ಹೀಗೇ ಸುಮ್ಮನೆ . .

ಹೀಗೇ ಸುಮ್ಮನೆ . .

ಈ ಹೊತ್ತಿಗೆ ನಾನು ಸಂಪದ ಸದಸ್ಯನಾಗಿ ೨ ವರ್ಷ ೨ ಗಂಟೆಗಳಾದವು. 

ಈ ಕಟ್ಟೆಯಲ್ಲಿ ಮಾಹಿತಿಗಳ ಆದಾನ ಪ್ರದಾನಗಳ ಪ್ರಕ್ರಿಯೆಯಲ್ಲಿ ಆಗಾಗ್ಗೆ ತೊಡಗಿಸಿಕೊಂಡಿದ್ದೇನೆ.

ಜಾಲಾಡುವುದಕ್ಕೆ ಅನುಕೂಲವಿಲ್ಲದೆಡೆಗಳಲ್ಲಿನ ವಾಸ್ತವ್ಯ ಹಾಗೂ ಅನುಕೂಲವಿದ್ದರೂ ಟೈಮೂ ಪುರುಸೊತ್ತೂ ಇಲ್ಲದ ಅನಿವಾರ್ಯತೆಯನ್ನು ಹೊರತುಪಡಿಸಿದರೆ ನಾನು ಜಾಲಾಡುವ ಕನ್ನಡ ಸೈಟುಗಳಲ್ಲಿ ಸಂಪದವೂ ಒಂದು.

ಒಮ್ಮೊಮ್ಮೆಯಂತೂ ಯಾಕಾದರೂ ಈ ಕೊಚ್ಚೆಯಲ್ಲಿ ಕಾಲಿಟ್ಟೆನೋ ಅನ್ನಿಸಿದ್ದೂ ಇದೆ.

ಆದರೆ ಕೆಲವು ಸಜ್ಜನರು ಒಳ್ಳೊಳ್ಳೇ ಚರ್ಚೆಗಳಲ್ಲಿ ಪಾಲ್ಗೊಳ್ಳುವುದೇ, ’ಕೆಲವಂ ಸಜ್ಜನ ಸಂಗದಿಂದಲರಿಯಲ್ . .’ ಎಂಬಂತೆ ಸಮಾಧಾನ ತರುವ ಸಂಗತಿ.

 

ಪ್ರೀತಿಯಿಂದ

ಸಿ ಮರಿಜೋಸೆಫ್ 

Rating
No votes yet

Comments