ಹಿಂದೆಂದೋ ಬರೆದ ಕವನಗಳು
೨೦೦೮- ೨೦೦೯ ರಲ್ಲಿ ಕೆಲವು ಕವನಗಳನ್ನು ಬರೆದು ಸಂಪದಕ್ಕೆ ಸೇರಿಸಿದ್ದೆ , ಆದರೆ ಆ ಸಮಯದಲ್ಲಿ ಸಂಪದದಲ್ಲಿ ಸ್ವಲ್ಪ ಬದಲಾವಣೆಗಳು ನಡೀತಾ ಇತ್ತು. ತುಂಬಾ ಬರಹಗಳನ್ನು ( ಕವನ, ಪುಸ್ತಕ ಪರಿಕಾಯ, ವ್ಯಕ್ತಿ ಪರಿಚಯ, ರಸ ಪ್ರಶ್ನೆ, ಪದ ಬಂಧ ...) ಸಂಪದ, ಸಿರಿಚಂದನ (CGI ನ ಮಾಸಿಕ) ದಲ್ಲಿ ಸೇರಿಸ್ತ ಇದ್ದೆ. ೨೦೦೯ ರಲ್ಲಿ ಬದಲಾದ ಸಂಪದದಲ್ಲಿ ನನ್ನ ಕೆಲವು ಕವನಗಳು ನಾಪತ್ತೆಯಾದವು, ಹೇಗೋ ಆ ನೆನಪು ನನ್ನ ಆವರಿಸಿದೇ , ಅದಕ್ಕಾಗಿ ಮತ್ತೆ ಆ ಕವನಗಳನ್ನು ಸಂಪದಕ್ಕೆ ಸೇರಿಸ್ತ ಇದೀನಿ.
ಸ್ನೇಹವೊಂದೇ ಸ್ಥಿರ —
ಸ್ನೇಹವೆ ಸತ್ಯ,ಸ್ನೇಹವೆ ಸಾಹಿತ್ಯ .
ಸ್ನೇಹವೆ ಸಂಗೀತ, ಸ್ನೇಹವೆ ವಿಶ್ವಾಸದ ಸಂಕೇತ.
ಸ್ನೇಹವೆ ಸಂಸ್ಕೃತಿ, ಸ್ನೇಹವೆ ಸ್ಪೂರ್ತಿ.
ಸ್ನೇಹವೆ ಸಂಪದ, ಸ್ನೇಹವೆ ಸುಧಾ.
ಸ್ನೇಹವೆ ಸಮನ್ವಯ,ಸ್ನೇಹವೆ ಸುಪ್ರಿಯ.
ಸ್ನೇಹವೆ ಸುಮಧುರ,ಸ್ನೇಹವೆ ಅತಿ ಸುಂದರ.
ಸ್ನೇಹವಿದ್ದರೆ ಸಂತಸ,ಸ್ನೇಹವಿದ್ದರೆ ಸಂತೃಪ್ತಿ.
ಸ್ನೇಹಕ್ಕಿಲ್ಲ ಸಾವು ,ಸ್ನೇಹಕ್ಕಿಲ್ಲ ಸಾಟಿ.
ಸ್ನೇಹವೆ ಸಾಗರ,ಸ್ನೇಹವೆ ಸದಾ ಅಮರ.
ಸ್ನೇಹವೆ ಸಿತಾರ, ಸ್ನೇಹವೊಂದೇ ಸ್ಥಿರ.
೨ನೇ ವಾರ್ಷಿಕೋತ್ಸವ –
ಸಿ ಜಿ ಐ ಗೆ ಸೇರಿ ನಾಳೆಗೆ ಎರಡು ವರುಷ,
ತಾಂತ್ರಿಕ ಕೆಲಸ ತರುವುದು ನನಗೆ ಹರುಷ.
ಸಂಸ್ಥೆಯಲ್ಲಿ ಸಾಧಿಸುರುವೆ ನಾನು ಅಲ್ಪ,
ಇಲ್ಲಿ ಸಾಧನೆ ಮಾಡಬೇಕಾಗಿದೆ ಇನ್ನು ಸ್ವಲ್ಪ.
ನಮ್ಮಲಿ ಇರುವುದು ಸಿರಿಚಂದನ ಕನ್ನಡ ಬಳಗ,
ಅಲ್ಲಿ ನಾ ಮಾಡುವೆ ನನ್ನ ಬರಹಗಳ ಪ್ರಯೋಗ .
ಸ್ನೇಹಿತರು ಸಹೋದ್ಯೋಗಿಗಳು ತೋರುವರು ಮಮತೆ,
ಇಲ್ಲಿ ಆತ್ಮೀಯತೆಗೆ ಇಲ್ಲ ಕೊರತೆ.
ಕಾದಿರುವೆ ನಿನಗಾಗಿ !! –
ನೀ ಬರುವ ದಾರಿಯ ನೋಡುತ
ನೀ ತರುವ ಒಲವ ಕಾಯುತ
ನಿನ್ನ ನೋಟಕ್ಕೆ ತುಡಿಯುತ
ನಿನ್ನ ಸವಿ ಮಾತಿಗೆ ಮನ ಮಿಡಿಯುತ
ನಿನ್ನಲ್ಲಿ ಕಳೆದೂಗಿರುವ ಮನಸ್ಸ ಹುಡುಕುತ
ಬಾಳೆಲ್ಲ ಪರಿತಪಿಸುತ
ಸಾಗರದಷ್ಟು ಪ್ರೀತಿಯ ಕೊಡುವೆಯ??
ನೀ ನನಗೆ ಸಿಗುವೆಯ??
ಕಾದಿರುವೆ ನಿನಗಾಗಿ !!
ನಿನ್ನ ಹೆಸರು –
ಈ ಹೃದಯದಗೀತೆಯ ಪಲ್ಲವಿಯಲಿ,
ಮೌನ ಮನದ ಮಾತಲಿ,
ಮಾತಿನ ಭಾವದಲಿ,
ನಿನ್ನ ಹೆಸರು
ಈ ಆತ್ಮದ ಉಸಿರಲಿ,
ಮಿಂಚಿನ ಬೆಳಕಲಿ,
ಕಣ್ಣಂಚಿನ ಸಂಚಲಿ,
ನಿನ್ನ ಹೆಸರು
ಈ ಬಾಳಿನ ನಾಳೆಯ ಕಥೆಯಲಿ,
ಕವನದ ಸಾಲಲಿ,
ಬದುಕಿನ ನಂದಾದೀಪದಲಿ,
ನಿನ್ನ ಹೆಸರು
ನೀ ಬದಲಾದರೆ?? –
ಅರಳುವುದು ಮನದ ಮಲ್ಲಿಗೆ,
ಹಾಡುವುದು ಅಂತರಂಗದ ಕೋಗಿಲೆ
ನೀ ಬದಲಾದರೆ??
ನನಸಾಗುವುದು ನೆನೆದಷ್ಟು ಕನಸು,
ನಾ ಕಾಣುವೆ ಮತ್ತಷ್ಟು ಹೂಂಗನಸು
ನೀ ಬದಲಾದರೆ??
ಬಾಳಲ್ಲಿ ಆಗುವುದು ಅರೋಣದಯ,
ನಾ ಕಾಣುವೆ ಬದುಕಲ್ಲಿ ಆಶಾಕಿರಣ
ನೀ ಬದಲಾದರೆ??
ಬರುವುದು ನನಗೆ ನವ ಚೇತನ,
ಆರಂಭವಾಗುವುದು ನೂತನ ಜೀವನ
ನೀ ಬದಲಾದರೆ??
ಓ ಸಮಯವೇ ಎನಗೋಸ್ಕರ ನೀ ಬದಲಾಗಲಾರೆಯ???
ನೀನಿಲ್ಲದೆ.. –
ಮುದುಡಿದೆ ಮನದ ಕುಸುಮ,
ಮೌನವಾಗಿದೆ ನನ್ನೀ ಅಂತರಾತ್ಮ
ನೀನಿಲ್ಲದೆ..
ಅಲೆದಾಡುತಿಹೆನು ಇರುಳಲಿ ,
ಕಂಗಾಳಗಿಹಿನು ಬಾಳಲಿ
ನೀನಿಲ್ಲದೆ..
ಸದ್ದಿಲದೆ ಅಳುತಿದೆ ಮನ,
ನೋವಿನಲಿ ಕರಗುತಿದೆ ಜೀವನ
ನೀನಿಲ್ಲದೆ..
ಮೂನ್ನಡೆಯದೆ ನಿಂತಿದೆ ಈ ಬದುಕು,
ಕತ್ತಲಲಿ ಹುಡುಕುತಿಹೆನು ಹೊಂಬೆಳಕು
ನೀನಿಲ್ಲದೆ...
ರಕ್ಷಾ ಬಂಧನ—
ನನಗೆ ಇರುವರು ಇಬ್ಬರು ಸಹೋದರರು,
ಒಬ್ಬ ಇಂಜಿನಿಯರ್,ಮತ್ತೊಬ್ಬ ಡಾಕ್ಟರು.
ಇವರು ಸದಾ ಸುರಿಸುವರು ಹರ್ಷದ ಬಿಂದು,
ಇವರೇ ನನ್ನ ಆಪ್ತ ಸ್ನೇಹ ಬಂಧು.
ಇವರಿಂದ ನಾ ಕಲಿತೆ ಬಹಳಷ್ಟು,
ಆದರು ನಾ ತಿಳಿಯಬೇಕಾಗಿದೆ ಮತ್ತಷ್ಟು.
ಒಬ್ಬನದು ಅತಿ ಮಾತು, ಇನ್ನೊಬ್ಬನದು ಸದಾ ಮೌನ,
ಇವರಿದ್ದರೆ ನಲಿವುದು ನನ್ನ ಮನ.
ಇಂದು ರಕ್ಷಾ ಬಂಧನದ ಸುದಿನ,
ಇವರಿಗೆ ನಾ ಮಾಡುವೆ ಹೃತ್ಪೂರ್ವಕ ನಮನ.
--------------------------------------------------------------------------------------------------
ಯಾರಾತ... ??
ದನಿಯಲ್ಲಿ ಸುಂದರ ಸ್ವರವುಳ್ಳವವನು,
ಮಧುರ ಮಾತಿನಿಂದ ಮನಸುರೆಗೊಳಿಸುವವನು,
ಸವಿ ನೋಟದಲಿ ವಿಶ್ವಾಸ ಬಿರುವವನು,
ಯಾರಾತ... ಯಾರಾತ... ??
ಮನಸಿನ ಕನಸುಗಳನ್ನೂ ನನಸುಮಾಡುವವನು,
ಕಡಲ ಅಲೆಗಳಂತೆ ಆಸೆ ಮೂಡಿಸುವವನು,
ಅರಳಿದ ಮನದಂತೆ ಮುಗುಳ್ನಗಿಸುವವನು,
ಯಾರಾತ... ಯಾರಾತ... ??
ನನ್ನೆಲ್ಲ ಭಾವನೆಗಳಿಗೆ ಸ್ಪಂದಿಸುವವನು,
ಮಾನಸ ವೀಣೆಯ ವೈಣಿಕನಾಗುವವನು,
ಈ ಬದುಕಿನ ಸಿಹಿ ಕಹಿಗಳಲ್ಲಿ ಜೊತೆಗಾರನಾಗುವವನು,
ಯಾರಾತ ... ಯಾರಾತ...??
Comments
ಉ: ಹಿಂದೆಂದೋ ಬರೆದ ಕವನಗಳು:@ ಮಾನಸ ಅವ್ರೆ
ಉ: ಹಿಂದೆಂದೋ ಬರೆದ ಕವನಗಳು