ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ -

೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ.
೨. ಗಣಪತಿ ಹಬ್ಬಕ್ಕ ಮಣ್ಣಿನ ಗಣಪತಿ ಮೂರ್ತಿ ಇಡತೀವಿ.
೩. ದಿನಾ ಸಂಧ್ಯಾವಂದನೆ ಮಾಡುಮುಂದ ನಾವು ಗೋಪಿಚಂದನ ಎನ ಹಚಗೋತೀವಿ, ಅದು ಮಣ್ಣಿಂದು.
೪. ನಮ್ಮ ಮನ್ಯಾಗ ಗೌರಿ ಕೂಡಸ್ತಾರಲಾ, ಅದು ಸುದೇಕ್ ಮಣ್ಣಿಂದು ಮಾಡಬೇಕು ಅಂತ ಅದ.
೫. ಯಾವುದೇ ಹೋಮ, ಯಜ್ಞ ನಡದ್ರ ಅಲ್ಯೂ ಮಣ್ಣು ಬೇಕಾಗ್ತದ.
೬. ಉತ್ತರ ಕರ್ನಾಟಕದ ಕಡೆ ಗುಳ್ಳವ್ವ ಅಂತ ಮಾಡತೀವಿ, ಅದು ಸುದೇಕ್ ಮಣ್ಣಿಂದೇ ಮಾಡತಾರ.

ಹಿಂಗೆ ಹೇಳ್ಕೋತ ಹೋದ್ರ ಇನಾ ಭಾಳ ಸಿಗತಿರಬಹುದು. ಸಿಗತಿರಬಹುದೇನು, ಸಿಕ್ಕೇ ಸಿಗತಾವ. ವಟ್ಟ ಮಣ್ಣಿಗೆ ಮಹತ್ವ ಅದ ಅಂತ ಆತು. ಇಲ್ಲಿ ಮಣ್ಣ ಅಂದ್ರ ಬರೀ ಮಣ್ಣು ಅಂತ ಅಲ್ಲಾ, ಭೂತಾಯಿ ಅಂತ ಲೆಕ್ಕಾ. ನಾವು ಸದಾಕಾಲ ಭೂತಾಯಿಯನ್ನ ಪೂಜಸ್ತೀವಿ ಅಂತ. ಇದು ಯಾಕ ಇರಬಹುದಪಾ ಅಂತ ನಾನು ವಿಚಾರ ಮಾಡಿದೆ. ನನಗ ತಿಳಿದ ಮಟ್ಟಿಗೆ, ನಾವು ಮೂಲತಃ ಬೇಸಾಯ ಮಾಡುವ ಜನಾಂಗ. ಅಂದ್ರ ವಕ್ಕಲತನಾನೇ ನಮ್ಮ ಮುಖ್ಯ ಉದ್ಯೋಗ. ಹಿಂಗಿದ್ದಾಗ ಭೂತಾಯಿಗೆ ಅತಿ ಹೆಚ್ಚು ಪ್ರಮಾಣದಾಗ ಆದರ, ಮರ್ಯಾದೆ ಮತ್ತ ಪೂಜಾ ಇರೂದು ಸಹಜ ಅನಸ್ತದ. ಅದಕ್ಕೆ ಈಗೆಲ್ಲಾ ಮಂದೀ ಕಟಗಿ ಗೌರಿ, ಬೆಳ್ಲಿ ಗಣಪ್ಪ ಹಿಂಗೇನರೆ ಕೂಡ್ಸೀದ್ರ, ಹಂಗ ಮಾಡಬ್ಯಾಡ್ರಿ, ಮಣ್ಣಿಂದೇ ಕೂಡಸ್ರಿ ಅಂತ ಹೇಳುದು.

ನಮ್ಮಂತವರೆಲ್ಲಾ ಯಾಕ, ಮಣ್ಣಿಂದೇ ಯಾಕ? ಅಂತ ಪ್ರಶ್ನೆ ಹಾಕತೀವಿ. ಹೇಳಿದವರಿಗೆ ಉತ್ತರಾ ಗೊತ್ತಿಲ್ಲಂದ್ರ ಆತ್ ನಡೀ. ನೀಮಗ ಎನೂ ಗೊತ್ತಿಲ್ಲ. ಬರೇ ಮೂಢ ನಂಬಿಕೆ ನಿಮ್ದೆಲ್ಲಾ ಅಂತ ದಬಾಯ್ಸಿ, ಜೋರ್ ಮಾಡಿಬಿಡ್ತೀವಿ. ಅವರು ಮುಂದ ಎನ್ ಹೇಳುದಂತ ಸುಮ್ಮ ಆಗ್ತಾರ. ನಾನು ಹಿಂಗೇ ಮಾಡತಿದ್ದೆ. ಆದ್ರ ಇದರಿಂದ ನಮಗೆ ಲುಗಸಾನ ಅದ. ಅವರು ಹೇಳುದರವಳಗ ಏನರೇ ಛೊಲೋ ಇತ್ತಂದ್ರ ಅದೆಲ್ಲಾ ನಾವು ಕಳಕೋತೀವಿ. ಅದಕ್ಕೆ ನಾನು ವಿಚಾರ ಮಾಡಿ ಇನ್ನ ಮ್ಯಾಲಿಂದ ನನಗ ಎನು ಪ್ರಶ್ನೆ ಬರ್ತದ ಅದಕ್ಕ ಉತ್ತರ ನಾನೇ ದುಡಕಬೇಕು. ನಾ ಎಷ್ಚು ಹುಡಕೀದ್ರು ಸಿಗಲಿಲ್ಲ ಅಂದ್ರ ಅದನ್ನ ಮೂಢನಂಬಿಕೆ ಅಂತ ತಿಳ್ಕೋತೀನಿ. ನೋಡುಣು ಎಲ್ಲಿತನ ಜಗ್ಗತದ ಈ ಗಾಡಿ.

ಜೈ ಶ್ರೀ ಯಲಗೂರೇಶ ಪ್ರಸನ್ನ.
ಹರಿ ಓಂ.

Rating
No votes yet

Comments