ಹುಡುಗಿಯರೇ ಹುಡುಗರನ್ನು ಪಟಾಯಿಸಬೇಕೆ? ಇಲ್ಲಿ ನೋಡಿ

ಹುಡುಗಿಯರೇ ಹುಡುಗರನ್ನು ಪಟಾಯಿಸಬೇಕೆ? ಇಲ್ಲಿ ನೋಡಿ

ಯಾವತ್ತೋ ಪಲ್ಲವಿ ಎನ್ನುವರೊಬ್ಬರು ಹುಡುಗರ ಗಮನ ಸೆಳೆಯಲು ಏನು ಮಾಡಬೇಕು ಎಂದು ಕೇಳಿದ್ದುದನ್ನು ಇಂದು ಓದಿದೆ
ಅವರಿಗೆ ಹಾಗು ಅವರಂತಹ ಮತ್ತೂ ಹಲವರಿಗಾಗಿ
ಯಾವ ಹುಡುಗನನ್ನು ಪಟಾಯಿಸಬೇಕೋ ಅವನ ದಿನಚರಿ ಗಮನಿಸಿ ನಂತರ ಇವುಗಳನ್ನು ಜೊತೆಗೆ (ಅವನನ್ನೂ)ಫಾಲೋ ಮಾಡಿ
೧)ಮೊದಲು ಹುಡುಗನ ಗಮನ ನಿಮ್ಮ ಮೇಲೆ ಹರಿಯಬೇಕಲ್ಲವೇ ? : ಅದಕ್ಕಾಗಿ ಅವನು ನಿಂತಿರುವ ಜಾಗಕ್ಕೆ ತುಸು ದೂರದಲ್ಲಿ ನಿಂತು ಮೊಬೈಲ್
(ಹೌದು ಕೊಳ್ಲಲೇ ಬೇಕು ಇಲ್ಲದಿದ್ದರೆ)ತೆಗೆದುಕೊಂಡು ನಿಮ್ಮಗೆಳತಿಯೊಂದಿಗೆ ಮಾತಾನಾಡುವಂತೆ ಜೋರು ದನಿಯಲ್ಲಿ ಹೀಗೆ ಮಾತನಾಡಿ"ಹೌದೇ ಅವನೂ
ಇವತ್ತೂ ಕಾಲೇಜಿನ ಹತ್ರ ಬಂದಿದ್ದ . ಇವತ್ತೂ ಅದೇ ಮಾತು. . ಅದ್ಯಾಕೆ ಹೀಗೆ ಬೆನ್ನ ಹಿಂದೆ ಬೀಳ್ತಾರೆ ಈ ಹುಡ್ಗರು ನಮ್ಮಂತ ಹುಡುಗೀರಿಗೆ ತೊಂದ್ರೆ ಕೊಡ್ತಾರೋ
ನಂಗೆ ಗೊತ್ತಿಲ್ಲ." ಇನ್ನೂ ಯಾವ ಯಾವ ಸುಳ್ಳು ಬಾಯಿಗೆ ಬರುತ್ತೋ ಅದೆಲ್ಲಾ ಹೇಳಿ. ಹುಡುಗ ನಿಮ್ಮ ಕಡೆ ಒಂದುಬಾರಿಯಾದರೂ ನೋಡೆ ನೋಡುತ್ತಾನೆ :)
೨) ಹುಡುಗ ಯಾವ ಕಲರ್ ಡ್ರೆಸ್ ಹಾಕಿಕೊಂಡಿದ್ದಾನೆ ಎಂದು ಗಮನಿಸಿ.ಅವನಿಗೆ ಕೇಳುವಂತೆ ನಿಮ್ಮ ಗೆಳತಿಯ ಬಳಿ ಅದೇ ಕಲರ್ ಡ್ರೆಸ್ ಹಾಕಿಕೊಂಡು ಬರೋಣ
ಎಂದುಕೊಂಡಿದ್ದೆ ಎನ್ನಿ. ಹುಡುಗ ಇಂಪ್ರೆಸ್ ಆಗ್ತ್ರಾನೆ
೩) ಬಸ್ನಲ್ಲಿ ಹೋಗುವರಾದರೆ: ಹುಡುಗ ಯಾವ ಬಸ್ಸಿಗೆ ಹೋಗುತ್ತಾನೆ ಎಂಬುದನ್ನ ಗಮನಿಸಿ. ಅವನ ಬಸ್ ಬರುವವರೆಗೂ ನಿಮ್ಮ ಬಸ ಬಂದರೂ ಹತ್ತಬೇಡಿ.
ಹುಡುಗ ಖಂಡಿತಾ ನಿಮ್ಮನ್ನು ನೋಡೇ ನೋಡುತ್ತಾನೆ. ಅವನ ಬಸ್ ಬಂತು ಎಂದಿಟ್ಟುಕೊಳ್ಳಿ . ಆತ ನಿಮ್ಮ ಕಡೆಗೆ ಬರುತ್ತೀರೇನೋ ಎಂದು ನೋಡುತ್ತಾನೆ.
ನೀವು ಅದೇ ಬಸ್ ಹತ್ತುವರಂತೆ ಹೋಗಿ ಹಿಂದೆ ಇನ್ನೊಂದು ಬಸ್ ಇದ್ದರೆ ಆ ಬಸ್ ಹತ್ತಿ ಬಸ್ ಇಲ್ಲವಾದಲ್ಲಿ ಬೇರೊಂದು ಬಸ್ಸಿಗೆ ಕಾಯುತ್ತಿರುವರಂತೆ ನಟಿಸಿ ಅಲ್ಲೇ
ನಿಲ್ಲಿ. ಅಲ್ಲಿಗೆ ಹುಡುಗ ನಿಮಗಾಗಿ ಕುತೂಹಲ ಮೂಡುತ್ತದೆ.
೪) ಸಪ್ಪೋಸ್ ನೀವು ಟೂ ವೀಲರ್ಸ್‌ನಲ್ಲಿ ಹೋಗುವರಾದರೆ, ಹುಡುಗ ಬಸ್ ಸ್ಟಾಂಡನ್ಲ್ಲಿ ಕಾಯುವವನಾದರೆ ಡ್ರಾಪ್ ಆಫರ್ ಮಾಡಿ ಮುಖ ಕೆಡಿಸಿಕೊಳ್ಲಬೇಡಿ.
ಅಲ್ಲೆ ನಿಂತು ಯಾರಿಗೋ ಕಾಯುವವರಂತೆ ಸುಮ್ಮನೆ ನಿಲ್ಲಿ ಹುಡುಗನ ಬಸ್ ಬರುವವರೆಗೂ. ಆಗಾಗ ಮೊಬೈಲ್‌ ಅನ್ನು ಕಿವಿಗೆ ಹಿಡಿಯುತ್ತಿರಿ
ಬಸ್ ಹೋದ ಮೇಲೆ ಆ ಬಸ್ಸಿನ ಹಿಂದೆ ಖಂಡಿತಾ ಹೋಗಬೇಡಿ. ಅವನು ಹಾಗಂದುಕೋತಾನೆ
೫)ಸರಿ ಹುಡುಗನಲ್ಲಿ ಕುತೂಹಲ ಮೂಡಿಸಿದ್ದಾಯ್ತು . ನಂತರ ಅವನನ್ನು ಮಾತಾಡಿಸಬೇಕು . ಏನ್ಮಾಡೋದು? ಸಾಧ್ಯವಿದರೆ ಹುಡುಗನ ಬಯೋಡಾಟ ಕಲೆಕ್ಟ್
ಮಾಡಿ ಇಲ್ಲವಾದರೆ ಆಗಾಗ ಮುಖಾ ಮುಖಿಯಾಗಿ ನೋಡುತ್ತಿರಿ. ನಿಮ್ಮ ಕಣ್ಣಲ್ಲಿ ಆತನ ಬಗ್ಗೆ ಪರಿಚಯದ ಛಾಯೆ ಕಾಣಬೇಕು.
ಆಗ ಹುಡುಗನ ಮನದಲ್ಲೂ ಅದೇ ಭಾವನೆ ಮೂಡುತ್ತದೆ.
೬)ಇದೆಲ್ಲಾ ಯಾಕೆ ಡೈರೆಕ್ಟ್ ಆಗಿ ಹೋಗಿ ಮಾತಾಡಿಸಿದರೆ ಸರಿ ಅಲ್ವಾ ಅನ್ನಬೇಡಿ, ಹುಡುಗರಿಗೆ ಹತ್ತಿರ ಬಂದು ಮೇಲೆ ಬೀಳುವ ಹುಡುಗಿಯರಿಗಿಂತ,
ದೂರವಿರುವ ಹುಡುಗಿಯರು ಪ್ರಿಯರಾಗುತ್ತಾರೆ. ನಿಮ್ಮ ಬಗ್ಗೆ ಒಳ್ಳೇಯ ಭಾವನೆ ಮೊದಲು ಮೂಡಬೇಕು. ಇಲ್ಲವಾದಲ್ಲಿ ನೀವು ಗರ್ಲ್ ಫ್ರೆಂಡ್ ಆಗಿಯೇ ಉಳಿಯುವ
ಚಾನ್ಸ್ ಜಾಸ್ತಿ.
(ಮುಂದುವರೆಯುತ್ತದೆ)

Rating
No votes yet

Comments