ಹುತ್ತ - ಲಕ್ಷ್ಮೀಕಾಂತ ಇಟ್ನಾಳ
ಹುತ್ತ
- ಲಕ್ಷ್ಮೀಕಾಂತ ಇಟ್ನಾಳ
ಭೇಟಿಯಾದವು ಹಳೆಯ ಹಲ ನೆನಪುಗಳು ಸಂಜೆ
ಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆ
ನೆನಪುಗಳ ಕೆದಕಿದೆವು ಕಣ್ಣಾದವು ಮಂಜು
ಆರಂಭ ಅಂತ್ಯದಲಿ ನಿನ್ನ ನೆನಪೇ ಬಂದು
ಕನಸೊಂದು ನೆನಪುಗಳ ಕೌದಿಯನು ನೇಯಲು
ನೆನಪುಗಳ ಜೋಡಿಸಲು ಕನಸುಗಳೇ ದಾರ
ನೆನಪೊಂದು ನಿದ್ದೆಯಲಿ ಕನಸೊಂದು ಕಂಡಿರಲು
ಸುರಿದಿಹುದು ಕನಸುಗಳ ವರ್ಷಧಾರೆ
ನೆನಪೊಂದು ಹೇಳಿತು ಎಲ್ಲ ಬದಲಾದಹಾಗಿದೆ
ಮೊದಲಿನಾ ಗೆಳೆತನ ಮರೆಯಾದಹಾಗಿದೆ
ನೆನಪೇ ಇಲ್ಲೀಗ ಕನಸು ಬೀಳುವುದೇ ಇಲ್ಲ
ನೆನಪುಗಳು ಉರಿಯುತ್ತ ಉಳಿಯುವುದೇ ಎಲ್ಲ
ನೆನಪುಗಳ ಕನಸುಗಳ ಸುಟ್ಟು ಹೊರಬಂದು
ಬದುಕಿಹೆವು ಒಂದೊಂದು ಹುತ್ತದಲಿ ನಾವೆಲ್ಲ
ಸಂಕುಚಿತ ಮನಸಲ್ಲಿ ಕಹಿಯಾದ ಬದುಕಲ್ಲಿ
ನಾನು ನಾನಾಗಿಲ್ಲ ಅವನು ಅವನಾಗಿಲ್ಲ
ಭೇಟಿಯಾದವು ಹಳೆಯ ಹಲ ನೆನಪುಗಳು ಸಂಜೆ
ಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆ
ನೆನಪುಗಳ ಕೆದಕಿದೆವು ಕಣ್ಣಾದವು ಮಂಜು
ಆರಂಭ ಅಂತ್ಯದಲಿ ನಿನ್ನ ನೆನಪೇ ಬಂದು
Rating
Comments
ನೆನಪುಗಳೇ ಹಾಗೆ! ಭಾವಜೀವಿಗಳಿಗೆ
ನೆನಪುಗಳೇ ಹಾಗೆ! ಭಾವಜೀವಿಗಳಿಗೆ ಅವೇ ಆಹಾರ!!
In reply to ನೆನಪುಗಳೇ ಹಾಗೆ! ಭಾವಜೀವಿಗಳಿಗೆ by kavinagaraj
ಹುತ್ತ
ಶ್ರೀ ಕವಿ ನಾಗರಾಜ್ ರವರೇ, ಕವನಕ್ಕೆ ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ - ಕವನ
ಗೆಳೆಯರಾದ ರಾಮ್ ಪ್ರಸಾದ್, ದಿನೇಶ ದಿನು, ಜಯಪ್ರಕಾಶ ಪುತ್ತೂರ ರವರೇ,
ಕವನಕ್ಕೆ ಫೇಸ್ ಬುಕ್ ಮುಖಾಂತರ ಮೆಚ್ಚುಗೆ ನೀಡಿದ್ದಕ್ಕೆ ಧನ್ಯವಾದಗಳು.
In reply to ನೆನಪುಗಳೇ ಹಾಗೆ! ಭಾವಜೀವಿಗಳಿಗೆ by kavinagaraj
ಹುತ್ತ
great.I wish I could write like you.- ವಿಠ್ಠಲ ಕಟ್ಟಿ.
ಗೆಳೆಯ ವಿಠ್ಠಲ ಕಟ್ಟಿರವರೇ, ಫೇಸ್ ಬುಕ್ ಮುಖಾಂತರ ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಲಕ್ಷ್ಮೀಕಾಂತ ಇಟ್ನಾಳ ರ ಧನ್ಯವಾದಗಳು.
ಲಕ್ಮಿಕಾಂತ ಇಟ್ನಾಳ್ ರವರಿಗೆ
ಲಕ್ಮಿಕಾಂತ ಇಟ್ನಾಳ್ ರವರಿಗೆ ವಂದನೆಗಳು
' ಹುತ್ತ ' ಒಂದು ಸಮರ್ಥ ಕವನ, ನಮ್ಮ ಬದುಕಿಗೆ ನೆನಪುಗಳು ಮತ್ತು ಕನಸುಗಳೆ ಆಧಾರ, ಅವಿಲ್ಲದ ಬದುಕು ಬದುಕಲ್ಲ ಅದು ಬದುಕಿದ್ದೂ ಸಂತ್ತಂತಹ ಸ್ಥಿತಿ. ಎಲ್ಲ ಮಾನವ ಜೀವಿಗಳಿಗೆ ಅದರಲ್ಲೂ ವಿಶೇಷವಾಗಿ ಯುವ ಸಮುದಾಯಕ್ಕೆ ನಿಮ್ಮ ಕವನ ಒಂದು ಸಾರ್ಥಕ ಬದುಕಿನ ಟಿಪ್ಸ್. ಉತ್ತಮ ಗಹನ ಅರ್ಥದ ಕವನ ನೀಡಿದ್ದಕ್ಕೆ ಧನ್ಯವಾದಗಳು.
In reply to ಲಕ್ಮಿಕಾಂತ ಇಟ್ನಾಳ್ ರವರಿಗೆ by H A Patil
ಹುತ್ತ
ಶ್ರೀ ಹನುಮಂತ ಅನಂತ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಉತ್ತಮ ಕವನವನ್ನು ವಿಮರ್ಶಿಸಿ ಉತ್ತಮ ಪ್ರತಿಕ್ರಿಯೆ ನೀಡಿ ಕವನದ ಘನತೆಯನ್ನು ಹೆಚ್ಚಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ
ಗೆಳೆಯ ಕ್ಯಾಪ್ಟನ್ ಸಿ. ಎಸ್. ಆನಂದ ರವರೇ, ಫೇಸ್ ಬುಕ್ ಮುಖಾಂತರ ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ
ಗೆಳೆಯ ನಾ ನೇ ಚಂದು ರವರೇ , ಫೇಸ್ ಬುಕ್ ಮುಖಾಂತರ ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ
Anil Chandrika Talikoti ಚೆನ್ನಾಗಿದೆ , enjoyed it.
ಗೆಳೆಯ ಅನಿಲ್ ಚಂದ್ರಿಕಾ ತಾಳಿಕೋಟಿ ರವರೇ,
ಕವನಕ್ಕೆ ಮೆಚ್ಚುಗೆಯನ್ನು ಫೇಸ್ ಬುಕ್ ಮುಖಾಂತರ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ
ಗೆಳೆಯರಾದ ಲತಾ ದಾಮ್ಲೆ, ಅಖಿಲ ಕುಮಾರ ಗುಪ್ತಾ, ಶಂಕರ ದೇವಾಡಿಗ ಕೆಂಚನೂರ, ಜಯಪ್ರಕಾಶ ಪುತ್ತೂರ, ರವರಿಗೆ,
ಫೇಸ್ ಬುಕ್ ಮುಖಾಂತರ ಮೆಚ್ಚುಗೆ ಸೂಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ
ಗೆಳೆಯರಾದ ರವಿ ರವಿಶಂಕರ, ಹಿಪ್ಪರಗಿ ಸಿದ್ಧರಾಮ, ಅಶೋಕ ಜಿ.ಸಿ ರವರೆ,
ಫೇಸ್ ಬುಕ್ ಮುಖಾಂತರ ಕವನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ
ಗೆಳೆಯರಾದ ಮಹೇಶಗೌಡ, ನಾಗರಾಜ್ ಗೌಡ, ಅಚ್ಚುತ್ ಜೋಶಿ, ಹರಿಶ್ಷಂದ್ರ ಭಟ್ , ಪ್ರಶಾಂತ ಅಮ್ಮು ರವರೇ.
ಹುತ್ತ ಕವನಕ್ಕೆ ಮೆಚ್ಚುಗೆ ಸೂಚಿಸಿ ಫೇಸ್ ಬುಕ್ ಮುಖಾಂತರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
In reply to ಹುತ್ತ by lpitnal@gmail.com
ಹುತ್ತ- ಕವನ
Sathvik Nimma Snehita DXer ಹಳೆಯ ಮೌಲ್ಯಗಳನ್ನು ವರ್ತಮಾನದಲಿ ಹುಡುಕುವ ಪ್ರಯತ್ನ.
ಗೆಳೆಯರಾದ ಸಾತ್ಮಿಕರವರೇ, ಫೇಸ್ ಬುಕ್ ಮುಖಾಂತರ ಕವನಕ್ಕೆ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
In reply to ಹುತ್ತ- ಕವನ by lpitnal@gmail.com
ಹುತ್ತ- ಕವನ
ಗೆಳೆಯರಾದ ವಿ. ಆರ್. ಭಟ್ಟ್ ರವರೇ,
ಫೇಸ್ ಬುಕ್ ಮುಖಾಂತರ ಮೆಚ್ಚುಗೆ ಸೂಚಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.
In reply to ಹುತ್ತ- ಕವನ by lpitnal@gmail.com
ಹುತ್ತ - ಕವನ
ಗೆಳೆಯರಾದ ಚಿನ್ಮಯ ರಮೇಶ, ಮಹೇಶ ಬಾಬು, ಅವಿನ್ ಶೆಟ್ಟಿ ರವರೇ,
ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ವವಾದಗಳು.
ನೆನಪುಗಳ ಕವನ ಮಧುರ.
ಇತ್ನಾಳರೆ,
ನೆನಪುಗಳ ಕವನ ಮಧುರ.
ಆದರೆ ಈ"ಫೇಸ್ ಬುಕ್ಕಿ"ಗಳನ್ನು ಇಲ್ಲಿ ನೆನಪಿಸುವುದು ಕಿರಿಕಿರಿ ಅನಿಸುವುದು. :(
In reply to ನೆನಪುಗಳ ಕವನ ಮಧುರ. by ಗಣೇಶ
ಹುತ್ತ- ಕವನ
ಗೆಳೆಯ ಗಣೇಶ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ಕೆಲವೊಂದು ಎಥಿಕ್ಷ್ ನನಗೆ ಇನ್ನೂ ಅರ್ಥವಾಗುತ್ತಿಲ್ಲ. ತಮ್ಮ ಸಲಹೆಗೆ ಸ್ವಾಗತ. ಫೇಸ್ ಬುಕ್ ಗೆಳೆಯರಿಗೆ ಸಂಪದದ ಪರಿಚಯವಾಗಲಿ, ಸಂಪದದಲ್ಲಿ ಅವರೂ ತಮ್ಮ ಕೊಡುಗೆ ನೀಡಲಿ ಎಂಬುದು ಆಶಯ. ಆದರೂ ಅದರಿಂದ ಕಿರಿಕಿರಿಯಾಗುವುದಾದರೆ ಕ್ಷಮಿಸಿ, ತಮ್ಮ ಸಲಹೆಗೆ ಸ್ವಾಗತ. ಇಲ್ಲಿಯ ಎಥಿಕ್ಷ್ ಪಾಲಿಸಲೇಬೇಕಲ್ಲವೆ. ಧನ್ಯವಾದಗಳು.
In reply to ಹುತ್ತ- ಕವನ by lpitnal@gmail.com
ಇತ್ನಾಳರೆ,
ನಿಮ್ಮ ಕವನದ "ನೆನಪು"ಗಳನ್ನು,ಈ ಫೇಸ್ಬುಕ್ನ "ನೆನಪು"ಗಳನ್ನು ಹೋಲಿಸಿ ಸುಮ್ಮನೆ ಬರೆದೆ. ಬೇಸರಿಸದಿರಿ.>>> "ಸಂಪದದಲ್ಲಿ ಅವರೂ ತಮ್ಮ ಕೊಡುಗೆ ನೀಡಲಿ ಎಂಬುದು ಆಶಯ." ನಿಮ್ಮ ಆಶಯ ನನ್ನದೂ ಸಹ.
@ಇಟ್ನಾಳ್ ಅವ್ರೆ
"ನೆನಪೊಂದು ಹೇಳಿತು ಎಲ್ಲ ಬದಲಾದಹಾಗಿದೆ
ಮೊದಲಿನಾ ಗೆಳೆತನ ಮರೆಯಾದಹಾಗಿದೆ
ನೆನಪೇ ಇಲ್ಲೀಗ ಕನಸು ಬೀಳುವುದೇ ಇಲ್ಲ
ನೆನಪುಗಳು ಉರಿಯುತ್ತ ಉಳಿಯುವುದೇ ಎಲ್ಲ"
ಸಖತ್ ಬರಹ ಮಾರಾಯ್ರೇ...!
ನನ್ನಿ
ಶುಭವಾಗಲಿ..
\|
In reply to @ಇಟ್ನಾಳ್ ಅವ್ರೆ by venkatb83
ಹುತ್ತ- ಕವನ
ಗೆಳೆಯ ವೆಂಕಟ್ ಬಿ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹುತ್ತ -ಕವನಕ್ಕೆ ತಮ್ಮಂಥ ಸೂಕ್ಷ್ಮ ಮತಿಯ ಲೇಖಕರು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದು ಕವನದ ಘನತೆಯನ್ನು ಹೆಚ್ಚಿಸಿದೆ. ಧನ್ಯವಾದಗಳು.
ಹುತ್ತ
ಹುತ್ತ ಉತ್ತಮ ಭಾವನೆ ಪ್ರತಿಬಿಂಬಿಸುವ ಕವನ 'ಇಲ್ಲಿ ನಾನು ನಾನಗಿಲ್ಲ ಅವನು ಅವನಾಗಿಲ್ಲ ' ಸತ್ಯ,
ಒಮ್ಮೆಮ್ಮೆ ನಾನು ಅವನಾಗುತ್ತೆನೆ, ಇನ್ನೊಮ್ಮೆ ಅವನು ನಾನಾಗುತ್ತಾನೆ ಅಲ್ಲವೆ.
.
ಹಿಂದೊಮ್ಮೆ ಹುತ್ತ ಶೀರ್ಷಿಕೆಯಲ್ಲಿ ರಾಮಾನುಜಂ ಎಂಬವರು ಬರೆದ ಕವನ ಓದಿದ್ದೆ,
ಹತ್ತಿರ ಹತ್ತಿರ ಅರ್ಥ ಹೀಗೆ ನೆನಪಿದೆ, ವಾಲ್ಮೀಕಿ ಎಂಬ ತಪಸ್ವಿಯ ಸುತ್ತ ಹುತ್ತ ಬೆಳೆದಿತ್ತು, ಆದರೆ ನಾನು ಹುತ್ತದ ಸುತ್ತ ಬೆಳೆಯುತ್ತಿದ್ದೇನೆ
In reply to ಹುತ್ತ by partha1059
ಹುತ್ತ- ಕವನ
ಆತ್ಮೀಯ ಗೆಳೆಯ ಪಾರ್ಥರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತುಂಬ ಚನ್ನಾಗಿ ವಿಶ್ಲೇಷಿಸಿದ್ದೀರಿ. ತಮ್ಮ ನೆನಪಿನಾಳದಿಂದ ರಾಮಾನುಜಂ ರವರು ಬರೆದ ಇದೇ ಶೀರ್ಷಿಕೆಯ ಕವನವನ್ನು ಕೂಡ ಪ್ರಸ್ತಾಪಿಸಿ, ''ವಾಲ್ಮೀಕಿ ಮಹರ್ಷಿಯನ್ನು ನೆನೆದು, ಆ ಹುತ್ತನ್ನು ಪ್ರಸ್ತಾಪಿಸಿ ಅಂತಹ ಹುತ್ತದ ಸುತ್ತ ಬೆಳೆಯುತ್ತಿದ್ದೇವೆ ನಾವೆಲ್ಲ '' ವಿಮರ್ಶೆ ಖುಷಿ ನೀಡಿತು. ಹಿಂದಿಯ 'ಕಾಗಜ್ ಕೆ ಫೂಲ್' ಚಿತ್ರದ ಎಸ್ ಡಿ ಬರ್ಮನ್ ಸಂಯೋಜನೆ, ಕೈಫಿ ಆಜ್ಮಿ ಹಾಡನ್ನು ಗೀತಾ ದತ್ ಹಾಡಿಲ್ಲವೆ! ಆ ಹಾಡು, ' ವಖ್ತ್ ನೇ ಕಿಯಾ , ಕ್ಯಾ ಹಸೀಂ ಸಿತಮ್, ತುಮ್ ರಹೇ ನ ತುಮ್ , ಹಮ್ ರಹೇ ನ ಹಮ್'' ಸಾಲುಗಳು ಕವನಕ್ಕೆ ಸ್ಪೂರ್ತಿ ಗೆಳೆಯರೇ, ತಮ್ಮ ಪ್ರತಿಕ್ರಿಯೆಗೆ ಧನ್ವವಾದಗಳು.