ಹಿರಿಯ ನಾಗರಿಕರಿಗಾಗಿ....
ಇತ್ತಿಚಿಗೆ ನನ್ನ ಬಂಗಾಳಿ ಸ್ನೇಹಿತರೋಬ್ಬರ ಕೋರಿಕೆಗಾಗಿ, ಅವರ ಸ್ನೇಹಿತರೋಬ್ಬರ ಸಂದೇಶವೋಂದನು ಕನ್ನಡಕ್ಕೆ ಅನುವಾದಿಸಿದೆ. ಸಂದೇಶ ಹೀಗಿದೆ.....
"ಇದು ಅತೀ ವಿಷಾದದ ಸಂಗತಿ, ನಮ್ಮ ದೇಶದ ಹಿರಿಯ ನಾಗರಿಕರನ್ನು ನಮ್ಮ ಸಮಾಜದಲ್ಲಿ ಹಾಗೂ ಹೇಚ್ಚಾಗಿ ನಮ್ಮ ಪರಿವಾರಗಳಲ್ಲಿ ಅತೀಯಾಗಿ ಕಡೇಗಣಿಸಲಾಗಿದೆ. ಹಿರಿಯ ನಾಗರಿಕರ ಪ್ರತಿ ನಮ್ಮ ಪ್ರೀತಿ ಹಾಗು ಗೌರವದ ಸಂದೇಶ ಸಾರಲು ನಾನು (ತಪಸ ಕುಮಾರ, ಕೋಲ್ಕೋತಾ ರಹವಾಸಿ) ಪಶ್ಚಿಮ ಬಂಗಾಲದ ಗಂಗಾಸಾಗರದಿಂದ ಗುಜರಾತದ ಕಚ್ಚ್ ವರಗೆ ಭಾರತದ ಸಾಗರತೀರದೂದ್ದಕ್ಕೂ ಕಾಲ್ನಡಿಗೇಯಲ್ಲಿ ಪ್ರಯಾಣಿಸುವ ಉದ್ದೇಶ ಹೋಂದಿರುತ್ತೇನ್ನೆ. ನನ್ನ ಈ ಉದ್ದೇಶಕ್ಕೆ ಭಾರತದ ಪ್ರತಿಯೋಬ್ಬ ನಾಗರೀಕರು ಸ್ಪಂದಿಸುವರೇಂಬ ವಿಶ್ವಾಸ ನನಗಿದೆ. ನಾವೇಲ್ಲರೂ ಸೇರಿ ಭಾರತದ ಹೇಮ್ಮೆ ಹೇಚ್ಚಿಸೋಣ.
ಪ್ರಯಾಣದ ವಿವರ :
1. ಕಾಲ್ನಡಿಗೇಯ ದೂರ – 5,500 ಕಿ.ಮಿ
2. ಪ್ರಯಾಣವು 9 ರಾಜ್ಯಗಳು, 66 ಜಿಲ್ಲೆಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು, ಹಲವಾರು ನದಿಗಳು, 3 ಮಹಾನಗರಗಳು, 12 ಪ್ರಮುಖ ಹಾಗು 180 ಚಿಕ್ಕ ಬಂದರುಗಳನ್ನು ಹೋಂದಿರುವುದು.
3. ಪ್ರಯಾಣವು ಬಂಗಾಲ ಕೂಲ್ಲಿ, ಭಾರತೀಯ ಮಹಾಸಾಗರದ ಶಾಖೆಗಳನ್ನು ಬಳಿಸಿ ಅರೆಬಿಯನ್ ಸಾಗರದ ತೀರದಲ್ಲಿ ಕೋನೆಗೋಳ್ಳುವುದು.
ಪ್ರಯಾಣದ ಪ್ರಾರಂಭ ದಿನಾಂಕ 13 ನೇ ಅಕ್ಟೋಬರ್ 2007 ರಂದು."
ಬನ್ನಿ ನಾವು ಕೂಡ ನಮ್ಮ ಹಿರಿಯ ನಾಗರಿಕರಿಗೆ ನಮ್ಮ ಗೌರವ ಸೂಚಿಸೋಣ.... ತಪಸ ಕುಮಾರರ ಉದ್ದೇಶಕ್ಕೆ ಸ್ಪಂದಿಸೋಣ ಹಾಗೂ ಸಹಕರಿಸೋಣ...