ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ   ಮಾಡಿದ್ದೇಕೆ  ?

ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ   ಮಾಡಿದ್ದೇಕೆ  ?

ಚಿತ್ರ

ಹಿಂದಿ ಚಿತ್ರರಂಗದ ಖಳ ನಟ ಪ್ರಾಣ್ ಕೋಪದಿಂದ ಜ್ಯೂರಿಯವರಿಗೆ ಕಪಾಲ ಮೋಕ್ಷ   ಮಾಡಿದ್ದೇಕೆ  ?

ಅದು ಆದದ್ದು ಹೀಗೆ :

೧೯೭೨ ರ ಕಾಲಘಟ್ಟದಲ್ಲಿ ಎರಡು ಬಹುಚರ್ಚಿತ ಮೆಗಾ ಬಡ್ಜೆಟ್ ನಲ್ಲಿ  ಮೇರು ಚಿತ್ರ ಕಲಾವಿದರನ್ನು ಆಯ್ದು ನಿರ್ಮಿಸಿದ ಚಿತ್ರಗಳು. ೧. ಪಾಕೀಝ  ೨.  ಅಮರ್  ಪ್ರೇಮ್, ಆಗಿದ್ದವು. 

ಅದೇ ವರ್ಷದಲ್ಲಿ ನಿರ್ಮಾಣವಾದ ಮತ್ತೊಂದು ಚಿತ್ರವೆಂದರೆ,  'ಬೇ ಇಮಾನ್' ಎಂಬ ಚಿತ್ರ. ಸೋಹನ್ ಲಾಲ್ ಕನ್ವರ್ ಎನ್ನುವ ನಿರ್ಮಾಪ ನಿರ್ದೇಶಕರು ಒಂದು ಹಿಂದಿ ಚಿತ್ರವನ್ನು ನಿರ್ಮಿಸಿದರು. ಜನಪ್ರಿಯತೆಯ ಶಿಖರದಲ್ಲಿದ್ದ ಆ ಚಿತ್ರವನ್ನು ತಮಿಳಿನಲ್ಲಿ ಮೇರು ನಟ ಶಿವಾಜಿ ಗಣೇಶನ್  ರವರನ್ನು ತೆಗೆದುಕೊಂಡು ಪುನರ್ನಿರ್ಮಿಸಲಾಯಿತು.

ದೇಶದಲ್ಲೆಲ್ಲಾ ಹೆಸರುಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ  ಹಣಕೊಳ್ಳೆ ಹೊಡೆಯುತ್ತಿದ್ದ ಪಾಕಿಝ  ಮತ್ತು ಅಮರ್ ಪ್ರೇಮ್  ಗಳಿಸುತ್ತಿದ್ದರೂ  ಆ ವರ್ಷದ ಫಿಲಂ ಫೇರ್ ಪ್ರಶಸ್ತಿಗಳನ್ನೆಲ್ಲಾ ದೋಚಿಕೊಂಡು ಮೆರೆದದ್ದು'ಬೇ ಇಮಾನ್' ಎಂಬ ಚಿತ್ರ. ಅದು ಆದದ್ದಾದರೂ ಹೇಗೆ ?  ಎಂದು ಊಹಿಸಲೂ ಆಗದ ಸಮಯದಲ್ಲಿ  ನಡೆದ ಘಟನೆಯೆಂದರೆ  ಖಳ ನಟ  ಪ್ರಾಣ್ ಜ್ಯೂರಿಯವರ  ಕಪಾಳಕ್ಕೆ ಬಾರಿಸಿದ ಪ್ರಸಂಗ ; ಮತ್ತು ತಮಗೂ ಸಲ್ಲಬೇಕಾದ ಅತ್ಯುತ್ತಮ ಪ್ರಶಸ್ತಿ  ಬೇಕಾಗಿಲ್ಲವೆಂದು ನಿರಾಕರಿಸಿ ಪ್ರಶಸ್ತಿ ಸಮಾರಂಭದಲ್ಲಿ  ಕೂಗಾಡಿದ ಸನ್ನಿವೇಶ, ಬಾಲಿವುಡ್ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.   

ಅತ್ಯಂತ ಜನಪ್ರಿಯ, ಮೇರುಕಲಾವಿದರನ್ನು ಒಳಗೊಂಡಿದ್ದು  ಮೆಗಾ ಬಡ್ಜೆಟ್ ನ  ಹಾಗೂ ಗಲ್ಲ ಪೆಟ್ಟಿಗೆಯಲ್ಲಿ ಅತ್ಯಂತ ಹೆಚ್ಚು ಹಣಗಳಿಸಿದ  ಹಿಂದಿ ಚಿತ್ರಗಳ ಜೊತೆಯಲ್ಲಿ ಬೇ ಇಮಾನ್ ಎನ್ನುವ ಚಿತ್ರವೂ  ಪ್ರಶಸ್ತಿಗಳನ್ನು   ಹಾಸಿಲ್ ಮಾಡಿದ್ದು ಎಲ್ಲರ ಹುಬ್ಬುಗಳನ್ನು ಮೇಲೇರಿಸುವಂತೆ ಮಾಡಿತ್ತು.  ವರ್ಷ ೧೯೭೨ ರ  ಎಲ್ಲಾ ಫಿಲಂ ಫೇರ್ ಪ್ರಶಸ್ತಿಗಳನ್ನು ಬಾಚಿ ತೆಗೆದುಕೊಂಡ ಈ ಚಿತ್ರ ಆಗಲೇ ಪ್ರಶಸ್ತಿಗೆ ನಾಮಕರಣಿಸಲ್ಪಟ್ಟ ಅತ್ಯಂತ ಹೆಚ್ಚುವಚ್ಚದಲ್ಲಿ ನಿರ್ಮಿಸಲ್ಪಟ್ಟ  ಪಾಕೀಝ ಮತ್ತು ಅಮರ್ ಪ್ರೇಮ್  ಚಿತ್ರಗಳಿಗೆ ಹೋಲಿಸಿದರೆ, ಅಂತಹ ಹೆಚ್ಚುಗಾರಿಕೆಯನ್ನೇನೂ ಹೊಂದಿರಲಿಲ್ಲವೆಂದು ಫಿಲಂ ತಜ್ಞರ ಅಂಬೋಣವಾಗಿತ್ತು.  ಇದರಿಂದಾಗಿ ಆ ಚಿತ್ರ  ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿತ್ತು. ಪೋಷಕ ನಟ, ಪೊಲೀಸ್ ಕಾನ್ಸ್ಟೆಬಲ್ ಪಾತ್ರದಲ್ಲಿ ಪ್ರಾಣ್ ನಟಿಸಿದ್ದರು.  ಪ್ರೇಮ್ ಚೋಪ್ರಾ, ಟುನ್ ಟುನ್ ಜಿ , ಸಂಗೀತ ಶಂಕರ್ ಜೈಕಿಶನ್,  ಪ್ರಾಣ್ ಸಾಹೇಬರಿಗೆ  ಒಂದು ವೈಯಕ್ತಿಕ ವಿಶೇಷ ಪ್ರಶಸ್ತಿಯೂ ಲಭಿಸಿತು.  ಕಮಾಲ್ ಆಮ್ರೋಹಿ ಯವರ ನಿರ್ಮಾಣದ ಪಾಕೀಝ ಚಿತ್ರಕ್ಕೆ ಆ ಹಿರಿಮೆ ದೊರೆಯಲಿಲ್ಲ; ಹಾಗೆಯೇ  ಸೂಪರ್ ಸ್ಟಾರ್  ರಾಜೇಶ್ ಖನ್ನರಿಗೂ ಸಹಿತ. ಅವರು ಶಕ್ತಿ ಸಮಂತಾ ನಿರ್ಮಾಣದ ಶರ್ಮಿಳಾ ಟ್ಯಾಗೋರ್ ಒಟ್ಟಿಗೆ ಅಭಿನಯಿಸಿದ  ಅಮರ್  ಪ್ರೇಮ್ ಚಿತ್ರದಲ್ಲಿ ನಿಜವಾಗಿಯೂ ಅವರ ಕಿರದಾರ್ ಅತ್ಯುತ್ತಮ ಮಟ್ಟದ್ದಾಗಿತ್ತೆಂದು ಫಿಲಂ ಕ್ರಿಟಿಕ್ ಗಳ ಒಮ್ಮತವಾಗಿತ್ತು. 

ರಾತ್ರಿ ಜರುಗಿದ ಅಮಿರೊ ಗರಿಬೊ ಪ್ರಶಸ್ತಿ ಪ್ರದಾನ ಫಂಕ್ಷನ್ ನಲ್ಲಿ 'ಜೈ ಬೋಲೋ ಬೇ ಇಮಾನ್  ಕೀ'  ಎನ್ನುವ ಮುಕೇಶರು ಹಾಡಿದ ಗೀತೆಗೆ ಪ್ರಶಸ್ತಿ ದೊರೆಯಿತು. ಕಿಶೋರ್ ಕುಮಾರ್ ಹಾಡಿದ 'ಚಿಂಗಾರಿ ಕೊಯಿ ಭಡಕೆ'  ಹಾಡು ಮೂಲೆಗೆ ಬಿತ್ತು.  ಈ ಹಾಡನ್ನು ಬರೆದ  ವರ್ಮಾ ಮಾಲಿಕ್ ರು,  ಬೆಸ್ಟ್ ಪ್ರಶಸ್ತಿ ಲಿರಿಸಿಸ್ಟ್ ನಾಮಿನೇಷನ್ ಆಗಿದ್ದರು.  ಪ್ರಶಸ್ತಿ ಸಿಗದವರೆಂದರೆ ಆನಂದ ಭಕ್ಷಿಯವರು. ಅಮರ್ ಪ್ರೇಮ್ ಗಲ್ಲಾ ಪೆಟ್ಟಿಗೆಯಲ್ಲಿ ಸೂಪರ್ ಡ್ಯೂಪರ್ ಹಿಟ್ ಆಗಿದ್ದರೂ ಸಹಿತ  ೧೯೭೨  ರ ಜ್ಯೂರಿ ಸಮಿತಿಯವರು ಬೇ ಇಮಾನ್ ಚಿತ್ರದ ಬಗ್ಗೆ ವಿಶೇಷವಾಗಿ ಪ್ರಭಾವಿತರಾಗಿದ್ದರು ನಾಮಿನೇಟ್ ಆಗಿಯೂ ಪ್ರಶಸ್ತಿಯಿಂದ ವಂಚಿತರಾದವರೆಂದರೆ, ಪಕೀಜಾ ಚಿತ್ರದ   ಜನಾಬ್ ಗುಲಾಮ್ ಮೊಹಮದ್ ವರು.  ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ  ನಾಮಿನೇಟ್ ಸಹಿತ  ಆಗಿರದ ಆರ್. ಡಿ. ಬರ್ಮನ್ ಬೇ ಇಮಾನ್  ಚಿತ್ರಕ್ಕೆ  ಪ್ರಶಸ್ತಿ  ಗೆದ್ದುಕೊಂಡರು. ಪ್ರಶಸ್ತಿ ಪ್ರದಾನ  ಸಮಾರಂಭದಲ್ಲಿ ಇವೆಲ್ಲಾ ಬೆಳವಣಿಗೆಯನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ ಪ್ರಾಣ್ ಸಾಹೇಬರು, ಕುಳಿತಿದ್ದವರು ಎದ್ದು ಹೋಗಿ  ಜ್ಯೂರಿ ಸಮಿತಿಯ ಸದಸ್ಯರಿಗೆ  ಕಪಾಳ ಮೋಕ್ಷ ಮಾಡಿದರು. ತಮಗೆ ಪ್ರಶಸ್ತಿಯಲ್ಲಿ ಯಾವ ರುಚಿಯೂ ಉಳಿದಿಲ್ಲವೆಂದು ಯದ್ವಾ- ತದ್ವಾ ಕೂಗಾಡಿದರು. ಅದಕ್ಕೆ ಕಾರಣ ಕೊಡುತ್ತಾ ಅವರು ಪಾಕೀಝ ದಂತಹ  ಶ್ರೇಷ್ಠ ಚಿತ್ರಕ್ಕೆ ಪಾರಿತೋಷಕ ಕೊಡಬೇಕಾಗಿತ್ತು.ಪಾಕೀಝ ಎಲ್ಲಾ ವಿಧದಲ್ಲೂ  ಮಹತ್ವದ ದೃಶ್ಯ ಕಾವ್ಯವಾಗಿತ್ತು ಮತ್ತು  ಲಾಜವಾಬ್ ಆಗಿತ್ತು ಎಂದು ವರ್ಣಿಸಿದರು.  

ಸೋಹನ್ ಲಾಲ್ ಕನ್ವರ್  1985 to 1970 ರ ವರೆಗೆ,  ಸಹಭಾಗಿತ್ವದಲ್ಲಿ ಇದ್ದ ಚಿತ್ರಗಳು : 

ಆವಾರ ಬಾಪ್ :  ಓಂ ಶಿವ್ ಪುರಿ, ರಾಜೇಶ್ ಖನ್ನಾ, ಮೀನಾಕ್ಷಿ ಶೇಷಾದ್ರಿ, (1985)
ಪೈಸಾ ಯೆಹ್ ಪೈಸಾ  : ಜಾಕಿ ಶ್ರಾಫ್, ನೂತನ್, ಮೀನಾಕ್ಷಿ ಶೇಷಾದ್ರಿ,  (1985),
ಪಾಪಿ ಪೇಟ್ ಕಾ ಸವಾಲ್ ಹೈ :  ಟೀನಾ ಮುನೀಮ್, ಮಝರ್ ಖಾನ್, ಓಮ್ ಶಿವ್ ಪುರಿ, (1984)
ಧನ್ ವಾನ್ :  ಮಝರ್ ಖಾನ್, ಅರುಣಾ ಇರಾನಿ, ರಾಜೇಶ್ ಖನ್ನಾ, (1981),
ನಾರಿ :  ರಾಕೇಶ್ ರೋಷನ್, ಸಾರಿಕಾ, ನೀತಾ ಮೆಹ್ತಾ (1981)  
ಆತ್ಮಾರಾಮ್ :  ಅಮ್ಜದ್ ಖಾನ್, ಅರುಣಾ ಇರಾನಿ, ಪ್ರಾಣ್ (1979),     
ದುನಿಯಾ ದಾರಿ : ಅರುಣಾ ಇರಾನಿ, ಹೆಲೆನ್, ವಿನೋದ್ ಮೆಹ್ರಾ,(1977), 
ನಾಟಕ್  : ಅಲ್ಕಾ, ವಿಜಯ್ ಅರೋರಾ, ಮೌಶ್ಮಿ ಚಟರ್ಜಿ,(1976),
ಸನ್ಯಾಸಿ :  ಪ್ರೇಮ್ ಚೋಪ್ರಾ, ಅರುಣಾ ಇರಾನಿ, ಹೆಲೆನ್, (1975), 
ದೋ ಝುಟ್ :  ಅಜಿತ್, ಅರುಣಾ ಇರಾನಿ, ಪ್ರೇಮ್ ಚೋಪ್ರಾ, (1975)
ಬೇ ಇಮಾನ್ :  ಮನೋಜ್ ಕುಮಾರ್, ರಾಖಿ, ನಝೀಮಾ,  (1972)
ಸೀಮಾ, : ಭಾರತಿ, ಸಿಮಿ ಗೆರೆವಾಲ್, ರಾಕೇಶ್ ರೋಷನ್, ೧೯೭೧
ಪೆಹ್ಚಾನ್  : ಸುಂದರ್, ಶೈಲೇಶ್ ಕುಮಾರ್, ಚಾಂದ್ ಉಸ್ಮಾನಿ (1970)
ಚನ್  : (1970),
ಆಪ್ ಕಿ ಪರಿಛಾಯಿಯಾ :   (1964).

ಸೋಹನಲಾಲ್  ಕನ್ವರ್  ರ ಕಿರು ಪರಿಚಯ :

ಸೋಹನಲಾಲ್  ಕನ್ವರ್  ಸಹಿತ ಒಬ್ಬ ಯಶಸ್ವಿ  ಚಿತ್ರ ನಿರ್ಮಾಪಕ,  ನಿರ್ದೇಶಕ, ಕೋರಿಯೋ ಗ್ರಾಫರ್, ಆಗಿದ್ದರೆನ್ನುವುದು ಅನೇಕರಿಗೆ ಗೊತ್ತಿಲ್ಲ. ಅವರು,  ಶೀಲಾ ಕನ್ವರ್ ಜತೆ, ವಿವಾಹವಾಗಿ ಜನಿಸಿದ ಮಗಳ  ಹೆಸರು ಅನೀತಾ ಕನ್ವರ್  ಎಂದು. ಅನಿತಾ ಕನ್ವರ್ ದೂರದರ್ಶನದ  "ಬುನಿಯಾದ್" ಎನ್ನುವ ದೂರದದರ್ಶನದ  ಧಾರಾವಾಹಿಯಲ್ಲಿ  ಬಹಳ ಸಮಯ ಪ್ರದರ್ಶನಗೊಂಡು ಆ ಸಮಯದಲ್ಲಿ  ಭಾರತದ ಮನೆಯ ಮಾತಾಗಿತ್ತು. (ಅಲೋಕ್ ನಾಥ್ ಎನ್ನುವ ನಾಯಕನ ವಿರುದ್ಧ ಅಭಿನಯಿಸಿದ ಟೆಲಿವಿಷನ್ ಸೀರಿಯಲ್ ಆಗಿತ್ತು)

1973 ರಲ್ಲಿ 20 ನೇ ಫಿಲ್ಮ್‌ಫೇರ್ ಪ್ರಶಸ್ತಿಸಮಾರಂಭದಲ್ಲಿ  1972 ರಲ್ಲಿ ಮಾಡಿದ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಯಿತು. ಬೇ-ಇಮಾನ್  ಫಿಲಂ ನ  8 ನಾಮನಿರ್ದೇಶನಗಳೊಂದಿಗೆ ಸಮಾರಂಭ, ಶುರುವಾಗಿ  ನಂತರ ಶೋರ್ 7 ನಾಮನಿರ್ದೇಶನಗಳೊಂದಿಗೆ ಮತ್ತು ಪಕೀಜಾ 5 ನಾಮನಿರ್ದೇಶನಗಳೊಂದಿಗೆ ಪಾದಾರ್ಪಣೆ ಮಾಡಿದ್ದಾಗ್ಯೂ ಸೋಹನ್‌ಲಾಲ್ ಕನ್ವರ್ ನಿರ್ಮಾಣ ನಿರ್ದೇಶನ ಮಾಡಿದ ಬೇ-ಇಮಾನ್ ಆ ವರ್ಷದ ಅತ್ಯುತ್ತಮ ಚಲನಚಿತ್ರವೆಂದು ಘೋಷಿಸಲ್ಪಟ್ಟು.  ಅತ್ಯುತ್ತಮ ನಿರ್ದೇಶಕ  ಅತ್ಯುತ್ತಮ ನಟ  (ಮನೋಜ್ ಕುಮಾರ್‌ಗೆ ) ಮತ್ತು ಅತ್ಯುತ್ತಮ ಪೋಷಕ ನಟ  (ಪ್ರಾಣ್‌ಗಾಗಿ)  ಸೇರಿದಂತೆ 7 ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಲ್ಲದೆ, ಸಮಾರಂಭದಲ್ಲಿ ಹೆಚ್ಚು ಪ್ರಶಸ್ತಿ ಪಡೆದ ಚಲನಚಿತ್ರವಾಯಿತು. ಬೇ ಇಮಾನ್‌ಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದ ಪ್ರಾಣ್ ಅವರು  ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು, ಅತ್ಯುತ್ತಮ ಸಂಗೀತ ನಿರ್ದೇಶಕ ಉಪಾಧಿಯು ಪಾಕೀಝ  ಚಿತ್ರಕ್ಕಾಗಿ  ಗುಲಾಮ್ ಮೊಹಮ್ಮದ್‌  (1903-ಮಾರ್ಚ್, 1968) ರಿಗೆ  ಸಿಗಬೇಕಿತ್ತು ; ಮತ್ತು ಶಂಕರ್-ಜೈಕಿಶನ್ ಗೆ ಸಿಕ್ಕಲಿಲ್ಲ . ರಾಜೇಶ್ ಖನ್ನಾ ಅವರು ಅಮರ್ ಪ್ರೇಮ್ ಮತ್ತು ದುಷ್ಮುನ್‌ನಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟನಿಗಾಗಿ ಎರಡು ನಾಮನಿರ್ದೇಶನಗಳನ್ನು ಪಡೆದರೂ ಸಹಿತ, ಬೇ ಇಮಾನ್‌ಗಾಗಿ ಪ್ರಶಸ್ತಿಯನ್ನು ಗೆದ್ದ ಮನೋಜ್ ಕುಮಾರ್‌ ವಿರುದ್ಧ ಸೋತರು. ಸಿನಿ-ಕ್ರಿಟಿಕ್  ಗಳ ಲೆಕ್ಕಾಚಾರ ತಲೆಕೆಳಗಾಗಿ ಚಲನಚಿತ್ರ ರಂಗದಲ್ಲಿ ಖ್ಯಾತಿ ನಾಮರಿಗೆ ಬಹಳ ಬೇಸರ-ನೋವನ್ನು ತಂದ ಸನ್ನಿವೇಶಗಳಿಗೆ ಎಡೆಮಾಡಿಕೊಟ್ಟಿತ್ತು. 

-ಹೊಳಲ್ಕೆರೆ ವೆಂಕಟೇಶ್, ಘಾಟ್ಕೋಪರ್ ಪ 

ಮುಂಬಯಿ-೪೦೦ ೦೮೪ 

Rating
Average: 4 (1 vote)