ಹೀಗೆ ನನ್ನದೂ ಒಂದು ಬ್ಲಾಗ್!
ಮಿತ್ರರೆ,
ಆಗಿಂದಾಗ್ಗೆ ಸಂಪದಕ್ಕೆ ಭೇಟಿ ಕೊಡುತ್ತಿದ್ದೆ. ಉತ್ತಮವಾದ ಬರಹಗಳು ಬರುತ್ತಿವೆ. ಇನ್ನಷ್ಟು ಬರಲಿ. ಕಂಪ್ಯೂಟರ್ ಮೇಲೆ ಕನ್ನಡ ಇನ್ನೂ ಹೆಚ್ಚಿಗೆ ನಲಿದಾಡಲಿ ಎಂಬ ಆಸೆ ನನ್ನದು. ಅದರ ಜೊತೆ, ನನಗೆ ಆತ್ಮೀಯವಾಗುವ ಕೆಲವು ವಿಷಯಗಳ ಮೇಲೆ ಕನ್ನಡದಲ್ಲಿ ಬರೆಯಲು ಇದಕ್ಕಿಂತ ಒಳ್ಳೆಯ ಜಾಗ ಎಲ್ಲಿ ದೊರೆಯುತ್ತದೆ? ಹಾಗಾಗಿ ಬ್ಲಾಗ್ ಮಂಡಲಕ್ಕೆ ನಾನೂ ಅಧಿಕೃತವಾಗಿ ಕಾಲಿಟ್ಟಿದ್ದೇನೆ.
ನೀರಿನಲ್ಲಿ ಇಳಿದವನಿಗೆ ಚಳಿಯೇನು? ಮಳೆಯೇನು? ಆಗಿಂದಾಗ್ಗೆ ಬರೆಯಲು ಕಾಲ ಕೂಡಿಬರುತ್ತದೆಂಬ ಆಶಯವಂತೂ ಇದೆ. ನೋಡೋಣ!
-ಹಂಸಾನಂದಿ
Rating