ಹಾಸನದಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರೀ ಶಂಕರಭಗವತ್ಪಾದರ ಜಯಂತಿ ಆಚರಣೆ

ಹಾಸನದಲ್ಲಿ ವಿಶಿಷ್ಟ ರೀತಿಯಲ್ಲಿ ಶ್ರೀ ಶಂಕರಭಗವತ್ಪಾದರ ಜಯಂತಿ ಆಚರಣೆ

ಇದೇ ಏಪ್ರಿಲ್ ೨೬ ರಿಂದ ೨೯ ರ ವರಗೆ ಹಾಸನದಲ್ಲಿ ಶೃಂಗೇರಿಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಸಾನಿಧ್ಯದಲ್ಲಿ  ಶ್ರೀ ಶಂಕರಭಗವತ್ಪಾದರ ಜಯಂತಿಯನ್ನು ವಿಶೇಷವಾದ ರೀತಿಯಲ್ಲಿ ಆಚರಿಸಲಾಗುವುದು.ಅದರ ಪೂರ್ವಭಾವಿ ತಯಾರಿಗಾಗಿ ಈಗಾಗಲೇ ಎರಡು ಸಭೆಗಳು ನಡೆದಿದ್ದು ಹತ್ತು ಉಪಸಮಿತಿಗಳನ್ನು ರಚಿಸಲಾಗಿದೆ. ಹಿರಿಯ ರಾಜಕಾರಣಿ ಶ್ರೀ ಹಾರನಹಳ್ಳಿರಾಮಸ್ವಾಮಿಯವರ ಅಧ್ಯಕ್ಷತೆಯಲ್ಲಿ ಸ್ವಾಗತಸಮಿತಿಯೊಂದನ್ನು ರಚಿಸಲಾಗಿದೆ.

ಯೋಜಿತ ಕಾರ್ಯಕ್ರಮಗಳು:

೧. ಆರ್ಥಿಕವಾಗಿ ದುರ್ಬಲವಾದ ಅರ್ಹ ವ್ಯಕ್ತಿಗಳಿಗೆ ಈಕೆಳಕಂಡ ಸೌಕರ್ಯಗಳನ್ನು ನೀಡಲಾಗುವುದು.

ಅ] ಕೃತಕ ಕೈಕಾಲು ಜೋಡಣೆ

ಆ]ಶ್ರವಣ ಉಪಕರಣ  ವಿತರಣೆ

ಇ] ಅಂಧರಿಗೆ ಮಾರ್ಗದರ್ಶಿ ಊರು ಗೋಲು ವಿತರಣೆ

ಈ]ವ್ಹೀಲ್ ಛೇರ್ ವಿತರಣೆ

ಉ]ತ್ರಿಚಕ್ರ ಸೈಕಲ್ ವಿತರಣೆ

೨] ಅಖಿಲ ಭಾರತ ವೇದ ವಿದ್ವತ್ ಸಭೆ: ವಿವರಗಳನ್ನು ಮುಂದೆ ನೀಡಲಾಗುವುದು

೩]ವಿವಧ ಸ್ಪರ್ಧೆಗಳು:

ಶ್ರೀ ಶಂಕರರ ಬಗ್ಗೆ ಪ್ರಬಂಧ ರಚನೆ, ಶ್ರೀ ಶಂಕರರ ಸ್ತೋತ್ರಗಳ ಕಂಠಪಾಠಸ್ಪರ್ಧೆ,ಭಾಷಣ ಸ್ಪರ್ಧೆ,ಇತ್ಯಾದಿ: ವಿವರ ತಿಳಿಸಲಾಗುವುದು

೪] ವಿಶೇಷ ಉಪನ್ಯಾಸಗಳು :

ದಿನಾಂಕ:೨೬.೦೩.೨೦೦೯

ವಿಷಯ: ಶ್ರೀಶಂಕರರು ಕಂಡ ಭವ್ಯ ಭಾರತ

ಉಪನ್ಯಾಸಕರು: ಶ್ರೀ ಚಕ್ರವರ್ತಿ ಸೂಲಿಬೆಲೆ, ಉಪಾಧ್ಯಕ್ಷರು, ಸಂಸ್ಕಾರ ಭಾರತೀ, ಕರ್ನಾಟಕ

ದಿನಾಂಕ:೨೭.೦೪.೨೦೦೯

ವಿಷಯ: ಭಾರತದ ಉಳಿವಿನಲ್ಲಿ  ಶ್ರೀ ಶಂಕರ ಭಗವತ್ಪಾದರ  ಚಿಂತನೆಗಳ ಅನಿವಾರ್ಯತೆ 

ಉಪನ್ಯಾಸಕರು:ಪೂಜ್ಯಶ್ರೀಶ್ರೀ ವೀರೇಶಾನಂದ ಸರಸ್ವತೀ,ಅಧ್ಯಕ್ಷರು,ಶ್ರೀ ರಾಮೃಷ್ಣ-ವಿವೇಕಾನಂದಾಶ್ರಮ,ತುಮಕೂರು

ದಿನಾಂಕ: ೨೮.೦೩.೨೦೦೯

ವಿಷಯ: ಮನುಕುಲದ ಉಳಿವಿಗಾಗಿ ಶಂಕರರ ವಿಚಾರಧಾರೆ

ಉಪನ್ಯಾಸಕರು:ಡಾ. ಎ.ಎಸ್.ವೇಣುಗೋಪಾಲ್ ರಾವ್, ನಿವೃತ್ತ ಪ್ರಾಧ್ಯಾಪಕರು ಮತ್ತು ಶ್ರೀ ರಮಣಮರ್ಷಿಗಳ ವಿಚಾರಗಳ ಚಿಂತಕರು

ಅಷ್ಟೂ ದಿನಗಳು ದಿನವಿಡೀ ನಾಲ್ಕೂ ವೇದಗಳ ಪಾರಾಯಣ, ವೇದವಿದ್ವತ್ ಸಭೆ,ಶ್ರೀಶ್ರೀ ಗಳಿಂದ ಶಾರದಾ ಚಂದ್ರಮೌಳೇಶ್ವರ ಪೂಜೆ, ಶ್ರೀಶಂಕರಭಗವದ್ಪಾದರ ಸೇವೆ,ಅಲ್ಲದೆ ಸ್ಥಳೀಯ ಕಲಾವಿದರಿಂದ ವಿವಿಧ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಕಡೆಯದಿನ ಪೂಜ್ಯಶ್ರೀಶ್ರೀಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳಿಂದ ಆಶೀರ್ವಾದವಿರುತ್ತದೆ.

 


Rating
No votes yet