ಹಿಂದುತ್ವದೊಳಗೆ ಭಯೋತ್ಪಾದನೆ ಕೃತಿಯ ಮುಖಪುಟ

ಹಿಂದುತ್ವದೊಳಗೆ ಭಯೋತ್ಪಾದನೆ ಕೃತಿಯ ಮುಖಪುಟ

ಚಿತ್ರ

ಗೆ

ಬ್ಲಾಗ್ ಸಂಪಾದಕರಿಗೆ

 

 

 

ಹಿಂದುತ್ವದೊಳಗೆ ಭಯೋತ್ಪಾಧನೆ ಎಂಬ ನನ್ನ ಕೃತಿಯು ಅಮ್ಮ ಪ್ರಕಾಶನದ ವತಿಯಿಂದ ಮುದ್ರಣಕ್ಕೆ ಸಿದ್ದಗೊಂಡಿದೆ, ಅದರಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ ಸಮೀಪವಾದ ಹಲವಾರು ಅಂಶಗಳಿವೆ. ಬಾಬರೀ ಮಸೀದಿ ಧ್ವಂಸ, ನರೋಡ ಪಾಟಿಯ ಹತ್ಯಾಕಾಂಡ, ಅಜ್ಮೀರ್‍ ದರ್ಗಾ ಸ್ಪೋಟ, ಮಾಲೆಂಗಾವ್ ಸ್ಪೋಟ, ಮೈಸೂರಿನಲ್ಲಿ ಕೋಮುಗಲಭೆ, ಕರ್ನಾಟಕದ ಕರಾವಳಿಬಾಗಗಳಲ್ಲಿ ನಡೆದ ಚರ್ಚ್ ಧಾಲಿಗಳು, ಓರಿಸ್ಸಾದ ಕಂದಮಾಲ್ ಹಾಗೂ ಭುವನೇಶ್ವರದಲ್ಲಿ ನಡೆದ ದುರ್ಘಟನೆಗಳು ಮುಂತಾದವು ಸೇರಿದಂತೆ ಇದಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ರಾಷ್ಟ್ರದ ಹಲವು ಗಣ್ಯರು ಭಾಗಿಯಾಗಿದ್ದಾರೆ, ಅವರಲ್ಲಿ ಎಲ್,ಕೆ, ಅಡ್ವಾಣಿ, ನರೇಂದ್ರ ಮೋದಿ,ವರುಣ್ ಗಾಂದಿ,ಪ್ರಮೋದ್ ಮುತಾಲಿಕ್, ಇಂದ್ರೇಶ್ ಕುಮಾರ್‍, ಬಿ.ಎಸ್.ಯಡಿಯೂರಪ್ಪ,ಡಾ.ವಿ.ಎಸ್. ಆಚಾರ್ಯ, ಹಾಗೂ ಇನ್ನೂ ಮುಂತಾದವರನ್ನು ಒಳಗೊಂಡಿದೆ. ಇಂತಹ ಹೀನ ಕೃತ್ಯಗಳಿಗೆ ಕಾರಣವಾದ ಆರ್‍ ಎಸ್ ಎಸ್, ಭಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀ ರಾಮಸೇನೆ ಮುಂತಾದ ಸಂಘಟನೆಗಳು ಸಕ್ರಿಯವಾಗಿ ಕಾರನಭೂತವಾಗಿವೆ, ಆದ್ದರಿಂದ ಈ ಎಲ್ಲಾ ಅಂಶಗಳನ್ನು ಹಿಂದುತ್ವದೊಳಗೆ ಭಯೋತ್ಪಾಧನೆ ಎಂಬ ಶೀರ್ಷಿಕೆಯಡಿ ಕೃತಿಯನ್ನು ಹೊರತರುತ್ತಿದ್ದೇನೆ. ಆಗಾಗಿ ಇದರ ಮುಖಪುಟ ಈ ರೀತಿ ಇದೆ. ಮುಖಪುಟ ವಿನ್ಯಾಸಕಾರರು- ಯಶವಂತ್ ಕಾರ್ಗಳ್ಳಿ,

 

ಈ ಮುಖಪುಟಕ್ಕೆ ಸಂಭಂದಿಸಿದಂತೆ ಓದುಗರು ನಿಮ್ಮದೇ ಆದ ಅಭಿಪ್ರಾಯಗಳನ್ನು ಹೊಹಾಕಬಹುದು......

ಇಂತಿ--

ನಿಮ್ಮ ಹಾರೋಹಳ್ಳಿ ರವೀಂದ್ರ

 

Rating
No votes yet

Comments

Submitted by kavinagaraj Wed, 02/26/2014 - 15:10

ಪುಸ್ತಕದ ಶೀರ್ಷಿಕೆ ಸರಿಯಿದೆ ಅನ್ನಿಸುವುದಿಲ್ಲ. ಹಿಂದುತ್ವದಲ್ಲಿ ಭಯೋತ್ಪಾದನೆ ಇರಲಾರದು, ಹಿಂದುಗಳಲ್ಲಿ ಭಯೋತ್ಪಾದಕರಿರಬಹುದು! ಪುಸ್ತಕ ಪ್ರಕಟವಾಗಿರದಿದ್ದರೆ, ಹಿಂದುತ್ವದಲ್ಲಿ ಭಯೋತ್ಪಾದನೆ ಇದೆ ಎಂಬುದರ ಬಗ್ಗೆ ವಿವರಣೆ/ತಮ್ಮ ಅಭಿಪ್ರಾಯ ಸೇರಿಸಿ ಪ್ರಕಟಿಸಿ. ಕೇವಲ ಆರೋಪಗಳನ್ನು ಮಾಡಿ 'ಹಿಟ್ ಅಂಡ್ ರನ್' ರೀತಿಯಲ್ಲಿ ಇರದೆ, ಸಾಕ್ಷ್ಯಾಧಾರಗಳೊಂದಿಗೆ ಪ್ರಕಟಿಸಿದರೆ ಮೌಲ್ಯ ಹೆಚ್ಚಬಹುದು. ವಿವಾದಾತ್ಮಕ ಕೃತಿಯಾಗಿರುವುದರಿಂದ ಹೆಚ್ಚು ಪ್ರಚಾರವೂ ಈ ಪುಸ್ತಕಕ್ಕೆ ಸಿಗಬಹುದು. ಫಲಿತಾಂಶ ಒಳ್ಳೆಯದಾಗಲಿ.

Submitted by ಗಣೇಶ Thu, 02/27/2014 - 00:09

In reply to by kavinagaraj

ಕವಿನಾಗರಾಜರೆ,
>>ಹಿಂದುತ್ವದಲ್ಲಿ ಭಯೋತ್ಪಾದನೆ ಇರಲಾರದು,
- "ಹಿಂದು ದೇವತೆಗಳು ಭಯೋತ್ಪಾದಕರು" ಅಂತ ಸಾಕ್ಷಿ ಆಧಾರಗಳೊಂದಿಗೆ ಪುಸ್ತಕ ಬರೆಯಬೇಕೆಂದಿದ್ದೇನೆ. ಎಲ್ಲರೂ ಸಾಧ್ಯವಾದಷ್ಟು ವಿರೋಧಿಸಿ ಈಗಿನಿಂದಲೇ ಪ್ರಚಾರ ನೀಡಬೇಕೆಂದು ಕೋರಿಕೆ.:)
ಹಾರೋಹಳ್ಳಿ ರವೀಂದ್ರರೆ,
ಕವಿನಾಗರಾಜರ ಪ್ರಶ್ನೆಗಳು ನನ್ನದೂ ಸಹ.
ತಾವು ಮೇಲೆ ಬರೆದ - "...ಅದರಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ ಸಮೀಪವಾದ ಹಲವಾರು ಅಂಶಗಳಿವೆ." "ಭಯೋತ್ಪಾದನ ಕೃತ್ಯಕ್ಕೆ ಸಮೀಪವಾದ" ಎಂದೇಕೆ ಬರೆದಿದ್ದೀರಿ? ಭಯೋತ್ಪಾದನ ಕೃತ್ಯ ಎಂದಿಲ್ಲ ಏಕೆ? ಅವರ ಕೃತ್ಯವೇ ಸಮೀಪದ್ದಾದರೆ ಹಿಂದುತ್ವದಲ್ಲಿ ಭಯೋತ್ಪಾದನೆ ಬೇರೆ ವಿಷಯವೇನಾದರೂ ಇದೆಯಾ? ನೀವು ಪುಸ್ತಕ ಪ್ರಕಟನೆಯಲ್ಲಿ ಮಗ್ನರಾಗಿರುವುದರಿಂದ ಸದ್ಯಕ್ಕೆ ನಿಮ್ಮಿಂದ ಉತ್ತರ ಸಿಗಲಿಕ್ಕಿಲ್ಲ. ಆದರೆ ಈ ಸಣ್ಣಪುಟ್ಟ ತಪ್ಪುಗಳನ್ನು ತಿದ್ದಿ ಬರೆಯಿರಿ. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ.
ಚುನಾವಣೆ ಸಮಯ ಪಾಕ್ ಉಗ್ರರು ಭಯೋತ್ಪಾದನೆಗೆ ತಯಾರಾಗಿದ್ದಾರೆ- http://www.reuters.com/article/2014/02/18/us-india-pakistan-militant-idU...
ಇವರ ಬಗ್ಗೆಯೂ ಎಚ್ಚರವಾಗಿರೋಣ.

Submitted by kavinagaraj Thu, 02/27/2014 - 10:31

In reply to by ಗಣೇಶ

ಸೇರಿಸಲು ಮರೆತದ್ದು: ಹಿಂದುತ್ವ ಎಂದರೆ ಲೇಖಕರ ಕಲ್ಪನೆ ಏನು ಎಂಬ ಬಗ್ಗೆಯೂ ಮಾಹಿತಿ ಇರಬೇಕಾದುದು ಪುಸ್ತಕದ ಶೀರ್ಷಿಕೆಗೆ ಕೊಡುವ ನ್ಯಾಯವಾಗುತ್ತದೆ.