ಹೀಗೊಂದು ಪ್ರೇಮ ಸಲ್ಲಾಪ
ಹೀಗೊಂದು ಪ್ರೇಮ ಸಲ್ಲಾಪ
ಅವಳು : ಈ ಮಧುರ ದಿನಕ್ಕಾಗಿ ವಂದನೆಗಳು
ಇವ: ಸರಿ ಬಿಡು
ಅವಳು; ನಾನು ನಿನ್ನನ್ನೊಂದು ಪ್ರಶ್ನೆ ಕೇಳಲೇ?
ಇವ: ಧಾರಾಳವಾಗಿ
ಅವಳು : ಆದರೆ ಪ್ರಾಮಾಣಿಕವಾಗಿ ಹೇಳುತ್ತಿಯಾ, ನಾನು ನಿನ್ನನ್ನೆನಾದರು ನೋಯಿಸಿದ್ದೆನಾ?
ಅವನು: ಇಲ್ಲ
ಅವಳು: ನಿನಗೆ ನಾನು ಇಷ್ಟವೇನಾ
ಅವ: ಅಲ್ಲ
ಅವಳು: ನಿನಗೆ ನಾನು ಬೇಕಾ?
ಅವ: ಬೇಡ
ಅವಳು: ನಾನು ನಿನ್ನನ್ನು ಬಿಟ್ಟು ಹೋದರೆ ಅಳುತ್ತಿಯಾ?
ಅವ: ಇಲ್ಲ
ಅವಳು: ನನಗಾಗಿಯೇ ಬದುಕುತ್ತಿಯಾ
ಅವ: ಇಲ್ಲ
ನನಗಾಗಿ ಏನು ಬೇಕಾದರೂ ಮಾಡುತ್ತಿಯಾ?
ಅವ : ಇಲ್ಲ
ನನ್ನನ್ನು ಆಯ್ಕೆ ಮಾಡುತ್ತಿಯಾ ಅಥವಾ ನಿನ್ನ ಜೀವನವನ್ನಾ?
ಅವ: ನನ್ನ ಜೀವನವನ್ನು
ಈ ಉತ್ತರವನ್ನು ಕೇಳಿದ ಆಕೆ ಹತಾಶೆಯಿಂದ ಆತನನ್ನೇ ಬಿಟ್ಟು ಓಡಿದಳು
.
.
.
.
.
.
.
.
.
ಅವ ಅವಳ ಹಿಂದೆಯೇ ಓಡಿ ಅವಳನ್ನು ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು ಹೇಳಿದ
'ನೀನು ನನ್ನ ಮನಸ್ಸನ್ನು ಎಂದು ಘಾಸಿ ಮಾಡಿಲ್ಲ ಯಾಕೆಂದರೆ ನೀನು ನನ್ನ ಮನಸ್ಸಲ್ಲೇ ಇದ್ದೆ
ನಿನ್ನನ್ನು ನಾನು ಇಷ್ಟ ಪಟ್ಟಿಲ್ಲ ಏಕೆಂದರೆ ನಾನು ನಿನ್ನನ್ನೇ ಪ್ರಿತಿಸುತ್ತಿದ್ದೇನೆ
ನಿನ್ನನ್ನು ನಾನು ಬಯಸುತ್ತಿಲ್ಲ ಯಾಕೆಂದರೆ ನೀನೆ ನನ್ನ ಅಗತ್ಯ
ನಾನು ನೀನು ನನ್ನನ್ನು ಬಿಟ್ಟು ಹೋದರೆ ಅಳುವುದಿಲ್ಲ ಏಕೆಂದರೆ
ನಾನಾಗ ಬದುಕಿಯೇ ಇರಲ್ಲ '
'ನಾನು ನಿನಗಾಗಿ ಬದುಕುವುದಿಲ್ಲ ಏಕೆಂದರೆ ನಾನು ನಿನಗಾಗೇ ಸಾಯುತ್ತಿದ್ದೇನೆ
ನಿನಗಾಗಿ ನಾನು ಏನೂ ಮಾಡಲು ಬಯಸುವುದಿಲ್ಲ ಏಕೆಂದರೆ ನಾನು ಮಾಡುವುದೆಲ್ಲಾ ನಿನಗಾಗೇ
ನನ್ನ ಜೀವನವನ್ನು ಆಯ್ಕೆ ಯಾಕೆ ಮಾಡಿಕೊಂಡೆ ಎಂದರೆ
ನೀನೆ ನನ್ನ ಜೀವನ'