ಹೀಗೊಂದು ಜಾಹೀರಾತು
ಚಿತ್ರ ದಲ್ಲಿರುವವನ ತಲೆ ಕೂದಲು, ಆ ದಾಡಿ, ಅವನ ಅವತಾರ ನೋಡಿದರೆ ತಿನ್ನುವ ಚಪಲ ಬಿಡಿ ವಾಕರಿಕೆ ಶುರುವಾಗುತ್ತದೆ.
western bakeries ”lusine” ಬ್ರಾಂಡ್ ಅಡಿಯಲ್ಲಿ ಸ್ವಾದಿಷ್ಟಕರವಾದ ತಿನಿಸುಗಳನ್ನು ಸೊಗಸಾಗಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡುತ್ತದೆ. ಸೌದಿಯಲ್ಲಿರುವ ಅತೀ ದೊಡ್ಡ ಏಕೀಕೃತ ಡಯರಿ ಫಾರ್ಮ್ ಗಳಲ್ಲಿ ಒಂದಾದ ”ಅಲ್-ಮರೈ” ಒಡೆತನದ ಈ ಕೇಕ್ ಕಂಪೆನಿ ಜಾಹೀರಾತು ವಿಭಾಗದಲ್ಲಿ ಎಂಥ ಹೆಡ್ಡ ರನ್ನು ಕೆಲಸಕ್ಕಿಟ್ಟುಗೊಂಡಿದ್ದಾರೆಂದು ತಿಳಿಯಲಿ ಎಂದು ಕಂಪೆನಿಗೆ ಫೋನಾಯಿಸಿದೆ. ಗ್ರಾಹಕ ಸಂಪರ್ಕ ವಿಭಾಗದಿಂದ ಒಬ್ಬ ತರುಣಿ ಉತ್ತರಿಸಿದಳು. ಸ್ವರಮಾಧುರ್ಯ ಕೇಳಿ ಪುಳಕವಾಗಿ ನನ್ನನ್ನು ಬಾಧಿಸಿದ ವಿಷಯ ಹೇಳಿದೆ. ಈ ಜಾಹೀರಾತು sick looking, ಅಷ್ಟೇ ಅಲ್ಲ ಇದನ್ನು ನೋಡಿದ ಯಾವನೂ ನಿಮ್ಮ ಕೇಕ್ ತಿನ್ನಲಿಕ್ಕಿಲ್ಲ, ನೀನು ಮಹಿಳೆ ಆದ್ದರಿಂದ ಆ ಚಿತ್ರ ನಿಜಕ್ಕೂ ಹೇಗೆ ಕಾಣುತ್ತಿದೆ ಎಂದು ಹೇಳಲು ಆಗುತ್ತಿಲ್ಲ, ಎಂದು ಹೇಳಿದಾಗ ಅತ್ಯಂತ ಗಮನ ಕೊಟ್ಟು ಆಲಿಸಿದ ಲಲನಾ ಮಣಿ ತನಗೂ ಆ ಜಾಹೀರಾತು ಅಷ್ಟು ಚೆನ್ನಾಗಿ ಕಾಣಲಿಲ್ಲ, ಆದರೆ ನೌಕರಳಾಗಿ ನಾನೇನೂ ಹೇಳುವಂತಿಲ್ಲವಲ್ಲ, ನಿಮ್ಮ ದೂರನ್ನು ನಾನು ಮುಖ್ಯಸ್ಥರಿಗೆ ತಲುಪಿಸುತ್ತೇನೆ ಎಂದು ನನ್ನ ಹೆಸರು, ಮೊಬೈಲ್ ನಂಬರ್ ತೆಗೆದುಕೊಂಡಳು. ಸುಂದರ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಿದ್ದ ಆಕೆಯನ್ನು ಕೇಳಿದೆ ಯಾವ ದೇಶದವಳೆಂದು. ಹೇಳಿಯೇ ಬಿಟ್ಟಳು, ನಮ್ಮ ಪರಮ ಮಿತ್ರ, ಆಪತ್ಕಾಲವನ್ನು ಆಗಾಗ ನಮ್ಮ ಹೊಸ್ತಿಲಿಗೆ ತಂದು ನಿಲ್ಲಿಸುವ ದೇಶದವಳು, ಪಾಕಿಸ್ತಾನ ಎಂದು.
Comments
ಉ: ಹೀಗೊಂದು ಜಾಹೀರಾತು