ಹೀಗೊಂದು ಸಂಭಾಷಣೆ

ಹೀಗೊಂದು ಸಂಭಾಷಣೆ

ಜಾತ್ಯಾತೀತ ಮಿತ್ರ ಮತ್ತು ನನ್ನ ಕೇಸರಿ ನಾಲಗೆ

ಇತ್ತೀಚೆಗೆ ನಮ್ಮ ನಗರದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ನನ್ನ ಹಳೆಯ ಜಾತ್ಯಾತೀತ ಮಿತ್ರರೊಬ್ಬರು ಸಿಕ್ಕರು.ನನ್ನನ್ನು ನೋಡಿದವರೆ, 'ಹೇಗಿದ್ದೀರಾ ಸುನಿಲ್ ಜಿ..?'ಎಂದು ಕೇಳಿದರು.ನಾನು ಮಾತಿಗೆ,ಮೋದಿಯವರು ಪ್ರಧಾನಿಯಾಗಿದ್ದಾರಲ್ಲ ಹಾಗಾಗಿ ಈಗ ಮೊದಲಿಗಿಂತ ಚೆನ್ನಾಗಿಯೇ ಇದ್ದೀನಿ ಎಂದೆ.ನನ್ನ ಅ ರೀತಿಯ ಅನಿರೀಕ್ಷಿತ ಪ್ರತಿಕ್ರಿಯೆ ಕೇಳಿದಾಕ್ಷಣ ಅವರ ಜಾತ್ಯಾತೀತ ಮನಸ್ಸು ಜಾಗೃತಗೊಂಡು,ಓಹ್..! ಆಗ,ಅಂದಹಾಗೆ ನಿಮಗೆ ಈಗ ಒಳ್ಳೆಯ ದಿನಗಳ ಗಾಳಿ ಬೀಸುತ್ತಿದೆಯಲ್ಲವೇ..ಎಂದು ಕೊಂಕು ತೆಗೆದರು.ನಾನು,'ಯಾಕೆ ನಿಮಗೆ ಆ ಗಾಳಿ ಸೋಕಿಲ್ಲವೆ'ಎಂದು ಪ್ರಶ್ನೆ ಮಾಡಿದೆ.ಅದಕ್ಕವರು, ಇಲ್ಲಾ..ನಮಗೆ ಇನ್ನು ಅ ಗಾಳಿಯ ಅನುಭವವಾಗಿಲ್ಲ ಅಂದರು.ನಾನು,ಬಹುಶಃ ನೀವು ಪಾತಾಳದಲ್ಲಿರಬೇಕು ಅಲ್ಲಿದ್ದವರಿಗೆಲ್ಲ ಈ ಗಾಳಿಯ ಅನುಭವವಾಗಲ್ಲ ಎಂದೆ. ಅದಕ್ಕವರು ನಿಮ್ಮ ನಾಯಕರು ಆಕಾಶದಿಂದ ದೇಶವಾಳಿದರೆ ಅಲ್ಲಿಗೆಲ್ಲ ಗಾಳಿ ಬೀಸಲು ಹೇಗೆ ಸಾಧ್ಯ ಎಂದು ಮಾರುತ್ತರ ಕೊಟ್ಟರು.ಆಕಾಶದಿಂದ ಆಳೋದು ದೇವರು..ಅಂತವರ ಆಡಳಿತ ಸರ್ವವ್ಯಾಪಿಯಾಗಿರುತ್ತದೆ ಎಂದೆ.ಓಹ್...! ಹೌದಲ್ವ..ಮೋದಿ ನಿಮಗೆ ದೇವರಲ್ಲವೇ...ನೀವು ಅವರ ಭಕ್ತರಲ್ಲವೇ..ಅವರು ನಿಮಗೆ ದೇವರಾಗಿರಬಹುದು ನೀವು ಅವರ ಭಕ್ತರಾಗಿರಬಹುದು ಆದರೆ ನಾವು ಯಾವ ಕಾರಣಕ್ಕು ಅವರ ಭಕ್ತರಾಗಲಾರೆವು ಎಂದು ಏರಿದ ಧ್ವನಿಯಲ್ಲಿ ಹೇಳಿದರು. ನಾನು,ಹೌದಾ. ..ಅವರ ಭಕ್ತರಾಗಲು ಯೋಗ್ಯತೆ ಇರಬೇಕು ಎಂದೆ.ಈ ಉತ್ತರ ಕೇಳಿದ ಕೂಡಲೆ ಸ್ವಲ್ಪ ವಿಚಲಿತರಾದಂತೆ ಕಂಡ ಅವರು,ನಿಮ್ಮದು ಕೇಸರಿ ನಾಲಗೆ ಅದು ಹೇಗೆ ಬೇಕಾದರು ಹೊರಳುತ್ತದೆ ಎಂದರು.ನಾನು,ಏನು ಮಾಡೋದು ನಿಮ್ಮ ಜಾತ್ಯಾತೀತ ಕಣ್ಣಿಗೆ ಕಾಣೋದೆಲ್ಲ ಕೇಸರಿನೇ ಎಂದೆ. .ಅಷ್ಟೊತ್ತಿಗೆ ಮಳೆರಾಯನ ಆಗಮನವಾಗಿ ನಮ್ಮ ಸಂಭಾಷಣೆಗೆ ತಣ್ಣೀರು ಬಿತ್ತು. ....

-@ಯೆಸ್ಕೆ

Rating
No votes yet