ಹಿಂದಿ ಹಾಡು - ನಿನ ನೆನಪಾಗುತಿರೆ ಬೀಸಿತು ಹಿಮ ಗಾಳಿ!

ಹಿಂದಿ ಹಾಡು - ನಿನ ನೆನಪಾಗುತಿರೆ ಬೀಸಿತು ಹಿಮ ಗಾಳಿ!

ಇದು ದಿಲ್ ನೆ ಫಿರ ಯಾದ ಕಿಯಾ ಎಂಬ ಚಿತ್ರದ ಟೈಟಲ್ ಹಾಡು. ಇದು ತ್ರಿಕೋನಪ್ರೇಮದ ಹಾಡು.
ಇದನ್ನು ಮುಂದಿನ ಕೊಂಡಿಯಲ್ಲಿ ಕೇಳಿ ಮತ್ತು ನೋಡಿ
https://youtu.be/2YohEL8ZkFg

ಮೂಲದ ಧಾಟಿಯಲ್ಲಿ ಈ ಹಾಡನ್ನು ಅನುವಾದ ಮಾಡಬೇಕೆಂದು ನನ್ನ ಆಸೆ .
ಪಲ್ಲವಿ ಸಿದ್ಧ ಇದೆ -
ನಿನ ನೆನಪಾಗುತಿರೆ ಬೀಸಿತು ಹಿಮ ಗಾಳಿ,
ಶಿಥಿಲ ಸಾಮ್ರಾಜ್ಯದ ಮೇಲೆ ನೋವಿನ ಮರು ದಾಳಿ
ನೀವೇನಾದರೂ ಕೈ ಹಚ್ಚುವಿರಾ ನೋಡಿ !

ಹಾಡಿನ ಅರ್ಥ-

ಹೃದಯ ಮತ್ತೆ ನೆನಪಿಸಿತು
ಹಿಮದ ಗಾಳಿ ಬೀಸಿತು
ಪ್ರೇಮದ ನೋವು ಮತ್ತೆ
ಮರುಕಳಿಸಿತು

( ಒಬ್ಬ ನಾಯಕ -)
ಅವಾದರೂ ಎಂಥ ದಿನಗಳು!
ನನ್ನನ್ನು ನಿನ್ನ ಹೃದಯದಲ್ಲಿ
ಇರಿಸಿಕೊಂಡಿದ್ದೆ ನೀನು
ನಗು ನಗುತ್ತ ನನ್ನನ್ನು
ಆಲಂಗಿಸಿದ್ದೆ ನೀನು
ಅರಿಯೆ, ಆಡಾಡುತ್ತ ಏಕೆ
ಅದು ಕುತ್ತಿಗೆಗೆ ಬಂದಿತು

(ನಾಯಕಿ)
ಏನು ಹೇಳಲಿ ನಾ ನಿಮಗೆ
ಮೋಂಬತ್ತಿಯ ಹಣೆಬರಹವನು
ದುಃಖದಲ್ಲಿ ಉರಿಯುವುದರ ಹೊರತು
ಪ್ರೇಮ ಇನ್ನೇನು?
ಇದು ವಸಂತನು
ಕಾಲಿರಿಸಿರದ ತೋಟ

(ಇನ್ನೊಬ್ಬ ನಾಯಕ)
ನಾವು ಆ ದೀಪದ ಹುಳುಗಳು
ಆ ದೀಪಕ್ಕೆ ಉಸಿರು ತುಂಬುವೆವು
ಸೌಂದರ್ಯದ ಬೆಂಕಿಯಲಿ
ಮೌನದಲಿ ಉರಿಯುವೆವು
ನಿಟ್ಟುಸಿರು ಹೊರ ಹೊಮ್ಮಿದರೆ
ಅದು ಪ್ರೇಮಕೆ ಅವಮಾನ

ಮೂಲ ಸಾಹಿತ್ಯ -

ದಿಲ್ ನೇ ಫಿರ್ ಯಾದ್ ಕಿಯಾ
ಬರ್ಫ್ ಸಿ ಲೆಹರ ಆಯಿ ಹೈ
ಫಿರ್ ಕೊಯಿ ಚೋಟ್
ಮೊಹಬ್ಬತ್ ಕಿ ಉಭರ್ ಆಯಿ ಹೈ
ದಿಲ್ ನೆ ಫಿರ್ ಯಾದ್ ಕಿಯಾ

ವೋ ಭೀ ಕ್ಯಾ ದಿನ್ ಥೆ
ಹಮೆ ದಿಲ್ ಮೆ ಬಿಠಾಯಾ ಥಾ ಕಭಿ
ಔರ್ ಹಸ್ ಹಸ್ ಕೇ ಗಲೇ
ತುಮ್ ನೆ ಲಗಾಯಾ ಥಾ ಕಭಿ
ಖೇಲ್ ಹೈ ಖೇಲ್ ಮೇನ್ ಕ್ಯೊಂ
ಜಾನ್ ಪೆ ಬನ್ ಆಯಿ ಹೈ
ಫಿರ್ ಕೊಯಿ ಚೋಟ್
ಮೊಹಬ್ಬತ್ ಕಿ ಉಭರ್ ಆಯಿ ಹೈ
ದಿಲ್ ನೆ ಫಿರ್ ಯಾದ್ ಕಿಯಾ

ಕ್ಯಾ ಬತಾಯೇ ತುಮೆ ಹಮ್
ಶಮ್ಮಾ ಕಿ ಕಿಸ್ಮತ್ ಕ್ಯಾ ಹೈ
ಗಮ್ ಮೇ ಜಲ್ನೆ ಕೆ ಸಿವಾ
ಔರ್ ಮೊಹಬ್ಬತ್ ಕ್ಯಾ ಹೈ
ಯೆ ವೋ ಗುಲ್ಶನ್ ಹೈ ಕಿ ಜಿಸ್ ಮೇ
ನ ಬಹಾರ್ ಆಯಿ ಹೈ
ಫಿರ್ ಕೊಯಿ ಚೋಟ್
ಮೊಹಬ್ಬತ್ ಕಿ ಉಭರ್ ಆಯಿ ಹೈ
ದಿಲ್ ನೆ ಫಿರ್ ಯಾದ್ ಕಿಯಾ

ಹಮ್ ವೋ ಪರ್ವಾನೆ ಹೈ ಜೋ
ಶಮ್ಮಾ ಕಾ ದಮ್ ಭರ್ತೆ ಹೈ
ಹುಸ್ನ್ ಕಿ ಆಗ್ ಮೇನ್ ಖಾಮೋಶ್
ಜಲಾ ಕರ್ತೇ ಹೈ
ಆಹ್ ಬಿ ನಿಕಲೇ ತೋ
ಪ್ಯಾರ್ ಕಿ ರುಸ್ವಾಯಿ ಹೈ
ಫಿರ್ ಕೊಯಿ ಚೋಟ್
ಮೊಹಬ್ಬತ್ ಕಿ ಉಭರ್ ಆಯಿ ಹೈ
ದಿಲ್ ನೇ ಫಿರ್ ಯಾದ್ ಕಿಯಾ
ಬರ್ಫ್ ಸಿ ಲೆಹರ ಆಯಿ ಹೈ
ದಿಲ್ ನೇ ಫಿರ್ ಯಾದ್ ಕಿಯಾ

Rating
No votes yet