ಹಿಂದಿ ಹಾಡು -ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ

ಹಿಂದಿ ಹಾಡು -ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ

ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ,
ನಿನ್ನ ಹೊರತು ಜಗತ್ತು ಜಗತ್ತೇ ಅಲ್ಲ!
ನಿನ್ನ ಹೆಜ್ಜೆಗಳನ್ನು ಚುಂಬಿಸುತ್ತ
ಬದುಕಿನ ಮಜಲುಗಳು ಸಾಗಲಿ
ದೂರಕೆ, ಬಲು ದೂರಕೆ.
ಮತ್ತೆ ನೀನು ಜತೆ ಇದ್ದರೆ
ಮಜಲುಗಳಿಗೇನು ಬರವಿಲ್ಲ!
 
ಬಯಕೆ ಆಗುವುದು , ನಿನ್ನ ಮಡಿಲಲ್ಲಿ
ತಲೆ ಇರಿಸಿ ಅಳಬೇಕೆoದು,
ನಿನ್ನ ಕಣ್ಣು ಕೂಡ
ಹನಿಗೂಡಿರುವುದನ್ನು ನಾನು ಕಾಣುವೆ!
 
ನೀನು ಹೇಳಿದರೆ ರಾತ್ರಿ ಇವತ್ತು
ಮುಳುಗನು ಚಂದಿರ!
ರಾತ್ರಿಯ ತಡೆದು ನಿಲ್ಲಿಸು
ರಾತ್ರಿಯ ಮಾತು ಬಿಡು , ಬದುಕಾದರು
ಹೆಚ್ಚು ಬಾಕಿ ಉಳಿದಿಲ್ಲ !
 
ದೇಶದ ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಂಧೀ ಎಂಬ ಒಂದು ಹಿಂದಿ ಚಿತ್ರವು ಬಂದಿತ್ತು. ಅದು ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರ ಜೀವನವನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ. ಅದರಲ್ಲಿನ ಒಂದು ಒಂದು ಸುಂದರ ಗೀತೆ ಇದು. ಚಿತ್ರದ ನಾಯಕಿ ಸ್ವಂತ ಕುಟುಂಬ ಸುಖವನ್ನು ತೊರೆದು ರಾಜಕೀಯಕ್ಕೆ ಇಳಿದು ದೊಡ್ಡ ನಾಯಕಿಯಾಗಿ ಚುನಾವಣೆ ಪ್ರಚಾರದಲ್ಲಿ ಇರುವಾಗ ಆಕೆಯ ಪ್ರಿಯಕರನ ಭೇಟಿಯಾಗುತ್ತದೆ. ಆ ಸಂದರ್ಭದ ಹಾಡು ಇದು.
 
ಈ ಹಾಡನ್ನು ಈ ಮುಂದೆ ಕೊಟ್ಟ ಕೊಂಡಿಯಲ್ಲಿ ನೋಡಬಹುದು ಮತ್ತು ಕೇಳಬಹುದು.
https://youtu.be/8-HnmVg0-O8
 
ಇದೇ ಹಾಡನ್ನು ಇನ್ನೊಂದು ಚಿತ್ರದಲ್ಲಿ ಬಳಸಲಾಗಿದ್ದು ಅದಕ್ಕಾಗಿ ಮುಂದಿನ ಕೊಂಡಿಯನ್ನು ಬಳಸಿ.
https://youtu.be/0fmAz4rvLGs
 
ಸಾಹಿತ್ಯ: ಗುಲ್ಜಾರ್
ಚಿತ್ರ: ಆಂಧಿ
ಸಂಗೀತ: ರಾಹುಲ್ ದೇವ್ ಬರ್ಮನ್
ಗಾಯಕರು: ಲತಾ ಮಂಗೇಶ್ಕರ್ & ಕಿಶೋರ್ ಕುಮಾರ್
ಮೂಲ ಸಾಹಿತ್ಯ ಇಲ್ಲಿದೆ
 
ತೇರೆ ಬಿನಾ ಜಿಂದಗೀ ಸೆ ಕೋಯಿ
ಶಿಕವಾ ತೋ ನಹೀ
ತೇರೆ ಬಿನಾ ಜಿಂದಗೀ ಭೀ ಲೇಕಿನ್
ಜಿಂದಗೀ ತೋ ನಹೀ
 
ಕಾಶ ಐಸಾ ಹೋ , ತೆರೆ ಕದಮೋಂ ಕೋ
ಚುನಕೆ ಮಂಜಿಲ ಚಲೇ
ಔರ್ ಕಹೀ ದೂರ್ ಕಹೀ
ತುಂ ಅಗರ ಸಾಥ್ ಹೋ
ಮಂಜಿಲೋoಕಿ ಕಮೀ ತೋ ನಹೀ
 
ಜೀ ಮೆ ಆತಾ ಹೈ , ತೇರೆ ದಾಮನ ಮೆ
ಸರ ಛುಪಾ ಕೆ ಹಂ ರೋತೆ ರಹೇ
ತೇರೆ ಭೀ ಆoಖೋಂ ಮೆ ಆಂಸುವೋಂ ಕೀ
ನಮೀ ತೋ ನಹೀ
 
ತುಂ ಜೋ ಕಹ ದೋ ತೋ , ಆಜ ಕೀ ರಾತ
ಚಾಂದ ಡೂಬೇಗಾ ನಹೀ
ರಾತ ಕೋ ರೋಕ ಲೋ
ರಾತ ಕೀ ಬಾತ ಹೈ , ಔರ ಜಿಂದಗೀ
ಬಾಕೀ ತೋ ನಹೀ
 
 

Rating
No votes yet