ಹಾಯ್ ಹಾಯ್ ಏ ಮಜಬೂರಿ -

ಹಾಯ್ ಹಾಯ್ ಏ ಮಜಬೂರಿ -

ಪರಸ್ಪರ ಪ್ರೇಮಿಸುತ್ತಿರುವ ಹುಡುಗಿ ಮತ್ತು ಹುಡುಗ ಈಗಲೇ ಮದುವೆ ಆಗುವ ಹಾಗಿಲ್ಲ ; ಯಾಕಂದರೆ ಹುಡುಗ ನಿರುದ್ಯೋಗಿ . ಕೆಲಸಕ್ಕಾಗಿ ಅಲೆಯುತ್ತಿದ್ದಾನೆ . ಅವನಿಗೆ ಕೆಲಸ ಸಿಗೋದು ಯಾವಾಗ ? ತಾವು ಮದುವೆ ಆಗೋದು ಯಾವಾಗ ? ಎಂಬರ್ಥದ ಹಾಡು ’ಮೂರು ಮಹಾನ್ ಸಮಸ್ಯೆಗಳ ಚಿತ್ರಣ’ ಎಂಬ ಜಾಹೀರಾತಿನೊಂದಿಗೆ ಬಂದಿದ್ದ ’ರೋಟಿ ಕಪಡಾ ಔರ್ ಮಕಾನ್’ ಚಿತ್ರದಲ್ಲಿದೆ. ಈ ಹಾಡನ್ನು ಝೀ ಮ್ಯೂಸಿಕ್ ಚಾನೆಲ್ಲಿನಲ್ಲಿ ನೋಡಬಹುದು . ಇಬ್ಬರೂ ಶ್ರಾವಣದ ಮಳೆಯಲ್ಲಿ ನೆನೀತಾ ಇರೋವಾಗ ಅವಳು ಹಾಡುವ ಹಾಡು ಇದು .( ಹಾಯ್ ಹಾಯ್ ಏ ಮಜಬೂರಿ )

ಸಾಕಪ್ಪಾ ಸಾಕು
ಈ ಋತುಮಾನ, ಮತ್ತೆ ಈ ದೂರ
ನನ್ನನ್ನು ಪ್ರತಿಕ್ಷಣ ಗೋಳಾಡಿಸುತ್ತಿವೆ
ನಿನ್ನ ನಾಕು ಕಾಸಿನ ನೌಕರಿ ದಾರಿ ಕಾಯ್ದು
ನನ್ನ ಲಕ್ಷಾಂತರದ ಶ್ರಾವಣ ವ್ಯರ್ಥವಾಗುತಿದೆ

ಎಷ್ಟು ಶ್ರಾವಣ ಕಳೆದವು ,
ಆಸೆಯಿಟ್ಟುಕೊಂಡು ಕಾದಿರುವೆ ,
ನಲ್ಲನು ಒದಗುವ ಶ್ರಾವಣ
ಬಂದೀತಾದರೂ ಎಂದು ?

ಪ್ರೇಮಬಂಧನ
ಎಂಥಾದ್ದು ಅಂದರೆ
ಸಿಲುಕಿದರೊಮ್ಮೆ
ಬಿಡುಗಡೆಯೇ ಇಲ್ಲ ಎಂದಿಗೂ ;
ನಿನ್ನ ನೌಕರಿಯ ಖಾತರಿ ಆದರೂ ಏನು
ಇವತ್ತು ಸಿಗಬಹುದು
ನಾಳೆ ಕೈತಪ್ಪಬಹುದು !

Rating
No votes yet