗಳ ಜನ್ಮ ಕಣೇ. ಪ್ರತಿದಿನ, ಪ್ರತಿಕ್ಷಣ ಅದರ ಆಚರಣೆ ನಡಿತಾ ಇರತ್ತೆ.

ಇನ್ನು ನಾನು ಮತ್ತೆ ನೀನು, ಅಂದರೆ ನಮ್ಮ ಸಂಭಂದದ ಬಗ್ಗೆ ನಿನಗೆ ಯಾಕೆ ಅನುಮಾನ ಬಂತು ??? ನಾನು ನೀನು ಇಬ್ಬರೂ ಒಬ್ಬರನ್ನೋಬರು ಇಷ್ಟ ಪಡ್ತೀವಿ, ಪ್ರೀತಿಸ್ತೀವಿ, ಒಬ್ಬರಿಗೊಬ್ಬರು ಆರೈಕೆ ಮಾಡ್ತೀವಿ, ಒಂದು ಕ್ಷಣಕೂಡಾ ಬಿಟ್ಟು ಇರೋದಿಲ್ಲ. ಈ ಸಂಭಂದಕ್ಕೆ ಹೆಸರಿಡ್ಲೇಬೇಕ ಚಿನ್ನು ??? ನಮ್ಮದು ಬಾಹ್ಯ ಸೌಂದರ್ಯಕ್ಕೆ ಮರುಳಾದ ಹೃದಯಗಳಲ್ವೆ... ಪ್ರೀತಿಗಾಗಿ ಮಿಡಿಯುತ್ತಿರುವ ಹೃದಯಗಳು. ಮುಂದಿನ ದಿನಗಳಲ್ಲಿ ನಾನು ನೀನು ಜೋಡಿಆದರೆ ಅದರ ಕಥೆ ಬೇರೇನೆ... ಅಕಸ್ಮಾತಾಗಿ ಅದು ಆಗಲಿಲ್ಲ ಅಂದ್ಕೊ, ಆಗ್ಲೂ ನಾನು ನಿನ್ನ ಬಿಡೊದಿಲ್ಲ... ನಿನ್ನ ಜೊತೆಯಾಗಿ ಒಬ್ಬ ಒಳ್ಳೆಯ ಗೆಳೆಯನಾಗಿದ್ದುಬಿಡ್ತೀನಿ ಕಣೆ, ನನ್ನ ಬೆಳದಿಂಗಳ ಬಾಲೆ. ಜೀವನ ಅನ್ನೋದು ಹೀಗೇ ಇರತ್ತೆ ಅಂತ ಯಾರೂ ಊಹಿಸಿಕೊಳ್ಳೋದಕ್ಕೆ ಆಗೋದಿಲ್ಲ. ಅದು ನಿರಂತರವಾಗಿ ಬದಲಾಗುತ್ತಿರುತ್ತೆ. ಆದರೆ ಜೀವನದಲ್ಲಿ ಬಂದು ಹೋಗೋ ಕೆಲವು ವ್ಯಕ್ತಿಗಳು ನಮ್ಮ ಮೇಲೆ ಅಪಾರವಾಗಿ ಪರಿಣಾಮ ಬೀರಿ ಮರೆಯಾಗದೇ ಉಳಿದುಬಿಡ್ತಾರೆ. ನಿನ್ನ ಪಾಲಿಗೆ ನಾನು, ನನ್ನ ಪಾಲಿಗೆ ನೀನು ಅದೇರೀತಿ. ನಿನ್ನ ಆ ಪುಟಾಣಿ ತಲೆನಲ್ಲಿ ಈ ವಿಚಾರವನ್ನೆಲ್ಲಾ ತುಂಬಿಕೊಂಡು ತಲೆನಲ್ಲಿ ಜಾಗನೇ ಇಲ್ಲ್ದೇ ಇರೂಹಾಗೆ ಮಾಡ್ಕೋಬೇಡ್ವೇ... ಇದು ನನ್ನ request.

ಕೆಲ್ಸ ಅನ್ನೊ ಜೈಲ್ ಸೇರಿದ ಮೇಲೆ ಫ್ರೀ ಆಗಿ ಹಾರಾಡೊಕೆ ಅಗೊದಿಲ್ಲ. ಅದಕ್ಕೇ ನಾನು ನಿನ್ಗೆ ಸಮಯ ಸಿಕ್ಕಾಗ ಮಾತ್ರ call ಮಾಡ್ತೀನಿ, ಹಾಗಂತ ನಾನು ನಿನ್ಗೆ ಉಪಕಾರ ಮಾಡ್ತಾ ಇದೀನಿ ಅಂತ ಅಲ್ಲಮ್ಮ. ನನಗೆ ಕೂಡಾ ನಿನ್ನೊಡನೆ ಮಾತಾಡ್ಬೇಕು, ನಿನ್ನ ಜೊತೆ ಸುತ್ತಾಡ್ಬೇಕು, ನಿನ್ನ ಎಲ್ಲೆಲಿಗೋ ತಿರುಗಾಡಿಸ್ಬೇಕು, ಒಟ್ಟಿಗೇ ಕೂತು ಕಡಲೇಕಾಯಿ ತಿನ್ನಬೇಕು ಅಂತೆಲ್ಲಾ ಅನ್ಸತ್ತೆ. ಹಾಗಾಗಿ ಮನೆಗೆ ತಡಮಾಡ್ಕೊಂಡು ಹೋಗಿ ಟೈಗರ್ ಹತ್ತಿರ ಗುರ್ ಗುರ್ರ್ ಅನ್ನಿಸ್ಕೊಂಡ್ರು ಕೂಡ ನಿನ್ನ ಜೊತೆ ಮಾತಾಡ್ಕೊಂಡೇ ಮನೆಕಡೆ ಪ್ರಯಾಣ ಬೆಳೆಸೋದು. ಮನೇಲಿ ಕೂಡಾ ಮಾತಾಡೋದು ಕಷ್ಟ ಕಣೇ ನನ್ನ ಹುಡುಗಿ, ನನ್ನ Financial position ಟೈಟ್ ಆಗಿದ್ದಾಗ ನೀನು ಕೂಡಾ ತುಂಬಾ ದುಡ್ಡು ಖರ್ಚು ಮಾಡಿದೀಯ. ನಾನು ಮನೆ ಕಡೆನೂ ನೋಡ್ಕೋಬೇಕು, ನನ್ನ ಮನೆಕೂಡಾ ಮಾಡ್ಕೊಬೇಕು. ಆದಷ್ಟು ಬೇಗ ನನ್ನ ಮನೆ ಬಂದು ಸೇರ್ಕೊಂಡ್ಬಿಡು ;) ಆಗ ನಾನು ನೀನು ಇಬ್ಬರೇ ಮನೆನಲ್ಲಿ ರಾಜ್ಯಾಭಾರ ನಡ್ಸೋಣ.... ನಿನ್ನ ಪ್ರತಿ ದಿನ, ಪ್ರತಿ ಕ್ಷಣ ಮುದ್ದಾಡ್ತೀನಿ. ನಿನ್ಗೇ ಇಷ್ಟ ಆದ್ರೆ ಮಾತ್ರ ನಿನ್ನ ಕಾಡ್ತೀನಿ. ನಿನ್ನ ನಾನು ಮುತ್ತುಗಳಿಂದ ಸಿಂಗಾರ ಮಾಡ್ತೀನಿ. ಆಯ್ತಾ ??? ನಿನ್ನ ಭವಿಷ್ಯದ ಕನಸುಗಳಿಗೆ ನನ್ನ ಪ್ರೀತಿಯ ನೀರೆರೆದು ಬೆಳೆಸ್ತೀನಿ... ಆ ಮರದ ನೆರಳಿನಲ್ಲಿ ನಾವು ಕುಳಿತು ತಂಗಾಳಿಯ ನಡುವೆ ನಮ್ಮ ನೆಮ್ಮದಿಯನ್ನ ಕಾಣೋಣ...

ಏನಂತೀಯ ನನ್ನ ಹುಡುಗೀ ??? ಈ ಹುಚ್ಚು ಹುಡುಗನ್ನ ಮುದ್ದಾಡ್ತೀಯೇನೆ ???

ಎಂದಿಗೂ ಎಂದೆಂದಿಗೂ ನಿನ್ನ ಪ್ರೀತಿಮಾಡುತ್ತಾ ನಿನ್ನ ಪ್ರೀತಿಗಾಗಿ ಹಂಬಲಿಸುವ ನಿನ್ನ ಹುಡುಗ...

Rating
No votes yet