ಹುಡುಗಿಯರೊಂದಿಗೆ ಪ್ರಯಾಣ!!!

ಹುಡುಗಿಯರೊಂದಿಗೆ ಪ್ರಯಾಣ!!!

ಸಖೀ,
ತುಂಬಾ "ರಷ್" ಇರುವ
ಬಸ್ಸನ್ನೇ ಹತ್ತಿ, ಅಥವಾ,
ಸೀಟಿದ್ದ ರೂ ಕುಳಿತುಕೊಳ್ಳದೇ,
ನನ್ನಂತ ನವ ಯುವಕರ,
ಹಿಂಬದಿಯಲ್ಲೋ,
ಬಲಬದಿಯಲ್ಲೋ,
ಎಡಬದಿಯಲ್ಲೋ,
ನಿಂತು, ತಮ್ಮ ಮೈ ಮೇಲೆ
ಬಳಿದುಕೊಂಡಿರುವ
ಗಬ್ಬು ಸೆಂಟುಗಳಿಂದ,
ನಮ್ಮ ಉಸಿರು ಕಟ್ಟಿಸಿ,
ತಮ್ಮ ಮೈಯನ್ನು
ಹತ್ತಿರಕ್ಕೆ ತಂದು,
ನಮಗೆ ಒತ್ತಿ ನಿಂತು,
ಶಾಖ ನೀಡುವ,
ಅಥವಾ ಶಾಖ ಕೊಳ್ಳುವ,
ದುರುದ್ದೇಶದಿಂದ,
ಉನ್ಮತ್ತರಂತೆ,
ಮೈಮೇಲೆ ಬೀಳುವ,
ಮತ್ತೆ ನನ್ನಂತಹ
ಸೀದಾ ಆದ್ಮಿ, ಉಸಿರು ಕಟ್ಟಿ
ಸಾಯುವ ಸ್ಥಿತಿಯಲ್ಲಿ,
ಏನಾದರೂ ಹೇಳಲು
ಬಾಯಿ ಬಿಡುವ ಮೊದಲೇ,
"ಹೆಲ್ಪ್" - ಹೆಲ್ಪ್" ಅಂತ ಬೊಬ್ಬಿಟ್ಟು,
ಉಲ್ಟಾ ನಮ್ಮನ್ನೇ ಹಿಡಿಸುವ,
ಈಗಿನ ಹುಡುಗಿಯರಿಂದ
ತಪ್ಪಿಸಿಕೊಂಡು (ಅದೆಲ್ಲಿ ಸಾಧ್ಯ?),
ಪ್ರಯಾಣ ಮುಗಿಸಬೇಕಾದರೆ,
ಸಾಕಪ್ಪಾ ಸಾಕು ಅನ್ನಿಸಿರುತ್ತೆ!
*-*-*-*--*-*-*

೨೭ ವರುಷಗಳ ಹಿಂದೆ, ೦೨ ಆಗಷ್ಟ್ ೧೯೮೨ ರಂದು, ದೆಹಲಿಯ ನಗರ ಸಾರಿಗೆ ಬಸ್ಸಿನಲ್ಲಿ, ಒಂದು ಅರ್ಧ ಘಂಟೆಯ ಪಯಣ ಮುಗಿಸಿದ ನಂತರ ನಾನು ಬರೆದಿದ್ದ ಕವನ.

Rating
No votes yet

Comments