ಹುತಾತ್ಮ ಭಗತ್ ಸಿಂಗ್ ಜೀವನ ಚರಿತ್ರೆ ಆಧರಿಸಿದ ಚಲನಚಿತ್ರಗಳು -ಹೇಗಿವೆ?

ಹುತಾತ್ಮ ಭಗತ್ ಸಿಂಗ್ ಜೀವನ ಚರಿತ್ರೆ ಆಧರಿಸಿದ ಚಲನಚಿತ್ರಗಳು -ಹೇಗಿವೆ?

ಚಿತ್ರ

ಭಾರತದ ಹೆಮ್ಮೆಯ  ಪುತ್ರ- ಸ್ವಾತಂತ್ರ್ಯ ಹೋರಾಟದಲ್ಲಿ  ಯುವಕರು ಹೆಚ್ಹೆಚ್ಚು ಪಾಲ್ಗೊಳ್ಳಲು ಪ್ರೇರೇಪಿಸಿದ ಹುತಾತ್ಮ -ಧೀರ  ಭಗತ್ ಸಿಂಗ್  ಜೀವನ ಕಥೆ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಕುಟುಂಬದಲ್ಲಿ  ಹುಟ್ಟಿ ಬೆಳೆದು  ಚಿಕ್ಕಪ್ಪನ ಸಾವು-ಬ್ರಿಟಿಷರ  ದುರಾಡಳಿತ  ಕೊನೆಗಾಣಿಸಿ  ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಿಂಸಾ ಮಾರ್ಗವೇ ದಾರಿ ಎಂದು  ತೀವ್ರವಾದಿಯಾಗಿ ಚಿಕ್ಕವರಾಗಿದ್ದಾಗಲೇ  ಬ್ರಿಟಿಷರ  ನಿದ್ದೆ ಗೆಡಿಸಿದ  ವೀರ...

ಕೆಲವೇ ವರ್ಷಗಳಲ್ಲಿ  ಕೆಲವೇ  ಧಾಳಿಗಳ ಮೂಲಕ  ಬ್ರಿಟಿಷರ  ಎದೆಯಲ್ಲಿ  ಅವಲಕ್ಕಿ ಕುಟ್ಟುವ ಹಾಗೆ ಮಾಡಿದವರು. ನೇಣಿಗೆ ಏರುವಾಗಲೂ ನಗುನಗುತ್ತಲೇ  ಭಾರತಾಂಬೆಗೆ  ಜಯಕಾರ ಹಾಕುತ್ತ  ದೇಶದ  ಸ್ವಾತಂತ್ರ್ಯಕ್ಕಾಗಿ  ಸಾವಿರಾರು ಜನ ಭಗತ್ ಸಿಂಗ್ಗಳು ಜನ್ಮ ತಾಳಲಿದ್ದಾರೆ  ಎಂದು  ನೇಣು ಕುಣಿಕೆಗೆ  ತಲೆ  ಕೊಟ್ಟವರು. ತಾವ್ ಹುತಾತ್ಮರಾಗಿ  ದೇಶದ ಯುವಕರಲ್ಲಿ ಕಿಚ್ಚು ಸ್ವಾಭಿಮಾನದ ಕಿಡಿ ಎಬ್ಬಿಸಿ  ಅದರ ಕೆನ್ನಾಲಿಗೆ  ಬ್ರಿಟಿಷರಿಗೆ ಬಿಸಿ ಮುಟ್ಟಿಸುವ ಹಾಗೆ ಮಾಡಿದ ವೀರ.
23ನೆಯ ಎಳೆಯ ವಯಸ್ಸಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ  ತಮ್ಮ  ತನು ಮನ  ಧಾರೆ ಎರೆದ, ಹುತಾತ್ಮನಾದ, ಹಲವು ಯುವಕರಿಗೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ  ಪಾಲ್ಗೊಳ್ಳುವ ಹಾಗೆ ಮಾಡಿದ   ಯುವಕ.
 
ಇತ್ತೀಚಿಗೆ ಹೆಚ್ಚಿದ ಬಹುಪಾಲು ಯುವಕರ  ಅಂದಾದುಂದಿ ,ಮೋಜು, ಮಸ್ತಿ, ದುಶ್ಚಟ, ಅಂದು ನಮ್ಮವರು ಮಾಡಿದ ತ್ಯಾಗ , ಸ್ವಾತಂತ್ರ್ಯದ ಬೆಲೆ ತಿಳಿಯದೆ, ದೇಶದ ಭವಿಷ್ಯದ ಬಗ್ಗೆ  ಚಿಂತಿಸದೆ     ಅಪರಾಧಿ ಚಟುವಟಿಕೆಗಳತ್ತ ವಾಲಿದ್ದು ಇದನ್ನು ನೋಡುವ  ನೋಡುತ್ತಿರುವ ಅಂದು ದೇಶದ ಸ್ವಾತಂತ್ರ್ಯಕ್ಕಾಗಿ  ತಮ್ಮ ತನು ಮನ ಧನ ಧಾರೆ ಎರೆದು  ಸ್ವಾತಂತ್ರ್ಯ ತಂದುಕೊಟ್ಟ  ಮಹನೀಯರ  ಆತ್ಮಗಳು  ಇಂದಿನ  ಭಾರತದ ಸ್ಥಿತಿ ಕಂಡು  ಮರುಗದೆ ಇರವೇ?
 
ಹುತಾತ್ಮ ಭಗತ್ ಸಿಂಗ್  ಯುವಕರಿಗೆ ದೇಶವಾಸಿಗಳಿಗೆ ಯಾವತ್ತೂ ಸ್ಪೂರ್ತಿಯೇ. ಅವರನ್ನು  ಮತೊಬ್ಬ ಪ್ರಸಿದ್ಧ  ಹೋರಾಟಗಾರ   ಚೆಗ್ವೆರಾಗೆ  ಹೊಲಿಸುವರಾದರೂ ಅವರೇ ಬೇರೆ  ಇವರೇ ಬೇರೆ.
 
ಭಗತ್ ಸಿಂಗ್ ಅವರ  ನೆನಪು ಅಚ್ಚಳಿಯದೆ ಉಳಿಯಲು ಬೆಳೆಯಲು ಅಂದಿನ ನಮ್ ಹಿರಿಯರ  ಸ್ವಾತಂತ್ರ್ಯ ಹೋರಾಟದ  ಸನ್ನಿವೇಶಗಳನ್ನು  ಇಂದಿನವರಿಗೆ-ಮುಂದಿನವರಿಗೆ ಮುಟ್ಟಿಸಲು ಜಾಗೃತಿ ಬೆಳೆಸಲು  ಬಹುಪಾಲು ಜನ  ವಿಧ ವಿಧವಾಗಿ  ಹಲವು ರಂಗಗಳಲ್ಲಿ ಪ್ರಯತ್ನಿಸುತ್ತಿರುವ್ದು  ಗೊತ್ತಿದೆ  ಈ ನಿಟ್ಟಿನಲ್ಲಿ ಸಿನೆಮ ರಂಗ ಕೂಡಾ ಹಿಂದೆ ಬಿದ್ದಿಲ್ಲ.
 
ಅವರ ಕುರಿತು ಬಂದ ಚಿತ್ರಗಳು 
 
1.ಶಹೀದ್ -ಎ -ಅಜಾದ್-ಭಗತ್ ಸಿಂಗ್  -1954 : ಮೊಟ್ಟ  ಮೊದಲ ಭಗತ್ ಸಿಂಗ್ ಕುರಿತ ಚಿತ್ರ- ಪ್ರೇಂ ಅದೀಬ್ ನಾಯಕ-ಜಗದೀಶ್ ಗೌತಮ್ ನಿರ್ದೆಶನ- 
2.ಶಹೀದ್ ಭಗತ್ ಸಿಂಗ್ -1963  - ಶಮ್ಮಿ ಕಪೂರ್ ನಾಯಕತ್ವದಲ್ಲಿ - ಕೆ ಎನ್ ಬನ್ಸಾಲ್ ನಿರ್ದೇಶನದಲ್ಲಿ 
3. ಶಹೀದ್ -1965- ಮನೋಜ್ ಕುಮಾರ್ ನಾಯಕತ್ವದಲ್ಲಿ - ಎಸ್  ರಾಮ್ ಶರ್ಮ  ನಿರ್ದೇಶನದಲ್ಲಿ ಅತಿ ಯಶಸ್ವಿ  ಚಿತ್ರ - ಭಗತ್ ಸಿಂಗ್ ಕುರಿತ ಉತ್ತಮ ಚಿತ್ರ ಎಂಬ  ಹೆಗ್ಗಳಿಕೆ 
4.ಶಹೀದ್- ಎ- ಅಜಮ್- ಸರ್ದಾರ್ ಭಗತ್ ಸಿಂಗ್ -1974- (ಪಂಜಾಬಿಯಲ್ಲಿ ಅಮರ್ ಶಹೀದ್ ಭಗತ್ ಸಿಂಗ್)-ಸೋಮ್  ದತ್ ನಾಯಕ-ಓಂ ಬೇಡಿ ನಿರ್ದೇಶನ 
5.ಶಹೀದ್-ಎ-ಅಜಮ್ -2002- ಇಂದಿನ ಖಳ ನಟ  ಸೋನು ಸೂದ್ ನಾಯಕ   -ಸುಕುಮಾರ್ ನಾಯರ್ ನಿರ್ದೇಶನ 
6.ದ ಲೆಜೆಂಡ್ ಆಫ್ ಭಗತ್ ಸಿಂಗ್ -2002-ಅಜಯ್ ದೇವಗನ್ ನಾಯಕ-ರಾಜಕುಮಾರ್ ಸಂತೋಷಿ ನಿರ್ದೇಶನ 
7.23 ಮಾರ್ಚ್ 1931-ಶಹೀದ್ -ಬಾಬಿ ಡಿಯೋಲ್ -ಸನ್ನಿ ಡಿಯೋಲ್  ನಾಯಕತ್ವದಲ್ಲಿ -ಗುಡ್ಡು  ಧನೋವಾ ನಿರ್ದೆಶನ
8.ರಂಗ್ ದೇ ಬಸಂತಿ -2006 -ಅಮೀರ್ ಖಾನ್ ನಾಯಕತ್ವ -ಬಹು ತಾರಾಗಣ -ರಾಕೇಶ್ ಓಂಪ್ರಕಾಶ್ ಮೆಹ್ರ ನಿರ್ದೇಶನದಲ್ಲಿ  ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ಚಿತ್ರ .
 
ಇದಲ್ಲದೆ ಅನ್ಯ ಭಾಷೆಗಳಲ್ಲಿ  ಸಹಾ ಕೆಲವು ಚಿತ್ರಗಳು ಬಂದಿರುವ ಸಾಧ್ಯತೆ ಇದೆ.
ಅಥವಾ ಅವರ (ಭಗತ್ ಸಿಂಗ್)ಬಗ್ಗೆ  ಕೆಲವು ಸನ್ನಿವೇಶಗಳಲ್ಲಿ  ತೋರಿಸಿರುವ  ಚಿತ್ರಗಳೂ ಇವೆ.
ಅಲ್ಲದೆ ಅವರ ಬಗ್ಗೆ ಬಂದ ಬರೆದ ನಾಟಕ -ಹಾಡುಗಳು-ಅವರ ಛಾಯ ಚಿತ್ರಗಳು (ಅದರಲ್ಲೂ ಮೀಸೆ  ತಿರುವುತ್ತಿರುವ) ಅಸಂಖ್ಯಾತ.
ಯಾವತ್ತೂ ನಾವೆಂದೂ ಮರೆಯಬಾರದ -ಸದಾ  ಸ್ಮರಿಸುವ  ಹುತಾತ್ಮ  ಭಗತ್ ಸಿಂಗ್  ಬಗ್ಗೆ ಬಂದ  ಚಿತ್ರಗಳಲ್ಲಿ  ನಾನು ನೋಡಿದ್ದು (ಕೆಲವೇ ದಿನಗಳ ಅಂತರದಲ್ಲಿ-ಮೊನ್ನೆ ಮೊನ್ನೆ  )
 
 
1.ದ ಲೆಜೆಂಡ್ ಆಫ್ ಭಗತ್ ಸಿಂಗ್ -2002
2.23 ಮಾರ್ಚ್ 1931-ಶಹೀದ್-2002
ಅದಕ್ಕೂ ಹಿಂದೆ  2006ರಲ್ಲಿ  ಬಂದ  ರಂಗ್ ದೇ ಬಸಂತಿ ಚಿತ್ರವನ್ನೂ ನೋಡಿದ್ದೆ .
 
ದೇಶದ್ದಲ್ಲಿ ಹೊಸ ಸಂಚಲನ ಮೂಡಿಸಿ  ಯುವಕರನ್ನು ಎಬ್ಬಿಸಿ  ಸ್ವಾತಂತ್ರ್ಯ ಹೋರಾಟಕ್ಕೆ  ಧುಮುಕುವ ಹಾಗೆ ಮಾಡಿದ, ಅಂದು -ಇಂದೂ -ಮುಂದೂ ಯುವಕರ ಸ್ಪೂರ್ತಿ ಆಗಿ-ಭಗತ್ ಸಿಂಗ್ ಅವರನ್ನೇ ತಮ್ ಐಡೆಂಟಿಟಿ ಮಾಡಿಕೊಂಡ ಯುವ ಜನತೆಯ ಆರಾಧಕ-   ಧೀರ-ವೀರ ಹುತಾತ್ಮ ಭಗತ್ ಸಿಂಗ್ ಕುರಿತು ಬಂದ ಈ ಚಿತ್ರಗಳು ಹೇಗಿವೆ ?
 
ಆ ಬಗೆಗೆ ವಿವರಗಳು ಮುಂದಿನ ಭಾಗದಲ್ಲಿ -
 
ಹುತಾತ್ಮ ಭಗತ್ ಸಿಂಗ್  ಅವರ ಜೀವನ ಚರಿತ್ರೆ ಆಧರಿಸಿದ  ಚಲನಚಿತ್ರಗಳು -ಹೇಗಿವೆ? -2
ಶೀರ್ಷಿಕೆಯಲ್ಲಿ .....
ನಿರೀಕ್ಷಿಸಿ 
 
ಚಿತ್ರ ಮೂಲಗಳು:
 
ಭಗತ್ ಸಿಂಗ್ ಅವರ ಕುರಿತು ಬಂದ ಚಿತ್ರಗಳ ಬಗ್ಗೆ:
 
 
ಭಗತ್ ಸಿಂಗ್ ಅವರ ಕುರಿತ ಪೂರ್ಣ ಚಲನ ಚಿತ್ರಗಳು  ಯೂಟೂಬ್ :
 
 
Rating
No votes yet

Comments

Submitted by sathishnasa Wed, 01/23/2013 - 14:58

" ಇತ್ತೀಚಿಗೆ ಹೆಚ್ಚಿದ ಬಹುಪಾಲು ಯುವಕರ ಅಂದಾದುಂದಿ ,ಮೋಜು, ಮಸ್ತಿ, ದುಶ್ಚಟ, ಅಂದು ನಮ್ಮವರು ಮಾಡಿದ ತ್ಯಾಗ , ಸ್ವಾತಂತ್ರ್ಯದ ಬೆಲೆ ತಿಳಿಯದೆ, ದೇಶದ ಭವಿಷ್ಯದ ಬಗ್ಗೆ ಚಿಂತಿಸದೆ ಅಪರಾಧಿ ಚಟುವಟಿಕೆಗಳತ್ತ ವಾಲಿದ್ದು ಇದನ್ನು ನೋಡುವ ನೋಡುತ್ತಿರುವ ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ತನು ಮನ ಧನ ಧಾರೆ ಎರೆದು ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ಆತ್ಮಗಳು ಇಂದಿನ ಭಾರತದ ಸ್ಥಿತಿ ಕಂಡು ಮರುಗದೆ ಇರವೇ?" .....+1 ಒಳ್ಳೆಯ ಮಾಹಿತಿಗೆ ಧನ್ಯವಾದಗಳು ವೆಂಕಟೇಶ್ ರವರೇ ......ಸತೀಶ್

Submitted by venkatb83 Thu, 01/24/2013 - 19:03

In reply to by sathishnasa

ಪ್ರತಿಕ್ರಿಯಿಸಿ ನನ್ನ ಆ ಮಾತುಗಳನ್ನು ಅನುಮೋದಿಸಿದ ಸತೀಶ್ ಅವ್ರೆ ನನ್ನಿ ..
ಶುಭವಾಗಲಿ..

ಈ ಬರಹದ ಮುಂದಿನ/ ಕೊನೆಯ ಭಾಗ ಬಂದಿದೆ -ನೋಡಿ ಓದಿ ಅಭಿಪ್ರಾಯ ದಾಖಲ್ಸೀ....

ಶುಭವಾಗಲಿ..

\|