ಹುಂಡಿಯನು ದಾನ ಮಾಡುತ್ತಾನೆ ಆಗಲೆಂದು ಪುಣ್ಯವಂತ!

ಹುಂಡಿಯನು ದಾನ ಮಾಡುತ್ತಾನೆ ಆಗಲೆಂದು ಪುಣ್ಯವಂತ!

ಹುಂಡಿಯನು ತುಂಬುತ್ತಾರೆ ಜನ ಖುಷಿಯಾಗಲೆಂದು ಭಗವಂತ
ಅದನ್ನೇ ದಾನ ಮಾಡುತ್ತಾನೆ ಸಜ್ಜನ ತಾ ಆಗಲೆಂದು ಪುಣ್ಯವಂತ

ಬೆವರೇ ಸುರಿಸದೇ ತಾ ತುಂಬಿಕೊಳ್ಳುತಿರುವ ತನ್ನ ತಿಜೋರಿಯನು
ಅದರಲ್ಲತ್ಯಲ್ಪಂಶ ದಾನ ಮಾಡಿ ಪಡೆಯುತ್ತಾನೆ ಜನಮೆಚ್ಚುಗೆಯನು

ದೇವರ ಹೆಸರಿನಲ್ಲಿ ಪಡೆದು ಬಡ ಜನರಿಂದ ದಾನ ದೇಣಿಗೆಗಳನು
ತನ್ನ ಹೆಸರಿನಲಿ ಅದ ದಾನ ಮಾಡಿ ಪಡೆಯುತ್ತಾನೆ ಪ್ರಶಸ್ತಿಗಳನು

ಯಾವ ದೇವರಾದರೇನಂತೆ ನಮ್ಮ ತಿಜೋರಿ ತುಂಬಿಕೊಳ್ಳುವುದಕೆ
ಮನದೊಳಗೆ ಒಬ್ಬರಾದರೆ, ಇನ್ನೊಬ್ಬ ದೇವರು ತೋರಿಸಲೀ ಜಗಕೆ

ತಾನು ನಂಬಿದ ದೇವರು ಸಮಾಜದಿಂದಲೇ ದೂರವಾಗಿದ್ದರೇನಂತೆ
ಜನ ನಂಬುವ ದೇವರಿಂದ ತಿಜೋರಿಯ ತಾ ತುಂಬಿಕೊಳ್ಳಬಹುದಂತೆ

ಜನರನ್ನು ಭಯಭೀತರನ್ನಾಗಿಸಿ ತನ್ನತ್ತ ಸೆಳೆದುಕೊಳ್ಳಲು ಜಾಲ ಹರಡಿ
ನಿಶ್ಚಿಂತೆಯಿಂದ ಲೀಲಾಜಾಲವಾಗಿ ತಮ್ಮ ಜೀವನ ನಡೆಸುತ್ತಾರೆ ನೋಡಿ
**********************************

Rating
No votes yet