ಹಾಲಿನ ಟ್ಯೂಬ್ ಲೈಟ್
ನಿನ್ನ ಬಾನುವಾರ ಹೀಗೆ ಮಾತನಾದುತ್ತ ಮನೆಯ ಹಾಲಿನಲ್ಲಿ ಕುಳಿತಿದ್ದೆ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ಬಂದಿದ್ದ. ಹಾಲಿನ ಒಂದು ಬದಿಯ ಲೈಟ್ ಹಾಕಿದ್ದು ಎದುರು ಬದಿಯ ಟ್ಯೂಬ್ ಲೈಟ್ ಹಾಕಿರಲಿಲ್ಲ. ಹಾಕೋಣ ಅಂತ ಎದ್ದು ಸ್ವಿಚ್ ಅದುಮಿದೆ. ಏಕೊ ಟ್ಯುಬ್ ಹತ್ತಲೆ ಇಲ್ಲ. ಅದರ ಹತ್ತಿರ ನಿಂತು ನೋಡಿದೆ. ಒಳಗೆ ಸಣ್ಣ ಬೆಳಕೊಂದು ಓಡಾಡುತ್ತಿದೆ. ನನ್ನ ಚಿಕ್ಕಪ್ಪನ ಮಗ ಶ್ರೀದರ ಎದ್ದು ಬಂದು ನೋಡಿದ ಅವನು ನನಗಿಂತ ಹೆಚ್ಚು ಬುದ್ದಿವಂತ ಮೊದಲಿನಿಂದಲೂ. ಟ್ಯೂವಿನ ಎರಡು ಬದಿ ಗಮನಿಸಿ ಕಪ್ಪಾಗಿರುವದನ್ನು ಕಂಡು ಹೇಳಿದ
"ಟ್ಯೂಬ್ ಹೋಗಿದೆ ಅಷ್ಟೆ, ಬಾ ಹೋಗಿ ಬೇರೆ ತರೋಣ" ಎಂದು ಹೊರಟ ಅವನ ಗಾಡಿಯಲ್ಲೆ !
ನಾನು ಹೊರಟೆ ಪ್ಯಾಂಟ್ ದರಿಸಿ, ರೂ.60 ಕೊಟ್ಟು ಬೇರೆ ಟ್ಯೂಬ ತಂದೆವು. ಶ್ರೀದರನೆ ಕುರ್ಚಿಯ ಮೇಲೆ ಹತ್ತಿ ಕಿಟಕಿಯ ಕಂಬಿ ಹಿಡಿದು ಹೇಗೋ ಟ್ಯೂಬ್ ಬದಲಿಸಿದ ನಾನು ಅವನಿಗೆ ಸಹಾಯಕ. ಮತ್ತೆ ಸ್ವಿಚ್ ಹಾಕಿದೆ. ಏಕೊ ಹತ್ತಲೆ ಇಲ್ಲ.
"ಅಂಗಡಿಯವನ ಹತ್ತಿರ ಟೆಸ್ಟ್ ಮಾಡಿಸಿ ತರಬೇಕಿತ್ತು, ಹೊಸ ಟ್ಯೂಬ್ ಹೇಗಿದೆಯೊ " ಎಂದು ಅನುಮಾನಪಟ್ಟ.
ಸರಿ ಪುನಃ ಹೊರಟೆವು ಅಂಗಡಿಗೆ. ಅಂಗಡಿಯಾತ ನಮ್ಮನ್ನು ಕಂಡು ನಮ್ಮಮಾತು ಕೇಳಿ ಅದೇ ಟ್ಯೂಬನ್ನು ಹಾಕಿ ತೋರಿಸಿದ. ಅರರೆ ! ಇಲ್ಲಿ ಬೆಳಗುತ್ತಿದೆ. ಅದಕ್ಕವನು ಬಹುಶಃ ಸ್ಟಾರ್ಟರ್ ಹೋಗಿರಬಹುದು ಅದನ್ನು ತೆಗೆದುಕೊಂಡು ಹೋಗಿ ಅಂದ. ಸರಿ ಅಂತ ಅದನ್ನು ಕೊಂಡು ಕೊಂಡೆ. ಮನೆಗೆ ಬಂದು ಹೊಸಟ್ಯೂಬ್ ಮತ್ತು ಹೊಸ ಸ್ಟಾರ್ಟರ್ ಹಾಕಿದರೆ ಯಥಾಪ್ರಕಾರ ಹತ್ತಲೆ ಇಲ್ಲ. ಅಷ್ಟಕ್ಕೆ ಬಿಡುವನೆ ನಮ್ಮ ಶ್ರೀದರ
"ತಡಿ ನನ್ನ ಕಾರಿನಲ್ಲಿ ಹಿಂದೆ ಕೊಂಡ ಚೋಕ್ ಒಂದಿದೆ ಅದನ್ನು ಉಪಯೋಗಿಸಲೆ ಇಲ್ಲ ಹಾಕಿ ನೋಡೋಣ "ಎಂದು ಹೊರಹೋಗಿ ಕಾರಿನಲ್ಲಿದ ಚೋಕೆ ಹುಡುಕಿ ತಂದ. ನನಗೂ ಒಳಗೆ ಖುಷಿ. ಹೊಸ ಚೋಕ್ ಬಿಟ್ಟಿಯಾಗಿ ಸಿಕ್ಕಿತಲ್ಲ ಎಂದು. ಈ ಪ್ರಪಂಚದಲ್ಲಿ ಯಾವುದೇ ವಸ್ತು ಬಿಟ್ಟಿಯಾಗಿ ಸಿಕ್ಕಾಗ ಬಹು ಪ್ರಿಯವಲ್ಲವೆ.
ಒಳಗೆ ಬಂದು ಟ್ಯೂಬ್ ಸೆಟ್ಟನ್ನು ಈಚೆ ತೆಗೆದು , ನನ್ನ ಕೈಯಲ್ಲಿ ಸ್ಕ್ರೂಡ್ರೈವರ್ ಮತ್ತೆಲ್ಲವನ್ನು ಪಡೆದು ನೆಲದ ಮೇಲೆ ಕುಳಿತು ಚೋಕ್ ಬದಲಾಯಿಸುತ್ತ ಕುಳಿತ.
ಅಷ್ಟರಲ್ಲಿ ಹೊರಗೆ ಹೋಗಿದ್ದ ನನ್ನ ಮಗಳು ಬಂದಳು. ಕುತೂಹಲದಿಂದ ಹತ್ತಿರ ಬಂದು ’ಏನಪ್ಪ ಆಗಿದೆ " ಎಂದಳು. ನನಗಾಗಲೆ ಸಹನೆ ಮೀರಿ ಹೋಗಿತ್ತು
"ಏನೊ ಒಂದು ಆಗಿದೆ ನಿನಗೆ ಎಲ್ಲ ಹೇಳಕ್ಕಾಗುತ್ತ ಹೇಳಿದರು ನಿನಗೆ ಅರ್ಥವಾಗುತ್ತ ? ಒಳಗೆ ಹೋಗು " ಎಂದು ರೇಗಿದೆ. ಅವಳು ಮುಖದಲ್ಲಿ ಏನು ಪ್ರತಿಕ್ರಿಯೆ ನೀಡದೆ ಸುಮ್ಮನೆ ನಿಂತು ನೋಡುತ್ತಿದ್ದಳು.
ಶ್ರೀದರ ಕಷ್ಟಬಿದ್ದು ಹೊಸ ಚೋಕನ್ನು ಸೆಟ್ ಗೆ ಜೋಡಿಸಿ ಪುನಃ ಕುರ್ಚಿ ಹತ್ತಿ ನಿಂತ. ನಾನು ಸಹಾಯಕನಂತೆ ನಿಂತು ಅವನಿಗೆ ಟ್ಯೂಬ್ ಸೆಟ್ಟನ್ನು ಮೇಲೆತ್ತಿ ಕೊಟ್ಟೆ. ಗೋಡೆಗೆ ಪುನಃ ಹೊಂದಿಸಿ, ಪ್ಲಗ್ಗಿಗೆ ಹೋಲ್ಡಾರನ್ನು ಹಾಕಿ. ಸ್ವಿಚ್ ಹಾಕು ಎಂದ, ನಮ್ಮ ಚಿಕ್ಕಪ್ಪನ ಮಗ ಶ್ರೀದರ ನನಗಿಂತ ಸದಾ ಬುದ್ದಿವಂತ !
ಆದರೆ ಏಕೋ ಲೈಟ್ ಹತ್ತಲೆ ಇಲ್ಲ . ತಲೆ ಕೆಟ್ಟು ಹೋಯಿತು. ನೋಡುತ್ತ ನಿಂತ ನನ್ನ ಮಗಳು
"ಅಪ್ಪ ಆ ಟ್ಯೂಬಿನ ಸ್ವಿಚ್ ಅಲ್ಲಿಲ್ಲ ಈ ಕಡೆಯಲ್ಲವ ಇರೋದು" ಅಂತ ಎದುರು ಗೋಡೆ ತೋರಿಸಿದಳು.
ಹ್ಮಾ ಹೌದಲ್ಲವ ಎಂದು ಕೊಳ್ಳುವದರಲ್ಲಿ ನನ್ನ ಮಗಳು ನಿದಾನಕ್ಕೆ ಎದುರು ಗೋಡೆಗೆ ಹೋಗಿ ಸ್ವಿಚ್ ಅದುಮಿದಳು. ಟ್ಯೂಬ್ ಲೈಟ್ ಬೆಳಗಿತು. ನನಗೆ ಮರೆತೆ ಹೋಗಿತ್ತು. ನಮ್ಮ ಮನೆಯ ಹಾಲಿನ ಎರಡು ಬದಿ ಗೋಡೆಯ ಮೇಲೆ ಸ್ವಿಚ್ ಗಳಿವೆ. ಈ ಟ್ಯೂಬಿನ ಸ್ವಿಚ್ ಎದುರುಬದಿಯಿದೆ. ಅದರ ಉಪಯೋಗ ಕಡಿಮೆಯಾದ್ದರಿಂದ ನನಗೆ ಮರೆವು.
"ಹೋಗಲಿ ಬಿಡು ಹೇಗೊ ಟ್ಯೂಬ್ ಸರಿ ಹೋಯಿತಲ್ಲ " ಎಂದೆ.
ನಮ್ಮ ಚಿಕ್ಕಪ್ಪನ ಮಗ ಶ್ರೀದರ , ನನಗಿಂತ ಸದಾ ಬುದ್ದಿವಂತ , ದೂಳಾದ ತನ್ನ ಕೈ ಹಾಗು ಮುಖವನ್ನು ತೊಳೆಯಲು ಎದ್ದು ಹಿಂದೆ ಹೋದ.
Comments
ಉ: ಹಾಲಿನ ಟ್ಯೂಬ್ ಲೈಟ್
ಉ: ಹಾಲಿನ ಟ್ಯೂಬ್ ಲೈಟ್
ಉ: ಹಾಲಿನ ಟ್ಯೂಬ್ ಲೈಟ್