ಹಾಲು

ಹಾಲು

ಹಾಲು.

ಬಹಿರಂಗ ಪ್ರೀತಿಯಿಂದ
ದುರ್ಜನ ಸಂಘ,
ಅಂತರಂಗ ಪ್ರೀತಿಯಿಂದ
ಸಜ್ಜನ ಸಂಘ.
ಪ್ರೀತಿ
ಹಾಲಾದರೆ,
ಅಪೇಕ್ಷೆ
ಮೊಸರು.
ಹಸು ಹಾಲನ್ನು ಕೊಡುತ್ತದೆ,
ಮೊಸರು ಬಾಹ್ಯ ಕ್ರಿಯೆ.
ಕರುವಿಗೆ ಕೊಟ್ಟು ಉಳಿದದ್ದು
ಹಾಲು.
ಕರುವಿಗಿಡದೆ ಕರೆದದ್ದು
ಹಾಲಾಹಲ.
ಆದುದರಿಂದ
ಬೆಳ್ಳಗಿರುವುದೆಲ್ಲ
ಹಾಲಲ್ಲ.

ಅಹೋರಾತ್ರ.

Rating
No votes yet