ಹಿಂದಿಯಿಂದ ಒಂದು ನವಿರಾದ ಒಲವ ಗೀತೆ - ಅಖಿಯೋಂ ಕೆ ಝರೋಖೋಂ ಸೇ

ಹಿಂದಿಯಿಂದ ಒಂದು ನವಿರಾದ ಒಲವ ಗೀತೆ - ಅಖಿಯೋಂ ಕೆ ಝರೋಖೋಂ ಸೇ

ಮೊದಲಿಗೇನೇ ಈ ನವಿರಾದ ಒಲವ ಗೀತೆಯನ್ನು ಕೇಳಿಬಿಡಿ - ಈ ಮುಂದಿನ ಕೊಂಡಿಯಲ್ಲಿ.

https://youtu.be/KqpIIaCJggY

ಅದು ನಿಮ್ಮ ಮನಸ್ಸನ್ನು ತಟ್ಟುವುದು ಖಂಡಿತ. ನಿಮಗೆ ಹಿಂದಿ ಅಷ್ಟು ಚೆನ್ನಾಗಿ ಬಾರದಿದ್ದರೆ ಅದರ ಅರ್ಥ ತಿಳಿದುಕೊಳ್ಳಲು ಮುಂದಿನ ನನ್ನ ಅನುವಾದ ನಿಮಗೆ ಸಹಾಯ ಮಾಡುತ್ತದೆ.

ನಿಮಗೆ ಹಾಡಿಕೊಳ್ಳಲು ಅನುಕೂಲವಾಗಲು ಅದರ ಸಾಹಿತ್ಯವನ್ನು ಕನ್ನಡ ಲಿಪಿಯಲ್ಲಿ ಮುಂದೆ ಕೊಟ್ಟಿದ್ದೇನೆ.

ಇದು "ಅಖಿಯೋಂ ಕೆ ಝರೋಖೋಂ ಸೇ" ಎಂಬ ಚಿತ್ರದಲ್ಲಿ ಇದೆ. ಚಿತ್ರ ರಾಜಶ್ರೀ ಪ್ರೊಡಕ್ಷನ್ಸ್ ಅವರದು. ತುoಬ ಸದಭಿರುಚಿಯ ಅನೇಕ ಚಿತ್ರಗಳನ್ನು ಕೊಟ್ಟಿದ್ದಾರೆ - ಚಿತ್ರ ಯೂಟ್ಯೂಬ್ ನಲ್ಲಿ ಇದೆ. ಕತೆ ಇಬ್ಬರು ಯುವ ಪ್ರೇಮಿಗಳದು. ಅವರು ಮದುವೆಯಾಗಿ ಸುಖವಾಗಿರಲಿ ಎಂದು ಎಲ್ಲರ ಬಯಕೆ. ಆದರೆ ನಾಯಕಿಗೆ ರಕ್ತದ ಕ್ಯಾನ್ಸರ್ , ಸಾಯಲಿದ್ದಾಳೆ.

ಈ ಹಾಡಿನ ದುಃಖಭರಿತ ಆವೃತ್ತಿಯೂ ನಿಮಗೆ ಚಿತ್ರದಲ್ಲಿ ಸಿಗುತ್ತದೆ.

ಕಣ್ಣ ಕಿಟಕಿಯಿಂದ,
ನಾನು ನೋಡಿದಾಗ, ಓ ಪ್ರಿಯ
ದೂರ ಕಂಡೆ ನೀನು,
ಬಲು ದೂರ ಕಂಡೆ ನೀನು
ನನ್ನ ಕಣ್ಣುಗಳ ಕಿಟಕಿಗಳನ್ನು ಮುಚ್ಚಿ
ಯೋಚಿಸುತ್ತ ಕೂತಾಗ
ನನ್ನ ಮನದಲ್ಲಿ ನೀನು ನಗುತ್ತಾ ಇದ್ದೆ,
ಬರಿ ನೀನೇ ನಗುತ್ತಾ ಇದ್ದೆ

ನನಗೊಂದು ಹೃದಯ ಇತ್ತು,
ಈಗ ನಾನು ಅದನ್ನು ಕಳೆದುಕೊಳ್ಳುತ್ತಿದ್ದೇನೆ
ನೀನು ದೊರೆತ ಮೇಲೆ
ಈಗ ನನಗೇನೋ ಆಗುತ್ತಿದೆ
ನಿನ್ನ ಮೇಲಿನ ಭರವಸೆಯಿಂದ
ನಾನು ಎಲ್ಲವನ್ನೂ ಮರೆತು ಕೂತಿದ್ದೇನೆ
ಹೀಗೆಯೇ ಬದುಕು ಸರಿದು ಹೋಗಲಿ ,
ನಿನ್ನೊಂದಿಗೆ ಹೀಗೆಯೇ ಸರಿದು ಹೋಗಲಿ

ಬದುಕುವೆ ನಿನ್ನ ನೋಡಿ ,
ಸಾಯುವುದೂ ನಿನಗಾಗಿಯೇ,
ನೀನೆಲ್ಲಿ ಇರುವಿಯೋ , ನಲ್ಲ
ನನ್ನ ಪ್ರಪಂಚವೂ ಅಲ್ಲಿಯೇ
ಹಗಲು ರಾತ್ರಿ ಪ್ರಾರ್ಥಿಸುತ್ತದೆ
ನನ್ನ ಹೃದಯವು ನಿನಗಾಗಿ
ನಮ್ಮ ಆಸೆಗಳ ಹೂವುಗಳು
ತಾವೆಂದೂ ಬಾಡದಿರಲಿ

ನಿನ್ನ ಪ್ರೀತಿಯ ಬಣ್ಣಗಳಲ್ಲಿ
ನನ್ನ ಬದುಕು ಬಣ್ಣ ಬಣ್ಣವಾದಂದಿನಿಂದ
ಎಚ್ಚೆತ್ತಾಗ ನಿದ್ದೆ ಹೋಗಿದ್ದೇನೆ
ನಿದ್ದೆಯಲ್ಲಿದ್ದಾಗ ಎಚ್ಚೆತ್ತಿದ್ದೇನೆ
ನನ್ನ ಸುಂದರ ಕನಸುಗಳನ್ನು
ಯಾರೂ ಕಸಿಯದಿರಲಿ
ಮನವು ಯೋಚಿಸಿ ಬೆದರುವುದು
ಇದನ್ನೇ ಯೋಚಿಸಿ ಬೆದರುವುದು

ಮೂಲ ಸಾಹಿತ್ಯ: -

ಅಖಿಯೋಂ ಕೇ ಝರೋಖೋಂ ಸೇ,
ಮೈನೇ ದೇಖಾ ಜೋ ಸಾಂವರೇ
ತುಮ ದೂರ ನಜರ ಆಏ,
ಬಡೀ ದೂರ ನಜರ ಆಏ
ಬಂದ ಕರಕೇ ಝರೋಖೋಂ ಕೋ,
ಜರಾ ಬೈಠೀ ಜೋ ಸೋಚನೇ
ಮನ ಮೇಂ ತುಮ್ಹೀಂ ಮುಸ್ಕಾಏ,
ಬಸ ತುಮ್ಹೀಂ ಮುಸ್ಕಾಏ
ಅಖಿಯೋಂ ಕೇ ಝರೋಖೋಂ ಸೇ

ಇಕ ಮನ ಥಾ ಮೇರೇ ಪಾಸ ವೋ
ಅಬ ಖೋನೇ ಲಗಾ ಹೈ
ಪಾಕರ ತುಝೇ ಹಾಯೆ ಮುಝೇ
ಕುಛ ಹೋನೇ ಲಗಾ ಹೈ
ಇಕ ತೇರೇ ಭರೋಸೇ ಪೇ
ಸಬ ಬೈಠೀ ಹೂಂ ಭೂಲ ಕೇ
ಯೂ ಹೀ ಉಮ್ರ ಗುಜರ ಜಾಏ,
ತೇರೇ ಸಾಥ ಗುಜರ ಜಾಏ

ಜೀತೀ ಹೂಂ ತುಮ್ಹೇಂ ದೇಖ ಕೇ,
ಮರತೀ ಹೂಂ ತುಮ್ಹೀಂ ಪೇ
ತುಮ ಹೋ ಜಹಾಂ ಸಾಜನ ಮೇರೀ
ದುನಿಯಾ ಹೈ ವಹೀಂ ಪೇ
ದಿನ ರಾತ ದುಆ ಮಾಂಗೇ
ಮೇರಾ ಮನ ತೇರೇ ವಾಸ್ತೇ
ಕಹೀಂ ಅಪನೀ ಉಮ್ಮೀದೋಂ ಕಾ
ಕೋಈ ಫೂಲ ನ ಮುರಝಾಏ
ಅಖಿಯೋಂ ಕೇ ಝರೋಖೋಂ ಸೇ ...

ಮೈಂ ಜಬ ಸೇ ತೇರೇ ಪ್ಯಾರ ಕೇ
ರಂಗೋಂ ಮೇಂ ರಂಗೀ ಹೂಂ
ಜಗತೇ ಹುಏ ಸೋಈ ರಹೀ
ನೀಂದೋಂ ಮೇಂ ಜಗೀ ಹೂಂ
ಮೇರೇ ಪ್ಯಾರ ಭರೇ ಸಪನೇ
ಕಹೀಂ ಕೋಈ ನ ಛೀನ ಲೇ
ದಿಲ ಸೋಚ ಕೇ ಘಬರಾಏ,
ಯಹೀ ಸೋಚ ಕೇ ಘಬರಾಏ
ಅಖಿಯೋಂ ಕೇ ಝರೋಖೋಂ ಸೇ

Rating
No votes yet