ಹೀಗೊಂದು ಸಂಗೀತ ಸಂಜೆ......
ನಿನ್ನೆ, ಭಾನುವಾರದ ಸಂಜೆ ಒಬ್ಬನೇ ಕೋಣೆಯಲ್ಲಿ ಕುಳಿತಿದ್ದೆ. ಮನಸ್ಸಿಗೆ ಬಹಳ ಬೇಜಾರಾಗ್ತಿತ್ತು. ಏನು ಮಾಡೋದು ಅಂತ ಯೋಚಿಸ್ತಿರೋವಾಗ, ಯಾಕೆ ಸಂಗೀತ ಕೇಳಬಾರದು ಅಂತ ಮನಸ್ಸಿಗೆ ಹೊಳೀತು. ನೋಡೋಣ ಅಂತ, "ಬಾಂಬೆ ಜಯಶ್ರೀ" ಅವರ "confluence of elements " ಆಲ್ಬಮ್ ಕೇಳ್ತಾ ಕುಳಿತೆ. ಎಂಥಾ ಅದ್ಭುತ ಅಂತೀರಾ!! ನಿಜಕ್ಕೂ ಮನಸಿಗೆ ತುಂಬಾ ಸಮಾಧಾನ ಸಿಕ್ತು. ಈಗ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ಹಾಡುಗಳನ್ನ ಕೇಳಬೇಕು ಅಂತ ಅನ್ಸುತ್ತೆ. ಏನೋ ಒಂಥರಾ ಮನಸ್ಸಿಗೆ ಹಿತವಾಗಿರುತ್ತೆ. ನಿನ್ನೆಯ ಸಂಜೆ ನಿಜಕ್ಕೂ ಸಂಗೀತಮಯವಾಗಿತ್ತು. ಈ ಹಿಂದೆ ಮ್ಯೂಸಿಕ್ ಥೆರಪಿ ಬಗ್ಗೆ ಕೇಳಿದ್ದೆ, ಆದರೆ ಅದರ ಅನುಭವ ಆಗಿರಲಿಲ್ಲ. ನಿನ್ನೆ ಆ ಹಾಡುಗಳನ್ನ ಕೇಳಿದ ಮೇಲೆ ನಿಜಕ್ಕೂ ಮ್ಯೂಸಿಕ್ ಥೆರಪಿ ಒಂದು ಅದ್ಭುತವನ್ನ ಸೃಷ್ಟಿಸಬಲ್ಲದು ಅನ್ನೋ ಅನುಭವವಾಯ್ತು. ಈ ಆಲ್ಬಮ್ ಬಹಳ ಅದ್ಭುತವಾಗಿದೆ. ಈ ಆಲ್ಬಮ್ ನಲ್ಲಿ, ೧.ಮೋಕ್ಷಮುಗಲದ, ೨.ಜಗದೋದ್ಧಾರನ, ೩. ವೈಷ್ಣವ ಜನತೋ, ೪.ಶ್ರೀ ರಾಮಚಂದ್ರ ಕ್ರುಪಾಳೋ, ೫. ವೈಷ್ಣವ ಜನತೋ instrumental ಮತ್ತು ಇನ್ನೊಂದು ತಮಿಳು ಹಾಡಿದೆ. ಆದರೆ, ಆ ಹಾಡುಗಳು ಸ್ಫುರಿಸುವ ಆ ಶಕ್ತಿ ಬಹಳ ಉತ್ಕೃಷ್ಟವಾದದ್ದು. ಧನಾತ್ಮಕ ಅಂಶಗಳ ಸಾರದಂತೆ ಈ ಆಲ್ಬಮ್ ಅನಿಸುತ್ತದೆ.
ಈ ಥೆರಪಿಯ ಬಳಿಕ ಮನಸು ಬಹಳ ಹಗುರಾದಂತೆ ಅನಿಸಿತು. ನಂತರ ಒಂದು ಸಣ್ಣ walk ನನ್ನ ಮೂಡನ್ನು ಬದಲಾಯಿಸಿತು. ನಿಜಕ್ಕೂ ಸಂಗೀತಕ್ಕೆ ಈ ಪರಿಯ ಶಕ್ತಿ ಇದೆ ಎಂದು ನನಗೆ ಅನಿಸಿದ್ದು ನಿನ್ನೆಯೇ. ಇದಕ್ಕೂ ಮುಂಚೆ ಮಾಮೂಲಿ ಹಾಡುಗಳನ್ನು ಕೇಳುತ್ತಿದ್ದ ನನಗೆ ನಿನ್ನೆಯ ಈ ಥೆರಪಿ ಬಹಳ ರೋಮಾಂಚಕ ಅನುಭವವನ್ನು ನೀಡಿತು. ಹಾಗೆಯೇ "ರೋಣು ಮಜುಂದಾರ್" ಅವರ "Dancing Daffodils " ಮನಸ್ಸಿಗೆ ಬಹಳ ಚೇತೋಹಾರಿ ಅನಿಸಿದವು. ಈ ಹಾಡುಗಳನ್ನು ನೀಡಿದ ನನ್ನ ಗೆಳೆಯ ಶ್ರೀಕಾಂತ್ ನನ್ನು ಬಹಳವಾಗಿ ಮನಸಿನಲ್ಲೇ ಅಭಿನಂದಿಸಿದೆ. ಈ ಹಿಂದೆ, ತಾನಸೇನ ನ ಸಂಗೀತದ ಶಕ್ತಿಯ ಬಗೆಗೆ, ಶ್ರೀಯುತ ಸೂರ್ಯನಾರಾಯಣ ಅವರ ಸಂಗೀತದ ಶಕ್ತಿಯ ಬಗೆಗೆ ಕೇಳಿದ್ದ ನನಗೆ, ಈ ಅನುಭವದ ನಂತರ ಸಂಗೀತದ ಶಕ್ತಿಯ ಬಗೆಗೆ ನಿಜವಾದ ಆಸ್ಥೆ ಮೂಡಿತು.
Rating
Comments
ಉ: ಹೀಗೊಂದು ಸಂಗೀತ ಸಂಜೆ......
In reply to ಉ: ಹೀಗೊಂದು ಸಂಗೀತ ಸಂಜೆ...... by manjunathams
ಉ: ಹೀಗೊಂದು ಸಂಗೀತ ಸಂಜೆ......